ಬೆಂಗಳೂರಿನ ಆರ್‌.ಟಿ.ನಗರದ ಮಠದಹಳ್ಳಿಯವನು. ಆರಂಭದಲ್ಲಿ ಕುರಿ ವ್ಯಾಪಾರ ಮಾಡಿಕೊಂಡಿದ್ದ ಜುನೈದ್‌, ಸ್ಥಳೀಯವಾಗಿ ಅಪರಾಧ ಚಟುವಟಿಕೆಗಳಲ್ಲಿ ಸಹ ಸಕ್ರಿಯವಾಗಿದ್ದ. ಹಣಕಾಸು ವಿಚಾರವಾಗಿ 2017ರಲ್ಲಿ ತನ್ನ ಪರಿಚಿತ ನೂರ್‌ ಅಹಮ್ಮದ್‌ನನ್ನು ಕೊಲೆ ಮಾಡಿ ಪರಪ್ಪನ ಅಗ್ರಹಾರ ಜೈಲು ಸೇರಿದ್ದ. ಆಗ ಆತನಿಗೆ ಎಲ್‌ಇಟಿ ಶಂಕಿತ ಉಗ್ರ ನಸೀರ್‌ ಪರಿಚಯವಾಗಿದೆ.

ಬೆಂಗಳೂರು (ಜು.20) : 

1.ಟಿ.ನಸೀರ್‌

ಕೇರಳ ರಾಜ್ಯದ ಮಲಪ್ಪುರಂ ಜಿಲ್ಲೆಯವನು. ಪಾಕಿಸ್ತಾನ ಮೂಲದ ಲಷ್ಕರ್‌-ಎ-ತೊಯ್ಬಾ ಉಗ್ರ ಸಂಘಟನೆ ಜತೆ ನಿಕಟ ನಂಟು. ಕೇರಳ ರಾಜ್ಯದ ರಾಜಕಾರಣಿ ಹಾಗೂ ಶಂಕಿತ ಉಗ್ರ ಅಬ್ದುಲ್‌ ನಾಸಿರ್‌ ಮದನಿಯ ಆಪ್ತ ಬಂಟ. 2008ರಲ್ಲಿ ಬೆಂಗಳೂರಿನ ಸರಣಿ ಬಾಂಬ್‌ ಸ್ಫೋಟ ಕೃತ್ಯದಲ್ಲಿ ಪ್ರಮುಖ ಸಂಚುಕೋರನಾಗಿದ್ದ. ಈ ಕೃತ್ಯ ಎಸಗಿದ ಬಳಿಕ ನಸಿರ್‌ ಕರೆ ಮಾಡಿದ್ದು ಮದನಿ ಪಾಲಿಗೆ ಕಂಟಕವಾಗಿತ್ತು. ಸರಣಿ ಬಾಂಬ್‌ ಸ್ಫೋಟದ ಬಳಿಕ ಬಾಂಗ್ಲಾದೇಶದಲ್ಲಿ ತಲೆಮರೆಸಿಕೊಂಡಿದ್ದ ನಸೀರ್‌ನನ್ನು 2009ರಲ್ಲಿ ಸ್ಥಳೀಯರು ಪೊಲೀಸರು ಬಂಧಿಸಿದ್ದರು. ಆನಂತರ ಬಾಂಗ್ಲಾದೇಶದಿಂದ ಗಡಿಪಾರಾದ ನಸೀರ್‌ನನ್ನು ಬೆಂಗಳೂರು ಪೊಲೀಸರು ಬಂಧಿಸಿ ಕರೆತಂದಿದ್ದರು. ಕೇರಳ ಹಾಗೂ ಬೆಂಗಳೂರು ಸೇರಿದಂತೆ ದೇಶದ ವಿವಿಧೆಡೆ ನಡೆದ ಭಯೋತ್ಪಾದಕ ಕೃತ್ಯಗಳಲ್ಲಿ ನಸೀರ್‌ ಪಾತ್ರ ಪತ್ತೆಯಾಗಿದೆ. ಹಲವು ಪ್ರಕರಣಗಳಲ್ಲಿ ಆತ ಜೈಲು ಶಿಕ್ಷೆಗೆ ಸಹ ಗುರಿಯಾಗಿದ್ದಾನೆ.

2.ಮಹಮ್ಮದ್‌ ಜುನೈದ್‌

ಬೆಂಗಳೂರಿನ ಆರ್‌.ಟಿ.ನಗರದ ಮಠದಹಳ್ಳಿಯವನು. ಆರಂಭದಲ್ಲಿ ಕುರಿ ವ್ಯಾಪಾರ ಮಾಡಿಕೊಂಡಿದ್ದ ಜುನೈದ್‌, ಸ್ಥಳೀಯವಾಗಿ ಅಪರಾಧ ಚಟುವಟಿಕೆಗಳಲ್ಲಿ ಸಹ ಸಕ್ರಿಯವಾಗಿದ್ದ. ಹಣಕಾಸು ವಿಚಾರವಾಗಿ 2017ರಲ್ಲಿ ತನ್ನ ಪರಿಚಿತ ನೂರ್‌ ಅಹಮ್ಮದ್‌ನನ್ನು ಕೊಲೆ ಮಾಡಿ ಪರಪ್ಪನ ಅಗ್ರಹಾರ ಜೈಲು ಸೇರಿದ್ದ. ಆಗ ಆತನಿಗೆ ಎಲ್‌ಇಟಿ ಶಂಕಿತ ಉಗ್ರ ನಸೀರ್‌ ಪರಿಚಯವಾಗಿದೆ. 2020ರಲ್ಲಿ ರಕ್ತಚಂದನ ಸಾಗಾಣಿಕೆ ಕೃತ್ಯದಲ್ಲೂ ಜುನೈದ್‌ ಜೈಲು ಸೇರಿದ್ದ. ಆಗ ಜಾಮೀನು ಪಡೆದು ಹೊರಬಂದವನು ದೇಶ ತೊರೆದ. ಸದ್ಯ ಅಪ್ಘಾನಿಸ್ತಾನದಲ್ಲಿದ್ದಾನೆ ಎಂಬ ಶಂಕೆ ಇದೆ. ನಸೀರ್‌ ಸೂಚನೆ ಮೇರೆಗೆ ಬೆಂಗಳೂರಿನ ವಿವಿಧೆಡೆ ವಿಧ್ವಂಸಕ ಕೃತ್ಯಕ್ಕೆ ಸಂಚು ರೂಪಿಸಿದ್ದ.

ಕುರಿ ವ್ಯಾಪಾರಿಯೀಗ ಮೋಸ್ಟ್‌ ವಾಂಟೆಡ್‌ ಉಗ್ರ: ಬೆಂಗ್ಳೂರಲ್ಲಿ ಬಂಧಿತ ಉಗ್ರರಿಗೆ ಇವನೇ ಗುರು..!

3.ಸೈಯದ್‌ ಸುಹೇಲ್‌ ಖಾನ್‌

ಮೆಕ್ಯಾನಿಕ್‌ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ಸುಹೇಲ್‌, 2017ರಲ್ಲಿ ನೂರ್‌ ಅಹಮ್ಮದ್‌ ಕೊಲೆಗೆ ಜುನೈದ್‌ಗೆ ಸಾಥ್‌ ಕೊಟ್ಟಿದ್ದ. ಆಗ ಜೈಲು ಸೇರಿದಾಗ ಎಲ್‌ಇಟಿ ಶಂಕಿತ ಉಗ್ರ ನಸೀರ್‌ ಸಂಪರ್ಕಕ್ಕೆ ಬಂದಿದ್ದ. ಬಳಿಕ ಜುನೈದ್‌ ವಿದೇಶಕ್ಕೆ ಪರಾರಿಯಾದ ನಂತರ ಜುನೈದ್‌ ಸೂಚನೆ ಮೇರೆಗೆ ಬೆಂಗಳೂರಿನ ಭಯೋತ್ಪಾದಕ ಚಟುವಟಿಕೆಗಳಿಗೆ ಸುಹೇಲ್‌ ಉಸ್ತುವಾರಿ ವಹಿಸಿದ್ದ. ಸುಲ್ತಾನ್‌ ಪಾಳ್ಯದಲ್ಲಿದ್ದ ಸುಹೇಲ್‌ ಮನೆಯಲ್ಲೇ ವಿಧ್ವಂಸಕ ಕೃತ್ಯಕ್ಕೆ ಸಂಚಿನ ಸಭೆ ನಡೆದಿತ್ತು. ಅಲ್ಲೇ ಶಸ್ತ್ರಾಸ್ತ್ರ ಹಾಗೂ ಸ್ಫೋಟಕ ವಸ್ತುಗಳನ್ನು ಸಂಗ್ರಹಿಸಿಡಲಾಗಿತ್ತು.

4.ಸೈಯದ್‌ ಉಮರ್‌

ಬೆಂಗಳೂರಿನ ಕೋಡಿಗೆಹಳ್ಳಿಯ ಉಮರ್‌ ಚಾಲಕನಾಗಿದ್ದ. ಮೊದಲಿನಿಂದಲೂ ಜುನೈದ್‌ ಗುಂಪಿನಲ್ಲಿ ಉಮರ್‌ ಗುರುತಿಸಿಕೊಂಡಿದ್ದ. ಜುನೈದ್‌ ಸೂಚನೆ ಮೇರೆಗೆ 2017ರಲ್ಲಿ ಆರ್‌.ಟಿ.ನಗರದ ನೂರ್‌ ಅಹಮ್ಮದ್‌ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದ. ತನ್ನ ಬಾಸ್‌ ಆದೇಶದಂತೆ ವಿಧ್ವಂಸಕ ಕೃತ್ಯಕ್ಕೆ ಉಮರ್‌ ಸಜ್ಜಾಗಿದ್ದ.

5.ಜಹೀದ್‌ ತಬ್ರೇಜ್‌

ಹೆಬ್ಬಾಳ ಸಮೀಪದ ಭದ್ರಪ್ಪ ಲೇಔಟ್‌ನ ಜಹೀದ್‌ ಸಹ ಕ್ರಿಮಿನಲ್‌ ಹಿನ್ನೆಲೆಯುವಳ್ಳವನಾಗಿದ್ದು, ಸಣ್ಣಪುಟ್ಟಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ. ಆತನಿಗೆ ಜುನೈದ್‌ ಹಣಕಾಸು ನೆರವು ಕೊಟ್ಟಿದ್ದ. ಈತನ ಮೇಲೂ ಕೊಲೆ, ದರೋಡೆ ಹಾಗೂ ಕೊಲೆ ಯತ್ನ ಪ್ರಕರಣಗಳು ದಾಖಲಾಗಿವೆ.

6.ಸೈಯದ್‌ ಮುದಾಸೀರ್‌ ಪಾಷ

ಆರ್‌.ಟಿ.ನಗರದ ಮುದಾಸೀರ್‌ ಮೆಕ್ಯಾನಿಕ್‌ ಆಗಿದ್ದ. ಜುನೈದ್‌ ಗುಂಪಿನಲ್ಲಿ ಸಕ್ರಿಯವಾಗಿದ್ದ ಮುದಾಸೀರ್‌, ಜುನೈದ್‌ ಎಲ್ಲ ಅಕ್ರಮ ಚಟುವಟಿಕೆಗಳಿಗೆ ಸಾಥ್‌ ಕೊಟ್ಟಿದ್ದ. ಆತನ ಮೇಲೂ ಕೊಲೆ, ದರೋಡೆ ಹಾಗೂ ರಕ್ತಚಂದನ ಸಾಗಾಣಿಕೆ ಪ್ರಕರಣಗಳು ದಾಖಲಾಗಿವೆ.

ಮೆಜೆಸ್ಟಿಕ್‌ನ ಬಸ್‌, ರೈಲ್ವೆ ನಿಲ್ದಾಣ ಜನಸಂದಣಿ ಹೆಚ್ಚಿರುವ ಕಡೆ ಸ್ಫೋಟಕ್ಕೆ ಉಗ್ರರು ಸಂಚು?

7.ಮಹಮ್ಮದ್‌ ಫೈಜಲ್‌ ರಬ್ಬಾನಿ

ಪುಲಿಕೇಶಿನಗರದ ಫೈಜಲ್‌, ಡಿ.ಜೆ.ಹಳ್ಳಿ ಭಾಗದಲ್ಲಿ ಕಾನೂನುಬಾಹಿರ ಕೃತ್ಯಗಳಲ್ಲಿ ನಿರತನಾಗಿದ್ದ. ಹಣದಾಸೆಗೆ ಜುನೈದ್‌ ತಂಡ ಸೇರಿದ ಆತ, ಸಣ್ಣಪುಟ್ಟಕೆಲಸ ಮಾಡಿಕೊಂಡಿದ್ದ. ಆತನ ಮೇಲೆ ಸಹ ಕೊಲೆ ಪ್ರಕರಣ ಇದೆ. ಪರಪ್ಪನ ಅಗ್ರಹಾರ ಜೈಲಿನಲ್ಲೇ ನಸೀರ್‌ ಸಂಪರ್ಕಕ್ಕೆ ಮುದಾಸೀರ್‌ ಬಂದಿದ್ದ.