Asianet Suvarna News Asianet Suvarna News

ರೇಣುಕಾಸ್ವಾಮಿ ಆತ್ಮಕ್ಕೆ ಶಾಂತಿ ಸಿಗಬೇಕೆಂದರೆ‌ ದರ್ಶನ್‌ನ ಎಲ್ಲ ಸಿನಿಮಾ‌ ಬ್ಯಾನ್ ಮಾಡಿ: ರೇಣುಕಾಚಾರ್ಯ

ಈ ನೆಲದ ಕಾನೂನು ಎಲ್ಲರೂ ಗೌರವಿಸಬೇಕು. ರೇಣುಕಾಸ್ವಾಮಿ ಕುಟುಂಬಕ್ಕೆ ಒಂದು ಕೋಟಿ ಪರಿಹಾರ‌ ನೀಡಬೇಕು. ಅವರ ಆತ್ಮಕ್ಕೆ ಶಾಂತಿ ಸಿಗಬೇಕೆಂದರೆ‌ ನಟ ದರ್ಶನ್‌ನ ಎಲ್ಲಾ ಸಿನಿಮಾ‌ ಬ್ಯಾನ್ ಮಾಡ‌ಬೇಕಿತ್ತು. ಕಾನೂನು ಕೈ‌ಗೆ ತೆಗೆದುಕೊಂಡಿದ್ದು ತಪ್ಪು. ಸಿಟ್ಟು ಬಂದಿದ್ದರೆ ಎರಡು ಹೊಡೆತ ಹೊಡೆದಿದ್ದರೆ ಆಗುತ್ತಿತ್ತು. ಅದರ ಬದಲಿಗೆ ಕ್ರೂರಿತನ ಮಾಡಬಾರದಿತ್ತು. ತಪ್ಪು ಮಾಡಿದ್ದರೆ ಪೊಲೀಸರಿಗೆ ದೂರು ನೀಡಬಹುದಿತ್ತು. ದರ್ಶನ್ ತಪ್ಪು ಮಾಡಿದರೆ ಸೂಕ್ತ ಶಿಕ್ಷೆಯಾಗಬೇಕು ಎಂದು ಒತ್ತಾಯಿಸಿದ ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ 

Former Minister MP Renukacharya React to Actor Darshan Case grg
Author
First Published Jun 14, 2024, 2:54 PM IST

ದಾವಣಗೆರೆ(ಜೂ.14):  ಈ ನೆಲದ ಕಾನೂನು ಎಲ್ಲರೂ ಗೌರವಿಸಬೇಕು. ರೇಣುಕಾಸ್ವಾಮಿ ಕುಟುಂಬಕ್ಕೆ ಒಂದು ಕೋಟಿ ಪರಿಹಾರ‌ ನೀಡಬೇಕು. ಅವರ ಆತ್ಮಕ್ಕೆ ಶಾಂತಿ ಸಿಗಬೇಕೆಂದರೆ‌ ನಟ ದರ್ಶನ್‌ನ ಎಲ್ಲಾ ಸಿನಿಮಾ‌ ಬ್ಯಾನ್ ಮಾಡ‌ಬೇಕಿತ್ತು. ಕಾನೂನು ಕೈ‌ಗೆ ತೆಗೆದುಕೊಂಡಿದ್ದು ತಪ್ಪು. ಸಿಟ್ಟು ಬಂದಿದ್ದರೆ ಎರಡು ಹೊಡೆತ ಹೊಡೆದಿದ್ದರೆ ಆಗುತ್ತಿತ್ತು. ಅದರ ಬದಲಿಗೆ ಕ್ರೂರಿತನ ಮಾಡಬಾರದಿತ್ತು. ತಪ್ಪು ಮಾಡಿದ್ದರೆ ಪೊಲೀಸರಿಗೆ ದೂರು ನೀಡಬಹುದಿತ್ತು. ದರ್ಶನ್ ತಪ್ಪು ಮಾಡಿದರೆ ಸೂಕ್ತ ಶಿಕ್ಷೆಯಾಗಬೇಕು ಎಂದು ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಒತ್ತಾಯಿಸಿದ್ದಾರೆ.

ಇಂದು(ಶುಕ್ರವಾರ) ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಎಂ.ಪಿ. ರೇಣುಕಾಚಾರ್ಯ ಅವರು, ಸಿಎಂ ಸಿದ್ದರಾಮಯ್ಯ ಹಾಗೂ ಡಿಕೆಶಿಗೆ ಮಾಧ್ಯಮದ ಮೂಲಕ ಸವಾಲ್ ಹಾಕುತ್ತೇವೆ. ರೈತ ನಾಯಕ ಯಡಿಯೂರಪ್ಪ ನವರ ಮೇಲೆ ಪೋಕ್ಸೋ ಪ್ರಕರಣ ದಾಖಲು ಮಾಡಿದ್ದರು. ಅಂದು ಗೃಹ ಸಚಿವರು ದೂರು‌ ನೀಡಿದಾಕೆ ಮಾನಸಿಕ ಅಸ್ವಸ್ಥೆ, 53 ಜನರ ಮೇಲೆ ದೂರು ನೀಡಿದ್ದಾರೆ‌ ಎಂದು ಹೇಳಿದ್ದರು. ಯಡಿಯೂರಪ್ಪನವರನ್ನು ಭೇಟಿಯಾಗಿ ನನ್ನ ಮಗಳಿಗೆ ನ್ಯಾಯ ಕೊಡಿಸಿ ಎಂದು ಅವರ ಬಳಿ ಹೋಗಿದ್ದಳು. ತನ್ನ ಸಹೋದರ ಸಂಬಂಧಿಗಳು ನನ್ನ ಮಗಳ ಮೇಲೆ ಅತ್ಯಾಚಾರ ಮಾಡಿದ್ದಾರೆ ಎಂದು ಯಡಿಯೂರಪ್ಪ ನವರ ಬಳಿ ಹೇಳಿ ಗೋಳಾಡಿದ್ದಳು. 5 ಸಾವಿರ ಕೋಟಿ ಬಜಾಜ್ ಕಂಪನಿಯವರು ನೀಡಬೇಕು ಕೊಡಿಸಿ ಎಂದು ಹೇಳಿದ್ದಳು. ಅಂದು ಮಾನಸಿಕ ಅಸ್ವಸ್ಥೆ ಎಂದು ಹೇಳಿ ಈಗ ಯಡಿಯೂರಪ್ಪ ನವರನ್ನು ಬಂಧಿಸುತ್ತೇವೆ ಎಂದು ಗೃಹ ಸಚಿವರು ಹೇಳಿದ್ದಾರೆ. ಈ ಪ್ರಕರಣ ರಾಜಕೀಯ ಪ್ರೇರಿತವಾದ ಪ್ರಕರಣವಾಗಿದೆ ಎಂದು ದೂರಿದ್ದಾರೆ. 

ಕಾಂಗ್ರೆಸ್ ಯಾರ ಮೇಲೂ ದ್ವೇಷ ರಾಜಕಾರಣ ಮಾಡೊಲ್ಲ: ಡಿಕೆ ಶಿವಕುಮಾರ

ಲೋಕಸಭಾ ಚುನಾವಣೆಯಲ್ಲಿ ಸೋತ ಹತಾಶೆಯಿಂದ ಈ ರೀತಿ ದ್ವೇಷದ ರಾಜಕಾರಣ ಮಾಡ್ತಾ ಇದಾರೆ. ದೂರು ನೀಡಿದ ಆಕೆಯ ಸಹೋದರ ಅವರ ಜೊತೆ ಇರಲಿಲ್ಲ. ಆದರೆ ಕಾಂಗ್ರೆಸ್ ನಾಯಕರು ಆಕೆಯ ಸಹೋದರನಿಗೆ ಅಮಿಷ ಒಡ್ಡಿ ದೂರು ದಾಖಲು ಮಾಡಿಸಿದ್ದಾರೆ. ಯಡಿಯೂರಪ್ಪನವರು ತಲೆಮರೆಸಿಕೊಂಡಿಲ್ಲ, 17 ಕ್ಕೆ ಸಿಐಡಿ ಮುಂದೆ ಹಾಜರಾಗುತ್ತೇನೆ ಎಂದು ಹೇಳಿದ್ದಾರೆ. ಆ ಮಹಿಳೆ ನೀಡಿದ ದೂರಿನಲ್ಲಿರುವ 53 ಜನರನ್ನು ಕೂಡ ಬಂಧನ ಮಾಡಿ . ಯಡಿಯೂರಪ್ಪನವರು 60 ದಿನಗಳ ಹಿಂದೆ ಸಾಕ್ಷಿ ನಾಶ ಮಾಡ ಬಹುದಿತ್ತಲ್ಲಾ?. ನೇರವಾಗಿ ಬಂಧಿಸಿದರೆ ಸರ್ಕಾರಕ್ಕೆ ಕೆಟ್ಟ ಹೆಸರು‌ ಬಂದು ಸರ್ಕಾರ ಪಥನವಾಗುತ್ತೆ ಎಂದು ಕೋರ್ಟ್ ಮೂಲಕ ಬಂದಿದ್ದೀರಿ ಎಂದು ರಾಜ್ಯ ಸರ್ಕಾರದ ವಿರುದ್ಧ ರೇಣುಕಾಚಾರ್ಯ ಹರಿಹಾಯ್ದಿದ್ದಾರೆ. 

ಯಡಿಯೂರಪ್ಪನವರನ್ನು ಬಂಧಿಸಿದರೆ ರಾಜ್ಯದ ಉದ್ದಗಲಕ್ಕೂ ಹೋರಾಟ ಮಾಡುತ್ತೇವೆ. ಇದರಲ್ಲಿ‌ ಕೆಲವರ ಷಡ್ಯಂತ್ರ ಇದೇ, ಉದ್ದೇಶ ಪೂರ್ವಕವಾಗಿ ಯಡಿಯೂರಪ್ಪ, ಬಿಜೆಪಿ‌ ಮೇಲೆ ಕಟ್ಟ ಹೆಸರು ತರುವ ಕೆಲಸ ಮಾಡುತ್ತಿದ್ದೀರಿ. ನಿಮಗೆ ಗೌರವ ಇದ್ದರೆ ರಾಜ್ಯದ‌ ಜನರ ಕ್ಷಮೆ ಕೇಳಬೇಕು. ಬಾಲಕಿ ಹಿಂದೆ ಯಾರಿದ್ದಾರೆ ಎಂಬುದನ್ನು ಕೆಲವೇ ದಿನಗಳಲ್ಲಿ ಅದನ್ನು ಬಹಿರಂಗ ಪಡಿಸುತ್ತೇನೆ. ಈ‌ ಎಲ್ಲಾ ಆರೋಪಕ್ಕೆ ಯಡಿಯೂರಪ್ಪ ಜಗ್ಗಲ್ಲ, ಬಗ್ಗಲ್ಲಾ, ಕುಗ್ಗಲ್ಲಾ. ಇದೇ ರೀತಿ ಮುಂದುವರೆದರೆ ಕಾಂಗ್ರೆಸ್ ಪಥನವಾಗುತ್ತೆ. 17 ರಂದು ಸಿಐಡಿಗೆ ಯಡಿಯೂರಪ್ಪ ಹಾಜರು ಆಗುತ್ತಾರೆ ಎಂದು ಹೇಳಿದ್ದಾರೆ. 

Latest Videos
Follow Us:
Download App:
  • android
  • ios