ಬೆಂಗಳೂರಲ್ಲಿ ನಾಯಿ ಮಾಂಸ ಮಾರಾಟ ಪ್ರಕರಣ; ಠಾಣೆಯಲ್ಲಿ ಪುನೀತ್ ಕೆರೆಹಳ್ಳಿ ಮೇಲೆ ಪೊಲೀಸರಿಂದ ಹಲ್ಲೆ! ವಕೀಲ ಹೇಳಿದ್ದೇನು?

ನಾಯಿ ಮಾಂಸ ಮಾರಾಟ ಪ್ರಕರಣದಲ್ಲಿ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ ಪುನೀತ್ ಕೆರೆಹಳ್ಳಿ ಅವರನ್ನು ಪೊಲೀಸರು ಬಂಧಿಸಿದ್ದಾರೆ. ನಿನ್ನೆ ಸಂಜೆ ಪೊಲೀಸ್ ಠಾಣೆಗೆ ಕರೆದೊಯ್ದು ಹಲ್ಲೆ ನಡೆಸಿರುವ ಬಗ್ಗೆ ತಿಳಿಸಿದ್ದಾರೆ ಎಂದು ಪುನೀತ್ ಕೆರೆಹಳ್ಳಿ ಪರ ವಕೀಲ ಉಮಾಶಂಕರ್ ತಿಳಿಸಿದರು.

Bengaluru meat scandal Lawyer Umashankar met Puneeth Kerehalli at Victoria Hospital rav

ಬೆಂಗಳೂರು (ಜು.27): ನಾಯಿ ಮಾಂಸ ಮಾರಾಟ ಪ್ರಕರಣದಲ್ಲಿ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ ಪುನೀತ್ ಕೆರೆಹಳ್ಳಿ ಅವರನ್ನು ಪೊಲೀಸರು ಬಂಧಿಸಿದ್ದಾರೆ. ನಿನ್ನೆ ಸಂಜೆ ಪೊಲೀಸ್ ಠಾಣೆಗೆ ಕರೆದೊಯ್ದು ಹಲ್ಲೆ ನಡೆಸಿರುವ ಬಗ್ಗೆ ತಿಳಿಸಿದ್ದಾರೆ ಎಂದು ಪುನೀತ್ ಕೆರೆಹಳ್ಳಿ ಪರ ವಕೀಲ ಉಮಾಶಂಕರ್ ತಿಳಿಸಿದರು.

ಇಂದು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಪುನೀತ್ ಕೆರೆಹಳ್ಳಿ ಅವರನ್ನ ಭೇಟಿಯಾದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ವಕೀಲರು, ಪುನೀತ್ ಕೆರೆಹಳ್ಳಿ ನಮಗೆ ತಿಳಿಸಿದ ಪ್ರಕಾರ< ರಾತ್ರಿ ವಿಚಾರಣೆಗೆ ಕರೆದೊಯ್ದು ಎಡಗಾಲಿಗೆ ಹೊಡೆದು ಹಲ್ಲೆ ಮಾಡಿದ್ದಾರೆ. ಇದರಿಂದ ಪುನೀತ್ ಕೆರೆಹಳ್ಳಿ ಅವರಿಗೆ ನಡೆಯಲು ಸಾಧ್ಯವಾಗುತ್ತಿಲ್ಲ. ಹಲ್ಲೆ ಮಾಡಿ ಅವರೇ ಎಫ್‌ಐಆರ್ ಮಾಡಿದ್ದಾರೆ. ಪುನೀತ್ ಕೆರೆಹಳ್ಳಿ ಬಳಿ ಇದ್ದ ಪೆನ್‌ಡ್ರೈವ್, ಡಾಕ್ಯುಮೆಂಟ್ಸ್‌ ಕಸಿದುಕೊಂಡಿದ್ದಾರೆ. ಈ ವೇಳೆ ಪುನೀತ್ ಕೆರೆಹಳ್ಳಿ ಅವರನ್ನ ಪೂರ್ತಿ ಬೆತ್ತಲೆ ಮಾಡಿ ವಿಡಿಯೋ ಮಾಡಿಕೊಂಡಿದ್ದು, ನೀನು ಪೆನ್‌ಡ್ರೈವ್ ಕೊಡ್ಲಿಲ್ಲಂದ್ರೆ ಬೆತ್ತಲೆ ವಿಡಿಯೋನಾ ಸೋಷಿಯಲ್ ಮೀಡಿಯಾದಲ್ಲಿ ಹಾಕಿ ಮಾನ ಮಾರ್ಯದೆ ಹರಾಜು ಹಾಕುತ್ತೇವೆ ಎಂದು ಹೆದರಿಸಿ ಕೆಲವು ಡಾಕ್ಯುಮೆಂಟ್‌ಗಳಿಗೆ ಹೆಬ್ಬೆಟ್ಟಿನ ಸಹಿ ಹಾಕಿಸಿಕೊಂಡಿದ್ದಾರೆ. ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ವೇಳೆ ಅವರ ಹೇಳಿಕೆ ದಾಖಲಿಸಿಕೊಂಡಿರುವ ಬಗ್ಗೆ ತಿಳಿಸಿದ್ದಾರೆ ಎಂದರು.

ಬೆಂಗಳೂರಲ್ಲಿ ನಾಯಿ ಮಾಂಸ ಮಾರಾಟ ಪ್ರಕರಣ: ಸ್ಟೇಷನ್ ಬೇಲ್ ಮೇಲೆ ಪುನೀತ್ ಕೆರೆಹಳ್ಳಿ ಬಿಡುಗಡೆ?

ಇವತ್ತು ಅಥವಾ ನಾಳೆ ಕೋರ್ಟ್‌ಗೆ ಹಾಜರುಪಡಿಸಬಹುದಾಗಿ ತಿಳಿಸಿದ್ದಾರೆ ನೋಡೋಣ ಆದರೆ ಸದ್ಯ ಪುನೀತ್ ಕೆರೆಹಳ್ಳಿ ಮಾತನಾಡಲು ನಡೆಯಲು ಸಾಧ್ಯವಾಗುತ್ತಿಲ್ಲ. ನೋಡೋಣ ಏನು ಮಾಡುತ್ತಾರೆಂದು ಮುಂದಿನ ನಿರ್ಧಾರ ತಿಳಿಸುತ್ತೇವೆ ಎಂದ ವಕೀಲ.

ಬೆಂಗಳೂರು ಮಾಂಸ ದಂಧೆ ಪ್ರಕರಣ: ಬಂಧಿತ ಪುನೀತ್ ಕೆರೆಹಳ್ಳಿ ಠಾಣೆಯಲ್ಲಿ ತೀವ್ರ ಅಸ್ವಸ್ಥ, ಆಸ್ಪತ್ರೆಗೆ ದಾಖಲು

ಏನಿದು ಘಟನೆ?

ನಿನ್ನೆ ಸಂಜೆ ೫:೩೦ ನಿಮಿಷಕ್ಕೆ ೧೧೨ ಗೆ ಕರೆ ಮಾಡಲಾಗುತ್ತೆ. ಕಂಟ್ರೋಲ್ ನಿಂದ ಕಾಟನ್ ಪೇಟೆ ಠಾಣಾ ವ್ಯಾಪ್ತಿಯ ಹೊಯ್ಸಳ ೩೭ ಕ್ಕೆ ಕರೆ ಮಾಡಲಾಗುತ್ತೆ. ಹೊಯ್ಸಳ ಸಿಬ್ಬಂದಿಗಳು ರೈಲ್ವೇ ನಿಲ್ದಾಣದ ಹಿಂಬದಿ ಗೇಟ್ ಗೆ ಹೋಗಿ ಪೊಲೀರು ಪರಿಶೀಲನೆ ಮಾಡಲಾಗಿ.ಪುನೀತ್ ಕೆರೆ ಹಳ್ಳಿ ಹಾಗೂ ಸಂಗಡಿಗರು ಐಸ್ ಬಾಕ್ಸ್ ಹಿಡಿದುಕೊಂಡು ಸೇವಿಸಲು ಯೋಗ್ಯವಲ್ಲದ  ನಾಯಿ ಮಾಂಸದ ದಂದೆಯನ್ನ ಅಬ್ದುಲ್ ರಜಾಕ್ ನಡೆಸುತ್ತಿದ್ದಾರೆಂದು ಘೋಷಣೆ ಕೂಗಲಾಗುತ್ತಿರುತ್ತದೆ. ಆದರು ಯಾವ ಇಲಾಖೆ ಅಧಿಕಾರಿಗಳು ಕ್ರಮಕೈಗೊಳ್ಳುತ್ತಿಲ್ಲ ಎಂದು ಘೋಷಣೆ ಕೂಗುತ್ತಿರುತ್ತಾರೆ. ನಾವು ಗಳು ಸಂಬಂದ ಪಟ್ಟ ಅಧಿಕಾರಿಗಳೊಂದಿಗೆ ಪರಿಶೀಲನೆ ಮಾಡಲಾಗಿ ಐಸ್ ಬಾಕ್ಸ್ ನಲ್ಲಿ ತಿನ್ನಲು ಯೋಗ್ಯವಾದ  ಮಾಂಸ ಇದೇ ಎಂದು ತಿಳಿದು ಬಂದಿರುತ್ತದೆ. ಆ ಕೂಡಲೇ ಘೋಷಣೆ ಕೂಗುತ್ತಿದ್ದವರನ್ನ ವಶಕ್ಕೆ ಪಡೆದು ವಿಚಾರಣೆ ಮಾಡಿ ಎನ್ ಸಿಆರ್ ದಾಖಲಿಸಿಕೊಂಡು ಕಳಿಸಿಕೊಡಲಾಗಿತ್ತು.

Latest Videos
Follow Us:
Download App:
  • android
  • ios