'ಸೋಮಾರಿ ಸಿದ್ದ' ಪದ ಬಳಸಿ ಸಿದ್ದರಾಮಯ್ಯರ ನಿಂದನೆ; ಸಂಸದ ಪ್ರತಾಪ್ ಸಿಂಹ ಕಚೇರಿ ಮುಂದೆ ಕಾಂಗ್ರೆಸ್ ಪ್ರತಿಭಟನೆ
ಮುಖ್ಯಮಂತ್ರಿ ಸಿದ್ದರಾಮಯ್ಯರ ವಿರುದ್ಧಅವಹೇಳನಕಾರಿ ಪದಬಳಕೆ ಮಾಡಿರುವ ಆರೋಪ ಹಿನ್ನೆಲೆ ಇಂದು ಮೈಸೂರು ಕೊಡಗು ಸಂಸದ ಪ್ರತಾಪ್ ಸಿಂಹ ಕಚೇರಿ ಮುಂದೆ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ದಿಢೀರ್ ಪ್ರತಿಭಟನೆ ನಡೆಸಿದರು.
ಮೈಸೂರು (ಡಿ.26) : ಮುಖ್ಯಮಂತ್ರಿ ಸಿದ್ದರಾಮಯ್ಯರ ವಿರುದ್ಧಅವಹೇಳನಕಾರಿ ಪದಬಳಕೆ ಮಾಡಿರುವ ಆರೋಪ ಹಿನ್ನೆಲೆ ಇಂದು ಮೈಸೂರು ಕೊಡಗು ಸಂಸದ ಪ್ರತಾಪ್ ಸಿಂಹ ಕಚೇರಿ ಮುಂದೆ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ದಿಢೀರ್ ಪ್ರತಿಭಟನೆ ನಡೆಸಿದರು.
ಹುಣಸೂರಿನಲ್ಲಿ ನಡೆದ ಹನುಮ ಜಯಂತಿಯ ಕಾರ್ಯಕ್ರಮದಲ್ಲಿ ಪ್ರತಾಪ ಸಿಂಹ ಸಿಎಂ ಸಿದ್ದರಾಮಯ್ಯರನ್ನು 'ಸೋಮಾರಿ ಸಿದ್ದ' ಎಂದು ಪದಬಳಕೆ ಮಾಡಿ ನಿಂದಿಸಿದ್ದಾರೆಂದು ಆರೋಪ ಕೇಳಿಬಂದಿದೆ. ಈ ಹಿನ್ನೆಲೆ ಕಾಂಗ್ರೆಸ್ ಮುಖಂಡರು ಗ್ರಾಮಾಂತರ ಕಾಂಗ್ರೆಸ್ ಅಧ್ಯಕ್ಷ ಬಿ.ಜೆ ವಿಜಯಕುಮಾರ್, ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಸೇರಿದಂತೆ ಹಲವು ಕೈ ಕಾರ್ಯಕರ್ತರು ಹುಣಸೂರು ರಸ್ತೆಯಲ್ಲಿರುವ ಸಂಸದ ಪ್ರತಾಪ ಸಿಂಹ ಕಚೇರಿ ಮುಂದೆ ಧರಣಿ ನಡೆಸಿ, ಸಂಸದ ಪ್ರತಾಪ ಸಿಂಹ ವಿರುದ್ಧ ಘೋಷಣೆ ಕೂಗಿದರು. ದುರಾಹಂಕಾರಿ ಪ್ರತಾಪ ಸಿಂಹರನ್ನು ಬಂಧಿಸಬೇಕು, ದೇಶ ದ್ರೋಹಿ ಪ್ರತಾಪ ಸಿಂಹರನ್ನ ಬಂಧಿಸಬೇಕು ಎಂದು ಘೋಷಣೆ ಕೂಗಿದರು.
ಸಿದ್ದರಾಮಯ್ಯ ರಾಜಕೀಯಕ್ಕೆ ಬಂದಾಗ ನೀವು ಎಲ್ಲಿದ್ರಿ?
ಸಿದ್ದರಾಮಯ್ಯರ ವಯಸ್ಸೆಷ್ಟು ಪ್ರತಾಪ್ ಸಿಂಹರ ವಯಸ್ಸೆಷ್ಟು? ಸಿದ್ದರಾಮಯ್ಯ ರಾಜಕೀಯಕ್ಕೆ ಬಂದಾಗ ಪ್ರತಾಪ್ ಸಿಂಹ ಎಲ್ಲಿದ್ರು? ಮುಖ್ಯಮಂತ್ರಿ ಸಿದ್ದರಾಮಯ್ಯರನ್ನ ಸೋಮಾರಿ ಸಿದ್ದ ಎಂದು ನಿಂದಿಸಿರುವ ಪ್ರತಾಪ ಸಿಂಹರದು ದುರಾಹಂಕಾರ ತೋರಿಸುತ್ತದೆ. ಸುಖಸುಮ್ಮನೆ ಸಿಎಂ ವಿಚಾರ ಮಾತನಾಡುತ್ತಾರೆ. ಸಮಾಜದಲ್ಲಿ ಕೋಮು ಗಲಭೆ ಎದ್ದೇಳಿಸುವ ಪ್ರಯತ್ನ ಮಾಡ್ತಿದ್ದಾರೆ. ನಿನ್ನೆ ಮೊನ್ನೆ ಬಂದ ಪ್ರತಾಪ ಸಿಂಹ ಸಿಎಂ ಬಗ್ಗೆ ಮಾತನಾಡ್ತಾರೆ. ಈ ಸಂಸದ ಇಲ್ಲಿವರೆಗೆ ಯಾವ ಚಳವಳಿ ಮಾಡಿದ್ದಾರೆ? ಯಾವ ಹೋರಾಟ ಮಾಡಿದ್ದಾರೆ ಎಂದು ಪ್ರಶ್ನಿಸಿರುವ ಕಾಂಗ್ರೆಸ್ ಮುಖಂಡರು, ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ನಿಂದಿಸಿರುವ ಪ್ರತಾಪ ಸಿಂಹರ ವಿರುದ್ಧ 149 ,506 ,153,ಸೆಕ್ಷನ್ ನಲ್ಲಿ ಡಿಸಿಪಿ ಮತ್ತು ಎಸಿಪಿ ಕೇಸ್ ದಾಖಲಿಸಿಕೊಂಡು ಬಂಧಿಸಬೇಕು ಎಂದು ಒತ್ತಾಯಿಸಿದರು.
ಮೋದಿ ಮತ್ತೆ ಪ್ರಧಾನಿ ಆಗುವುದನ್ನ ಯಾರಿಂದಲೂ ತಪ್ಪಿಸಲಾಗಲ್ಲ: ಖ್ಯಾತ ಜ್ಯೋತಿಷಿ ರಾಜಗುರು ದ್ವಾರಕನಾಥ್ ಭವಿಷ್ಯ