ಕೊಲೆಗೆ ಕೊಲೆಯಿಂದಲೇ ಉತ್ತರ: ಕೆ.ಎಸ್.ಈಶ್ವರಪ್ಪ
* ಕೊಲೆ ಆರೋಪಿಗಳನ್ನ ಗುಂಡಿಟ್ಟು ಕೊಲ್ಲುವ ಇಲ್ಲ ನೇಣು ಹಾಕುವಂತ ಕಠಿಣ ಕಾನೂನು ತರಬೇಕು
* ವಿಶ್ವಸಂಸ್ಥೆ ಇದನ್ನು ಗಂಭೀರವಾಗಿ ಪರಿಗಣಿಸಬೇಕು
* ಇಷ್ಟು ವರ್ಷ ಹಿಂದುಗಳು ಬಹಳ ಸಹನೆಯಿಂದ ಸಹಿಸಿಕೊಂಡು ಬಂದಿದ್ದಾರೆ
ಶಿವಮೊಗ್ಗ(ಜೂ.30): ಉದಯಪುರದಲ್ಲಿ ನಡೆದಿರುವ ಐಸಿಸ್ ಮಾದರಿಯ ಕೊಲೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ, ಕೊಲೆಗೆ ಕೊಲೆಯಿಂದಲೇ ಉತ್ತರ ನೀಡಬೇಕಾಗುತ್ತದೆ ಎಂಬ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ನಗರದಲ್ಲಿ ಬುಧವಾರ ಬಿಜೆಪಿ ವತಿಯಿಂದ ನಡದೆ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಕೊಲೆ ಆರೋಪಿಗಳು ನಾವೇ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡ ಮೇಲೂ ಅವರನ್ನು ಗುಂಡಿಟ್ಟು ಕೊಲ್ಲುವ ಇಲ್ಲ ನೇಣು ಹಾಕುವಂತ ಕಠಿಣ ಕಾನೂನು ತರಬೇಕು ಎಂದು ಒತ್ತಾಯಿಸಿದರು.
ಕೆಲವು ಮುಸ್ಲಿಂ ಗೂಂಡಾಗಳು ಶಿವಮೊಗ್ಗವನ್ನು ಗೂಂಡಾ ರಾಜ್ಯ ಮಾಡಲು ಹೊರಟ್ಟಿದ್ದಾರೆ: ಈಶ್ವರಪ್ಪ
ಹಂತಕರು ಕನ್ನಯ್ಯಾ ಲಾಲ್ ಅವರ ಕೊಲೆ ಮಾಡಿದ ಅದೇ ಕತ್ತಿಯನ್ನು ತೋರಿಸಿ ಪ್ರಧಾನಿ ಮೋದಿ ಅವರಿಗೂ ಬೆದರಿಕೆ ಹಾಕಿದ್ದಾರೆ. ವಿಶ್ವಸಂಸ್ಥೆ ಇದನ್ನು ಗಂಭೀರವಾಗಿ ಪರಿಗಣಿಸಬೇಕು. ಇಷ್ಟು ವರ್ಷ ಹಿಂದುಗಳು ಬಹಳ ಸಹನೆಯಿಂದ ಸಹಿಸಿಕೊಂಡು ಬಂದಿದ್ದಾರೆ. ಇನ್ನು ಮುಂದೆ ಸಹಿಸಿಕೊಳ್ಳಲು ಸಾಧ್ಯವಿಲ್ಲ. ಕೊಲೆಗೆ ಕೊಲೆಯಿಂದಲೇ ಉತ್ತರ ನೀಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.