ಉಡುಪಿ [ಡಿ.29]: ನಾಡು ಕಂಡ ಶ್ರೇಷ್ಠ ಸಂತರಾದ ಪೇಜಾವರ ಶ್ರೀಗಳು ದೈವಾಧೀನರಾಗಿದ್ದಾರೆ. ತಮ್ಮ 89 ನೇ ವಯಸ್ಸಿನಲ್ಲಿ ಅವರ ಕೊನೆಯ ಆಸೆಯಂತೆ ಕೃಷ್ಣ ಮಠದಲ್ಲಿ ಕೃಷ್ಣೈಕ್ಯರಾಗಿದ್ದಾರೆ. 

ಪೇಜಾವರ ವಿಶ್ವೇಶ ತೀರ್ಥರ ಬಗ್ಗೆ ಹಲವು ವಿಶೇಷಗಳಿದ್ದು, ಒಟ್ಟು ಐದು ಪರ್ಯಾಯಗಳನ್ನು ಕಂಡಂತ ವೈಶಿಷ್ಟ್ಯ ಶ್ರೀಗಳದ್ದಾಗಿದೆ. 

ಶ್ರೀ ಕೃಷ್ಣ ಪೂಜೆಯ 2 ವರ್ಷಗಳ ಅಧಿಕಾರ ಹಸ್ತಾಂತರ 8 ಶತಮಾನಗಳಿಂದ ನಡೆದುಕೊಂಡು ಬಂದ ನಂಬಿಕೆಯು ಈಗಲೂ ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಮುಂದುವರಿದಿದೆ. 

ಪರ್ಯಾಯ ಎಂದರೇನು : ದ್ವೈತ ಮತದ ಸ್ಥಾಪಕ ಮಧ್ವಾಚಾರ್ಯರ ಕೊಡುಗೆಯಾದ ಅಕ್ಷಯ ಪಾತ್ರೆ, ಸಟ್ಟುಗ, ಗರ್ಭಗುಡಿಯ ಕೀಲಿಕೈ ಪಡೆದು ಪೀಠವನ್ನು ಏರಿ ಎರಡು ವರ್ಷ ಕೃಷ್ಣ ಮಠದ ಪೂಜಾ ಪ್ರಕ್ರಿಯೆಗಳನ್ನು ನೋಡಿಕೊಳ್ಳುವುದಾಗಿದೆ. 

1238 ರಲ್ಲಿ ಜನಿಸಿದ್ದ ಮಧ್ವಾಚಾರ್ಯರು ದ್ವಾರಕೆಯಿಂದ ಉಡುಪಿಗೆ ಬಂದು ಶ್ರೀ ಕೃಷ್ಣನನ್ನು 47ನೇ ವಯಸ್ಸಲ್ಲಿ 1285ರಲ್ಲಿ ಸ್ಥಾಪಿಸಿದ್ದರು.  ಅಂದಿನಿಂದಲೇ ಯತಿಗಳನ್ನು ನಿಯೋಜಿಸಿ ಪೂಜೆ ವ್ಯವಸ್ಥೆ ಮಾಡಿದ್ದರು. ಇದರ ಮುಂದುವರಿದ ಸಂಪ್ರದಾಯವನ್ನು ನಡೆಸಿಕೊಂಡು ಬಂದ ಶ್ರೀ ಕೃಷ್ಣ ಮಠದಲ್ಲಿ ವಿಶ್ವೇಶ ತೀರ್ಥರು 5 ಪರ್ಯಾಯ ಮಾಡಿದ್ದರು. 

ಪೇಜಾವರ ಶ್ರೀಗಳ ಪರ್ಯಾಯದ ವರ್ಷಗಳು

*1952 ರಿಂದ 1954
*1968 ರಿಂದ 1970
*1984ರಿಂದ 1986
*2000ರಿಂದ 2002
*2016ರಿಂದ 2018

2018 ರಲ್ಲಿ ಪೇಜಾವರ ಶ್ರೀಗಳು ಪಲಿಮಾರು ಶ್ರೀ ವಿದ್ಯಾಧೀಶ ತೀರ್ಥರಿಗೆ 2ನೇ ಪರ್ಯಾಯದ  ಅಧಿಕಾರವನ್ನು 2018 ಜನವರಿ 18 ರಂದು ಹಸ್ತಾಂತರಿಸಿದ್ದರು. 

ಡಿಸೆಂಬರ್ 29ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ