Asianet Suvarna News Asianet Suvarna News

ಬಂಗಾರಪ್ಪ ಪುಣ್ಯಸ್ಮರಣೆ: ಬಿಜೆಪಿ ನಾಯಕರ ವಿರುದ್ಧವೇ ಮಾಜಿ ಸಚಿವ ಅರವಿಂದ ಲಿಂಬಾವಳಿ ವಾಗ್ದಾಳಿ!

ಬಂಗಾರಪ್ಪನವರು ಬಿಜೆಪಿಯಲ್ಲಿದ್ದಾಗ ಕೋ-ಆರ್ಡಿನೇಟರ್ ಆಗಿ ಜೊತೆಯಲ್ಲಿದ್ದರು. ಆದರೆ ಎಲ್ಲಿ ಸ್ವಾಭಿಮಾನಕ್ಕೆ ಧಕ್ಕೆ ಬರುತ್ತಿತ್ತು ಅಲ್ಲಿ ಬಂಗಾರಪ್ಪ ಇರುತ್ತಿರಲಿಲ್ಲ. ನಮ್ಮ‌ ಬಿಜೆಪಿ ಪಕ್ಷದವರು ಸ್ವಾಭಿಮಾನಕ್ಕೆ ಧಕ್ಕೆ ತರುವುದು ಹೆಚ್ಚು ಹಾಗಾಗಿ ಬಂಗಾರಪ್ಪನವರು ಪಕ್ಷ ತೊರೆದು ಹೋದರು ಎಂದು ಸ್ವಪಕ್ಷದ ಮುಖಂಡರ ನಡವಳಿಕೆ ವಿರುದ್ಧವೇ ಮಾಜಿ ಸಚಿವ ಅರವಿಂದ ಲಿಂಬಾವಳಿ ಅಸಮಾಧಾನ ಹೊರಹಾಕಿದರು.

Formers CM S Bangarappa Commemoration Aravind limbavali outraged against BSY and KS Eshwarappa at shivamogga rav
Author
First Published Dec 26, 2023, 11:08 PM IST | Last Updated Dec 26, 2023, 11:08 PM IST

ಶಿವಮೊಗ್ಗ (ಡಿ.26): ಬಂಗಾರಪ್ಪನವರು ಬಿಜೆಪಿಯಲ್ಲಿದ್ದಾಗ ಕೋ-ಆರ್ಡಿನೇಟರ್ ಆಗಿ ಜೊತೆಯಲ್ಲಿದ್ದರು. ಆದರೆ ಎಲ್ಲಿ ಸ್ವಾಭಿಮಾನಕ್ಕೆ ಧಕ್ಕೆ ಬರುತ್ತಿತ್ತು ಅಲ್ಲಿ ಬಂಗಾರಪ್ಪ ಇರುತ್ತಿರಲಿಲ್ಲ. ನಮ್ಮ‌ ಬಿಜೆಪಿ ಪಕ್ಷದವರು ಸ್ವಾಭಿಮಾನಕ್ಕೆ ಧಕ್ಕೆ ತರುವುದು ಹೆಚ್ಚು ಹಾಗಾಗಿ ಬಂಗಾರಪ್ಪನವರು ಪಕ್ಷ ತೊರೆದು ಹೋದರು ಎಂದು ಸ್ವಪಕ್ಷದ ಮುಖಂಡರ ನಡವಳಿಕೆ ವಿರುದ್ಧವೇ ಮಾಜಿ ಸಚಿವ ಅರವಿಂದ ಲಿಂಬಾವಳಿ ಅಸಮಾಧಾನ ಹೊರಹಾಕಿದರು.

ಇಂದು ಮಾಜಿ ಸಿಎಂ ದಿವಂಗತ ಎಸ್ ಬಂಗಾರಪ್ಪನವರ ಸ್ಮರಣ ಕಾರ್ಯಕ್ರಮದಲ್ಲಿ ಲಿಂಬಾವಳಿ ಭಾಗಿಯಾಗಿ ಮಾತನಾಡಿದ ಅವರು ದಿವಂಗತ ಬಂಗಾರಪ್ಪನವರನ್ನು ಹೊಗಳುತ್ತಲೇ  ಬಿಜೆಪಿ ಪಕ್ಷದ ನಾಯಕರಾದ ಬಿಎಸ್ ವೈ ಮತ್ತು ಈಶ್ವರಪ್ಪ ಸೇರಿದಂತೆ ಹಲವು ನಾಯಕರು ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.  

ಜಗತ್ತಿನಲ್ಲಿ ಲೂಟಿಕೋರರು, ದರೋಡೆಕೋರರು ಅಂತಾ ಇದ್ರೆ ಅದು ರಾಜಕಾರಣಿಗಳು: ಶಾಸಕ ರಾಜು ಕಾಗೆ ಸ್ಫೋಟಕ ಹೇಳಿಕೆ!

ಅನಂತ್ ಕುಮಾರ್ ಅವರು ಬಂಗಾರಪ್ಪನವರ ಜೊತೆ ಹೆಚ್ಚು ಒಡನಾಟ ಬಿಟ್ಟರೆ ನಾನೇ ಹೆಚ್ಚಿನ ಸಮಯ ಅವರೊಂದಿಗೆ ಕಳೆದಿದ್ದೇನೆ. ಸಮಾಜವಾದಿ ಆಗಿದ್ರು. ಸಾಮಾನ್ಯ ಕಾರ್ಯಕರ್ತರ ಬಗ್ಗೆನೂ ಯೋಚನೆ ಮಾಡುವ ಧೀಮಂತ ನಾಯಕರಾಗಿದ್ದ ಬಂಗಾರಪ್ಪ. ಅಂದು ಸಾಮಾನ್ಯವಾಗಿ 44 ಬಿಜೆಪಿ ನಿಲ್ಲುತ್ತಿತ್ತು. ಬಂಗಾರಪ್ಪ ಬಿಜೆಪಿಗೆ ಬಂದ ನಂತರ 79 ಕ್ಕೆ ಏರಿಕೆ ಆಯ್ತು. ಜೆಡಿ ಯು ಜೊತೆ 86 ಕ್ಕೆ ಏರಿಕೆ ಆಯ್ತು. ಬಂಗಾರಪ್ಪ ಅವರು 1980 ಯಲ್ಲಿಯೇ ಮುಖ್ಯಮಂತ್ರಿಯಾಗಬೇಕಿತ್ತು. ಆದರೆ ನೇರ ನುಡಿಯಿಂದ ಸಿಎಂ ಸ್ಥಾನ ತಪ್ಪಿಹೋಗಿತ್ತು ಎಂದು ಹಿಂದಿನ ಘಟನೆಗಳು ಮೆಲುಕು ಹಾಕಿದರು. 

'ಸೋಮಾರಿ ಸಿದ್ದ' ಪದ ಬಳಸಿ ಸಿದ್ದರಾಮಯ್ಯರ ನಿಂದನೆ; ಸಂಸದ ಪ್ರತಾಪ್ ಸಿಂಹ ಕಚೇರಿ ಮುಂದೆ ಕಾಂಗ್ರೆಸ್ ಪ್ರತಿಭಟನೆ

ಶಿವಮೊಗ್ಗದಲ್ಲಿ ರಸ್ತೆಯ ಎರಡು ಬದಿಯಿರುವ ಆಸ್ತಿ ಯಾರದ್ದು ಎಂಬುದರ ಬಗ್ಗೆ ಎಲ್ಲರಿಗೂ ಗೊತ್ತಿದೆ. ಹೀಗೆಂದು ಬಿಎಸ್ ವೈ ಮತ್ತು ಈಶ್ವರಪ್ಪನವರ ಹೆಸರು ಹೇಳದೆ ಭಾಷಣ ಮಾಡಿರುವುದು ಕುತೂಹಲ ಮೂಡಿಸಿದರು. ಇಂದು ಮಧು ಬಂಗಾರಪ್ಪ ರಸ್ತೆಯ ಬದಿ ಇರುವ ತಂದೆ ಮತ್ತು ತಾಯಿಯ ಸಮಾಧಿಯನ್ನ ಅಭಿವೃದ್ಧಿ ಮಾಡಿದ್ದಾರೆ. ಸರ್ಕಾರದ ಅನುದಾನವನ್ನ‌ ನಿರೀಕ್ಷಿಸದೆ ಇದರ ನಿರ್ವಾಹಣೆ ಮಾಡಿದ್ದಾರೆ ಎಂದು ಹೊಗಳಿದರು. ಇದೇ ವೇಳೆ  ಕಾರ್ಯಕ್ರಮದಲ್ಲಿದ್ದ ವಿಧಾನ ಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ ಮಾತನಾಡಿ, ಮಾಜಿ ಸಚಿವ ಅರವಿಂದ ಲಿಂಬಾವಳಿ ಪಕ್ಷದ ನಾಯಕರ ವಿರುದ್ಧ ಮಾತನಾಡಿದ್ದಾರೆ. ಪಕ್ಷದ ಹೊರಗೆ ಕಾಲಿಟ್ಟಿದ್ದಾರೇನೋ ಎಂಬ ಅನುಮಾನ ವ್ಯಕ್ತವಾಗಿದೆ. ಹಾಗೇನಾದರೂ ಇದ್ದರೆ ಅವರಿಗೆ ಒಳ್ಳೆಯದಾಗಲಿ ಎಂದು ನಗೆ ಚಟಾಕಿ ಹಾರಿಸಿ ಗಮನ ಸೆಳೆದರು.

Latest Videos
Follow Us:
Download App:
  • android
  • ios