ಮಾಜಿ ಶಾಸಕ ಎಂ.ಪಿ.ರೇಣುಕಾಚಾರ್ಯ ಅವರು ಮಾಜಿ ಸಚಿವ ಸಿ.ಟಿ.ರವಿ ಮತ್ತಿತರ ಸ್ವಪಕ್ಷದ ಮುಖಂಡರ ವಿರುದ್ಧ ಮತ್ತೆ ಕಿಡಿಕಾರಿದ್ದಾರೆ. ಅವರೆಲ್ಲ ಭ್ರಮಾಲೋಕದಲ್ಲಿದ್ದು, ಸರ್ವಾಧಿಕಾರ, ದುರಹಂಕಾರದಲ್ಲಿದ್ದಾರೆ ಎಂದು ಹರಿಹಾಯ್ದಿದ್ದಾರೆ.
ದಾವಣಗೆರೆ (ಆ.31): ಮಾಜಿ ಶಾಸಕ ಎಂ.ಪಿ.ರೇಣುಕಾಚಾರ್ಯ ಅವರು ಮಾಜಿ ಸಚಿವ ಸಿ.ಟಿ.ರವಿ ಮತ್ತಿತರ ಸ್ವಪಕ್ಷದ ಮುಖಂಡರ ವಿರುದ್ಧ ಮತ್ತೆ ಕಿಡಿಕಾರಿದ್ದಾರೆ. ಅವರೆಲ್ಲ ಭ್ರಮಾಲೋಕದಲ್ಲಿದ್ದು, ಸರ್ವಾಧಿಕಾರ, ದುರಹಂಕಾರದಲ್ಲಿದ್ದಾರೆ ಎಂದು ಹರಿಹಾಯ್ದಿದ್ದಾರೆ. ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ ಕೇವಲ ಬಿಜೆಪಿ ಕಚೇರಿಯಲಿಲ ಕೂತು ಆಡಳಿತ ಮಾಡುವುದಲ್ಲ ಎಂದ ರೇಣುಕಾಚಾರ್ಯ, ಭ್ರಮಾಲೋಕದಲ್ಲಿರುವವರು, ಸರ್ವಾಧಿಕಾರ, ದುರಂಹಕಾರದಲ್ಲಿರುವವರ ಬಳಿ ನಾನು ಮಾತನಾಡುವುದಿಲ್ಲ ಎಂದರು. ಜತೆಗೆ, ವಿಧಾನಸಭೆ ಚುನಾವಣೆ ಸೋಲಿನ ನೈತಿಕ ಹೊಣೆ ಹೊತ್ತು ರಾಜ್ಯಾಧ್ಯಕ್ಷರು ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಡಬೇಕಿತ್ತು.
ಆದರೆ, ಅಂಥ ಕೆಲಸವೂ ಆಗಿಲ್ಲ. ನಮ್ಮದೇ ಸರ್ಕಾರವಿದ್ದಾಗ 6 ಸಚಿವ ಸ್ಥಾನಗಳನ್ನು ಯಾರಿಗೂ ನೀಡದೆ, ಹಾಗೆಯೇ ಉಳಿಸಿಕೊಂಡರು. ನಿಗಮ ಮಂಡಳಿ ಅಧ್ಯಕ್ಷ ಸ್ಥಾನಗಳನ್ನೂ ಪಕ್ಷದ ಕಾರ್ಯಕರ್ತರಿಗೆ ಸರಿಯಾಗಿ ಹಂಚಿಕೆ ಮಾಡಲಿಲ್ಲ ಎಂದು ಕಿಡಿಕಾರಿದರು. ಕಾರ್ಯಕರ್ತರು ಇರುವುದು ಬಾವುಟ ಹಿಡಿಯಲು, ಜಯಕಾರ ಹಾಕುವುದಕ್ಕೆ ಮಾತ್ರನಾ? ರಾಜ್ಯದಲ್ಲಿ ಪಕ್ಷವನ್ನು ಬೇರು ಮಟ್ಟದಿಂದ ಕಟ್ಟಿಬೆಳೆಸಿ, ಅಧಿಕಾರಕ್ಕೂ ತಂದ ಹಿರಿಯ ನಾಯಕ ಬಿ.ಎಸ್.ಯಡಿಯೂರಪ್ಪನವರನ್ನೇ ಮೂಲೆಗುಂಪು ಮಾಡಿದರು. ಆದ್ದರಿಂದಲೇ ನಾನು ಮಾತನಾಡುತ್ತಿದ್ದೇನೆ. ಇನ್ನಾದರೂ ಭ್ರಮಾಲೋಕದಿಂದ ಕೆಲವರು ಹೊರ ಬರಲಿ. ಸರ್ವಾಧಿಕಾರ, ದುರಂಹಕಾರ ಬಿಡಲಿ ಎಂದು ಸೂಚ್ಯವಾಗಿ ಹೇಳಿದರು.
ರಾಜಕಾರಣದಿಂದ ಹೊರಗೆ ಹೆಜ್ಜೆ ಇಟ್ಟಿಲ್ಲ, ಸಮಯ, ಸಂದರ್ಭ ಎಲ್ಲದಕ್ಕೂ ಉತ್ತರ ಕೊಡುತ್ತೆ: ನಿಖಿಲ್
ರಾಜಕೀಯ ಪ್ರಚಾರಕ್ಕಾಗಿ ಸಿಎಂ,ಡಿಸಿಎಂ ಭೇಟಿ: ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಪ್ರಚಾರದ ರಾಜಕೀಯ ಮಾಡುತ್ತಾರೆ. ವಿಪಕ್ಷದ ಮುಖಂಡರಿಗೆ ಸದ್ಯ ಯಾವುದೇ ಕೆಲಸವಿಲ್ಲ. ಆದ್ದರಿಂದ ಸಿಎಂ, ಡಿಸಿಎಂ, ಸಚಿವರ ಕಾದಿದ್ದು, ಹೋಗಿ ಮಾತನಾಡಿಸಿ ಬರುತ್ತಾರೆ. ನಮ್ಮ ಕ್ಷೇತ್ರದಲ್ಲಿ ಸಾಕಷ್ಟುಕೆಲಸವಿದ್ದು, ಕಾಯುವುದಕ್ಕೆ ಸಮಯ ಇಲ್ಲ ಎಂದು ಚನ್ನಗಿರಿ ಶಾಸಕ ಬಸವರಾಜು ವಿ.ಶಿವಗಂಗಾ ಹೇಳಿದರು. ಚನ್ನಗಿರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ರೇಣುಕಾಚಾರ್ಯ ಪ್ರಚಾರಕ್ಕಾಗಿ ನಮ್ಮ ನಾಯಕರ ಭೇಟಿ ಮಾಡುವುದು ಸರಿಯಲ್ಲ. ರೇಣುಕಾಚಾರ್ಯ ಕಾಂಗ್ರೆಸ್ ಪಕ್ಷಕ್ಕೆ ಸೇರುತ್ತಾರೆಂದರೆ ನಾನೇ ಮುಂದೆ ನಿಂತು ಸ್ವಾಗತಿಸುತ್ತೇನೆ.
ಯಾರೇ ನಮ್ಮ ಪಕ್ಷಕ್ಕೆ ಬಂದರೂ ಸ್ವಾಗತಿಸುತ್ತೇವೆ ಎಂದರು. ಚನ್ನಗಿರಿ ಕ್ಷೇತ್ರದಲ್ಲಿ ನನಗೆ ವರ್ಗಾವಣೆ ಅವಶ್ಯಕತೆ ಇಲ್ಲ. ಯಾವ ಅಧಿಕಾರಿಗಳು ನಮ್ಮ ಕ್ಷೇತ್ರಕ್ಕೆ ಬಂದರೂ ಕೆಲಸ ಮಾಡಬೇಕು. ಆಸ್ಪತ್ರೆಗೆ ಇಂಜಿನಿಯರ್ ಬಂದು ಕೆಲಸ ಮಾಡುವುದಕ್ಕೆ ಆಗುವುದಿಲ್ಲ. ಅದೇ ವೈದ್ಯರೇ ಬರಬೇಕು. ಇರುವ ವೈದ್ಯರೆ ಬಂದು ಕೆಲಸ ಮಾಡುತ್ತಾರೆ. ಅಧಿಕಾರಿಗಳು ಯಾರೇ ಆಗಿದ್ದರೂ, ಕೆಲಸ ತೆಗೆದುಕೊಳ್ಳುವುದು ನಮ್ಮ ಕೈಯಲ್ಲೇ ಇದೆ. ವರ್ಗಾವಣೆ ಮಾಡಿಸಿ, ನಾವೇನೂ ಮಾಡಬೇಕಾಗಿಲ್ಲ. ನಾವು ಯಾರಿದ್ದರೂ ಕೆಲಸ ತೆಗೆದುಕೊಳ್ಳುತ್ತೇನೆ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
ಸತತ 2 ಬಾರಿ ಶಾಸಕರನ್ನಾಗಿ ಆಯ್ಕೆ ಮಾಡಿದಲ್ಲಿ ಸಕಲ ಸೌಲಭ್ಯ ಕಲ್ಪಿಸುವೆ: ಪ್ರದೀಪ್ ಈಶ್ವರ್
ಶೇ.38 ಮಳೆ ಕೊರೆತೆ; ವರದಿ ಕೊಡಲು ಹೇಳಿರುವೆ: ಮಳೆ ಕೈಕೊಟ್ಟ ಹಿನ್ನೆಲೆಯಲ್ಲಿ ಚನ್ನಗಿರಿ ತಾಲೂಕು ಬರ ಪೀಡಿತ ಪ್ರದೇಶವೆಂದು ಘೋಷಿಸುವಂತೆ ಸಂಬಂಧಿಸಿದ ಸಚಿವರಿಗೆ ಪ್ರಸ್ತಾವನೆ ಸಲ್ಲಿಸಿ, ಮನವಿ ಮಾಡಿದ್ದೇವೆ. ಶೇ.60ಕ್ಕಿಂತ ಹೆಚ್ಚು ಮಳೆ ಕೊರತೆಯಾದರೆ, ಬರ ಪೀಡಿತ ಪ್ರದೇಶದ ವ್ಯಾಪ್ತಿಗೆ ಬರುತ್ತದೆ. ಆದರೆ, ನಮ್ಮ ತಾಲೂಕಿನಲ್ಲಿ ಶೇ.38ರಷ್ಟುಮಳೆ ಕೊರತೆ ಇದೆ. ಕೃಷಿ ಅಧಿಕಾರಿಗಳು, ತಹಸೀಲ್ದಾರರಿಂದ ವರದಿ ನೀಡುವಂತೆ ಸೂಚನೆ ನೀಡಿದ್ದೇನೆ.
