ರಾಜ್ಯದಲ್ಲಿ ಉದ್ಯೋಗ ಸೃಷ್ಟಿ ಮಾಡದೆ ಇದ್ದರೆ ಕಷ್ಟವಾಗಲಿದೆ. ಬೆಲೆ ಏರಿಕೆ ಹಣದುಬ್ಬರಕ್ಕೆ ಕಾರಣವಾಗಲಿದೆ. ಮೂಲಸೌಕರ್ಯಕ್ಕೆ ಸರ್ಕಾರ ಒತ್ತು ನೀಡುತ್ತಿಲ್ಲ. ದೂರದೃಷ್ಟಿ ಇಲ್ಲದೆ ಸರ್ಕಾರ ನಡೆಸಲಾಗುತ್ತಿದೆ. ಗ್ಯಾರಂಟಿ ಜಾರಿ ಮಾಡಿ ರಾಜ್ಯದವನ್ನು ಸಾಲಕ್ಕೆ ತಳ್ಳುತ್ತಿದ್ದಾರೆ ಎಂದ ಮಾಜಿ ಸಚಿವ ಸಿ.ಟಿ.ರವಿ
ನವದೆಹಲಿ(ಸೆ.01): ಕಾಂಗ್ರೆಸ್ಗೆ ರಾಜ್ಯದ ಹಿತಕ್ಕಿಂತ ‘ಇಂಡಿಯಾ’ ಒಕ್ಕೂಟ ಮುಖ್ಯವಾಗಿದೆ. ಅದಕ್ಕಾಗಿ ಕೇಳುವ ಮೊದಲೇ ತಮಿಳುನಾಡಿಗೆ ನೀರು ಹರಿಸಿದೆ ಎಂದು ಮಾಜಿ ಸಚಿವ ಸಿ.ಟಿ.ರವಿ ಆರೋಪಿಸಿದರು.
ದೆಹಲಿಯಲ್ಲಿ ಗುರುವಾರ ಸುದ್ದಿಗಾರರ ಜತೆಗೆ ಮಾತನಾಡಿ, ಕಾಂಗ್ರೆಸ್ ಸರ್ಕಾರ ಬುಧವಾರ ವೈಭವದ ಸಂಭ್ರಮ(ಗೃಹಲಕ್ಷ್ಮೀ ಗ್ಯಾರಂಟಿ ಉದ್ಘಾಟನೆ ಯೋಜನೆ) ಮಾಡಿದೆ. ಆದರೆ ರಾಜ್ಯದ ಜನ ಸಂಭ್ರಮಿಸುವ ಸ್ಥಿತಿಯಲ್ಲಿಲ್ಲ. ರಾಜ್ಯದಲ್ಲಿ ಶೇ.70ರಷ್ಟು ಮಳೆ ಕೊರತೆಯಾಗಿದೆ. ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಆದರೆ ಕಾಂಗ್ರೆಸ್ ಪಕ್ಷ ಸಂಭ್ರಮ ಮಾಡುತ್ತಿದೆ. ರಾಜ್ಯದ ಹಿತ ಕಾಪಾಡುವ ಕ್ರಮ ತೆಗೆದುಕೊಳ್ಳಬಹುದಿತ್ತು. ತಮಿಳುನಾಡು ಕೇಳುವ ಮೊದಲೇ ನೀರು ಹರಿಸಿದೆ ಎಂದರು.
ಭ್ರಮೆಯಲ್ಲಿರೋ ದುರಂಹಕಾರಿ ಬಳಿ ನಾನು ಮಾತಾಡಲ್ಲ: ಸಿ.ಟಿ.ರವಿ ವಿರುದ್ಧ ರೇಣು ಕಿಡಿ
ರಾಜ್ಯದಲ್ಲಿ ಉದ್ಯೋಗ ಸೃಷ್ಟಿ ಮಾಡದೆ ಇದ್ದರೆ ಕಷ್ಟವಾಗಲಿದೆ. ಬೆಲೆ ಏರಿಕೆ ಹಣದುಬ್ಬರಕ್ಕೆ ಕಾರಣವಾಗಲಿದೆ. ಮೂಲಸೌಕರ್ಯಕ್ಕೆ ಸರ್ಕಾರ ಒತ್ತು ನೀಡುತ್ತಿಲ್ಲ. ದೂರದೃಷ್ಟಿ ಇಲ್ಲದೆ ಸರ್ಕಾರ ನಡೆಸಲಾಗುತ್ತಿದೆ. ಗ್ಯಾರಂಟಿ ಜಾರಿ ಮಾಡಿ ರಾಜ್ಯದವನ್ನು ಸಾಲಕ್ಕೆ ತಳ್ಳುತ್ತಿದ್ದಾರೆ ಎಂದರು.
ಇದೇ ವೇಳೆ ಕಾಂಗ್ರೆಸ್ ವರಿಷ್ಠ ರಾಹುಲ್ ಗಾಂಧಿ ಕೇರಳದ ಸಂಸದ. ಅಲ್ಲದೆ, ಯಾವುದೇ ಸಾಂವಿಧಾನಿಕ ಹುದ್ದೆಯನ್ನೂ ಹೊಂದಿಲ್ಲ. ಆದರೂ ಅವರು ರಾಜ್ಯ ಸರ್ಕಾರದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ ಎಂದು ಕಿಡಿಕಾರಿದರು.
