ಕರ್ನಾಟಕದ 6 ಜಿಲ್ಲೆಗಳಲ್ಲಿ ಭರ್ಜರಿ ಮಳೆ: ಸಿಡಿಲಿಗೆ ನಾಲ್ವರ ದುರ್ಮರಣ

ಭಾರೀ ಮಳೆಯಿಂದಾಗಿ ಧಾರವಾಡದಲ್ಲಿ ನಡೆಯುತ್ತಿರುವ ಕೃಷಿ ಮೇಳಕ್ಕೆ ಸಮಸ್ಯೆ ಯಾದರೆ, ಕೊಪ್ಪಳ ಜಿಲ್ಲೆಯ ಕನಕಗಿರಿಯಲ್ಲಿ ಸಿಡಿಲಬ್ಬರಕ್ಕೆ ಎರಡು ಜಾನುವಾರು ಹಾಗೂ ಗದಗ ಜಿಲ್ಲೆಯ ಡಂಬಳ ಹೋಬಳಿಯಲ್ಲಿ ನಾಲ್ಕು ಕುರಿಗಳು ಮೃತಪಟ್ಟಿವೆ. 

Four died due to lightning  in Karnataka grg

ಬೆಂಗಳೂರು(ಸೆ.24):  ರಾಜ್ಯದ ಆರು ಜಿಲ್ಲೆಗಳಲ್ಲಿ ಸೋಮವಾರ ಸುರಿದ ದಿಢೀರ್ ಮಳೆಗೆ ಜನ ಜೀವನ ಅಸ್ತವ್ಯಸ್ತಗೊಂಡಿದ್ದು, ಯಾದಗಿರಿಯಲ್ಲಿ ಸಿಡಿಲಿಗೆ ನಾಲ್ವರು ಬಲಿಯಾಗಿದ್ದಾರೆ. ಯಾದಗಿರಿ, ಕಲಬುರಗಿ, ಚಿಕ್ಕಮಗಳೂರಿನ ಶೃಂಗೇರಿ, ಧಾರವಾಡ, ಕೊಪ್ಪಳ, ಗದಗ ಮತ್ತಿತರ ಜಿಲ್ಲೆಗಳಲ್ಲಿ ಸಂಜೆ ಸಿಡಿಲಬ್ಬರದ ಜತೆಗೆ ಭಾರೀ ಮಳೆಯಾಗಿದ್ದು, ಕೆಲವೆಡೆ ಜನಜೀವನ ಅಸ್ತವ್ಯಸ್ತಗೊಂಡಿದೆ. 

ಭಾರೀ ಮಳೆಯಿಂದಾಗಿ ಧಾರವಾಡದಲ್ಲಿ ನಡೆಯುತ್ತಿರುವ ಕೃಷಿ ಮೇಳಕ್ಕೆ ಸಮಸ್ಯೆ ಯಾದರೆ, ಕೊಪ್ಪಳ ಜಿಲ್ಲೆಯ ಕನಕಗಿರಿಯಲ್ಲಿ ಸಿಡಿಲಬ್ಬರಕ್ಕೆ ಎರಡು ಜಾನುವಾರು ಹಾಗೂ ಗದಗ ಜಿಲ್ಲೆಯ ಡಂಬಳ ಹೋಬಳಿಯಲ್ಲಿ ನಾಲ್ಕು ಕುರಿಗಳು ಮೃತಪಟ್ಟಿವೆ. 

ಕರ್ನಾಟಕದಲ್ಲಿ ಮತ್ತೆ ಮುಂಗಾರು ಚುರುಕು: ಮುಂದಿನ 4 ದಿನ ಮಳೆ

ಕಲಬುರಗಿಯಲ್ಲೂ ಸತತ 2 ಗಂಟೆ ಭರ್ಜರಿ ಮಳೆಯಾಗಿದ್ದು, ಜನ ಪರದಾಡಬೇಕಾಯಿತು. ಇನ್ನು ಯಾದಗಿರಿ ನಗರ ಸುತ್ತಮುತ್ತ ಸುಮಾರು ಅರ್ಧ ಗಂಟೆ ಕಾಲ ಭಾರೀ ಮಳೆಯಾಗಿದ್ದು, ಜೀನಕೇರಾ ತಾಂಡಾದಲ್ಲಿ ಸಿಡಿಲು ಬಡಿದು ಚೇನು (22), ಕಿಶನ್ (30), ಸುಮಿ ಬಾಯಿ (30) ಹಾಗೂ ನೇನು (18) ಮೃತಪಟ್ಟಿದ್ದಾರೆ. 

ಆರು ಮಂದಿಗೆ ಗಾಯಗಳಾಗಿದ್ದು, ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಮೃತರಲ್ಲಿ ಮೂವರು ಒಂದೇ ಕುಟುಂಬಕ್ಕೆ ಸೇರಿದವರಾಗಿದ್ದಾರೆ. ಮಳೆಯಿಂದ ರಕ್ಷಣೆ ಪಡೆಯಲು ಹೊಲದಲ್ಲಿದ್ದ ದೇವಸ್ಥಾನದೊಳಗೆ ತೆರಳಿದಾಗ ಸಿಡಿಲು ಬಡಿದಿದೆ.

Latest Videos
Follow Us:
Download App:
  • android
  • ios