Asianet Suvarna News Asianet Suvarna News

ಇಂದಿನಿಂದ ಲಾಲ್‌ಬಾಗ್ ಫಲಪುಷ್ಪ ಪ್ರದರ್ಶನ; ಹೂಗಳಲ್ಲಿ ಅನಾವರಣಗೊಳ್ಳಲಿದೆ ಅಂಬೇಡ್ಕರ್ ಜೀವನಗಾಥೆ!

ಸಸ್ಯಕಾಶಿ ಲಾಲ್‌ಬಾಗ್‌ನಲ್ಲಿ ಈ ಬಾರಿ ಸ್ವಾತಂತ್ರೋತ್ಸವದ ಅಂಗವಾಗಿ ಆಗಸ್ಟ್ 8 ರಿಂದ 19ರ ವರೆಗೆ ಫಲಪುಷ್ಪ ಪ್ರದರ್ಶನ ನಡೆಯಲಿದ್ದು, ಇಂದು ಬೆಳಗ್ಗೆ 10.30ಕ್ಕೆ 216 ನೇ ಫಲಪುಷ್ಪ ಪ್ರದರ್ಶನ ಕಾರ್ಯಕ್ರಮವನ್ನು ಸಿಎಂ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ ಉದ್ಘಾಟಿಸಲಿದ್ದಾರೆ.

Fruit and flower show at Lalbagh from today at bengaluru online ticke booking rav.
Author
First Published Aug 8, 2024, 9:08 AM IST | Last Updated Aug 8, 2024, 11:22 AM IST

ಬೆಂಗಳೂರು (ಆ.8): ಸಸ್ಯಕಾಶಿ ಲಾಲ್‌ಬಾಗ್‌ನಲ್ಲಿ ಈ ಬಾರಿ ಸ್ವಾತಂತ್ರೋತ್ಸವದ ಅಂಗವಾಗಿ ಆಗಸ್ಟ್ 8 ರಿಂದ 19ರ ವರೆಗೆ ಫಲಪುಷ್ಪ ಪ್ರದರ್ಶನ ನಡೆಯಲಿದ್ದು, ಇಂದು ಬೆಳಗ್ಗೆ 10.30ಕ್ಕೆ 216 ನೇ ಫಲಪುಷ್ಪ ಪ್ರದರ್ಶನ ಕಾರ್ಯಕ್ರಮವನ್ನು ಸಿಎಂ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ ಉದ್ಘಾಟಿಸಲಿದ್ದಾರೆ.

ಕಳೆದ ಬಾರಿ ಫಲಪುಷ್ಪ ಪ್ರದರ್ಶನವನ್ನು ತೋಟಗಾರಿಕೆ ಇಲಾಖೆ ಸುಮಾರು ಎರಡು ಕೋಟಿ ರೂ. ವೆಚ್ಚದಲ್ಲಿ ಆಯೋಜಿಸಿತ್ತು. ಕರ್ನಾಟಕಕ್ಕೆ ಸಾಕಷ್ಟುಕೊಡುಗೆ ನೀಡಿದ ಕೆಂಗಲ್‌ ಹನುಮಂತಯ್ಯ ಅವರ ಕುರಿತಾದ ಪರಿಕಲ್ಪನೆಯಡಿ ಕಾರ್ಯಕ್ರಮ ಮೂಡಿಬಂದಿತ್ತು. ಈ ಬಾರಿ ಸಂವಿಧಾನ ಶಿಲ್ಪಿ ಡಾ ಬಿಆರ್ ಅಂಬೇಡ್ಕರ್ ಅವರ ಜೀವನಗಾಥೆ, ಸಂಸತ್ ಭವನದ ಕಲಾಕೃತಿ ಹೂಗಳಲ್ಲಿ ಅನಾವರಣಗೊಳ್ಳಲಿದೆ. ಅಂಬೇಡ್ಕರ್ ಮೊಮ್ಮಗ ಭೀಮರಾವ್ ಯಶ್ವಂತ್ ಅಂಬೇಡ್ಕರ್ ಕಾರ್ಯಕ್ರಮದ ಮುಖ್ಯ ಅತಿಥಿಯಾಗುತ್ತಿರುವುದು ಈ ಬಾರಿಯ ವಿಶೇಷತೆಯಾಗಿದೆ.

ಬಿಜೆಪಿ-ಜೆಡಿಎಸ್ ನನ್ನ ಟಾರ್ಗೆಟ್ ಮಾಡಿವೆ; ಅವರ ಎಲ್ಲ ಹಗರಣ ಸಮಾವೇಶದಲ್ಲಿ ಬಿಚ್ಚಿಡುತ್ತೇನೆ: ಸಿಎಂ

ಸುಮಾರು 3.6 ಲಕ್ಷ ಗುಲಾಬಿ, 2.4 ಲಕ್ಷ ಸೇವಂತಿಯಿಂದ ಅಲಂಕೃತಗೊಂಡಿರುವ ಸಂಸತ್ ಕಲಾಕೃತಿ. ಗಾಜಿನ ಮನೆಯ ಬಲಭಾಗದಲ್ಲಿ  ಮಧ್ಯ ಪ್ರದೇಶದ ಮಹೌನ್ ನಲ್ಲಿರುವ ಅಂಬೇಡ್ಕರ್ ಜನ್ಮ ಸ್ಥಳದ ಸ್ಮಾರಕ. 3.4 ಲಕ್ಷ  ಪುಷ್ಪಗಳಲ್ಲಿ ಅಂಬೇಡ್ಕರ್ ಜನ್ಮ ಸ್ಥಳದ ಸ್ಮಾರಕ ಅಲಂಕೃತವಾಗಿದೆ. ಇದಕ್ಕಾಗಿ ಹೊರರಾಜ್ಯಗಳಿಂದ 8.6 ಲಕ್ಷ ಹೂವುಗಳನ್ನು ರಾಜಧಾನಿಗೆ ತರಲಾಗಿತ್ತು. 12 ದಿನಗಳ ಕಾಲ ನಡೆಯಲಿರುವ ಕಲರ್ ಫುಲ್ ಪುಷ್ಪ ಪ್ರದರ್ಶನಕ್ಕೆ ಈ ಬಾರಿ 2.80 ಕೋಟಿ ವೆಚ್ಚ ಮಾಡಲಾಗಿದೆ. 

ಆನ್‌ಲೈನ್‌ನಲ್ಲಿ ಟಿಕೆಟ್ ವ್ಯವಸ್ಥೆ:

ಈ ಬಾರಿ ಫಲಪುಷ್ಪ ಪ್ರದರ್ಶನ ವೀಕ್ಷಣೆಗೆ ಬರುವ ಜನರಿಗಾಗಿ ಆನ್‌ಲೈನ್ ಟಿಕೆಟ್ ವ್ಯವಸ್ಥೆ ಮಾಡಿರುವುದು ಸುಲಭವಾಗಿ ಟಿಕೆಟ್ ಖರೀದಿಸಬಹುದಾಗಿದೆ. ಹಾಗಾದರೆ ಟಿಕೆಟ್ ದರ ಎಷ್ಟು? ಟಿಕೆಟ್ ದರ ಸಂಪೂರ್ಣ ವಿವರ ಕೆಳಗೆ ಕೊಡಲಾಗಿದೆ.

ವಯಸ್ಕರಿಗೆ ಟಿಕೆಟ್ ದರ 80 ರೂ ಇರಲಿದೆ. ಮಕ್ಕಳಿಗೆ 30 ರೂ, ರಜ ದಿನಗಳಲ್ಲಿ ವಯಸ್ಕರಿಗೆ 100 ರೂ ಇದೆ. ಇನ್ನು ಶಾಲಾ ಮಕ್ಕಳಿಗೆ ಸಂಪೂರ್ಣ ಉಚಿತವಾಗಿದೆ. ಉಳಿದಂತೆ ಇತರೆ  ಮಕ್ಕಳಿಗೆ 30 ರೂಪಾಯಿ ಎಂಟ್ರೆನ್ಸ್ ಫೀಸ್ ಇರಲಿದೆ. 

ನಾನು ತಪ್ಪು ಮಾಡಿಲ್ಲ: ಗೌರ್ನರ್‌ಗೆ ಸಿಎಂ 70 ಪುಟದ ದೀರ್ಘ ಉತ್ತರ

ಆರೋಗ್ಯ ವ್ಯವಸ್ಥೆ:

ಫಲಪುಷ್ಪ ಪ್ರದರ್ಶನ ವೀಕ್ಷಣೆಗೆ ಬರುವ ಜನರ ತುರ್ತು ಆರೋಗ್ಯ ಸಂದರ್ಭದಲ್ಲಿ ಚಿಕಿತ್ಸೆಗಾಗಿ 6 ಆಂಬುಲೆನ್ಸ್ ವ್ಯವಸ್ಥೆ ಮಾಡಲಾಗಿದೆ. ಕುಡಿಯುವ ನೀರಿಗೆ ಸುಮಾರು 18 ಕಡೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ. ಡೆಂಘೀ ಪ್ರಕರಣಗಳು ಹೆಚ್ಚಳವಾಗಿರುವ ಹಿನ್ನೆಲೆ ಸ್ವಚ್ಛತೆಗೆ ಈ ಬಾರಿ ಹೆಚ್ಚುಆದ್ಯತೆ ನೀಡಲಾಗಿದೆ. ಪ್ಲಾಸ್ಟಿಕ್ ಬಳಕೆ ಸಂಪೂರ್ಣ ನಿಷೇಧಿಸಲಾಗಿದೆ. ಭದ್ರತಾ ವ್ಯವಸ್ಥೆಯು ಕಲ್ಪಿಸಿದ್ದು ಸುಮಾರು 139 ಕಡೆ ಸಿಸಿಟಿವಿ ಕಣ್ಗಾವಲಿರಲಿದೆ. ಇದರ ಜೊತೆಗೆ 400ಕ್ಕೂ ಹೆಚ್ಚು ಪೊಲೀಸರು, ಬಿಬಿಎಂಪಿ ಮಾರ್ಷಲ್‌ ಹಾಗೂ ಸಿಬ್ಬಂದಿ ನಿಯೋಜಿಸಲಾಗಿದ್ದು. ಯಾವುದೇ ಅತಂಕವಿಲ್ಲದೆ ಫಲಪುಷ್ಪ ಪ್ರದರ್ಶನ ವೀಕ್ಷಿಸಬಹುದಾಗಿದೆ.

Latest Videos
Follow Us:
Download App:
  • android
  • ios