Asianet Suvarna News Asianet Suvarna News
breaking news image

ಮೈಸೂರು, ಚಾಮರಾಜನಗರ ಜಿಲ್ಲೆಗಳಲ್ಲಿ ನಾಳೆ ಸರ್ಕಾರಿ ‌ರಜೆ

ಸಂಸದ ವಿ. ಶ್ರೀನಿವಾಸ ಪ್ರಸಾದ್ ನಿಧನರಾದ ಹಿನ್ನೆಲೆಯಲ್ಲಿ ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಯ ಎಲ್ಲಾ ಸರ್ಕಾರಿ ಕಛೇರಿಗಳಿಗೂ ಹಾಗೂ ಎಲ್ಲಾ ಶಾಲಾ ಕಾಲೇಜುಗಳಿಗೂ ರಜೆ ಘೋಷಣೆ ಮಾಡಲಾಗಿದೆ.

Mysuru and Chamarajanagar districts government holiday on April 30 for MP Srinivas prasad died sat
Author
First Published Apr 29, 2024, 6:35 PM IST

ಮೈಸೂರು/ ಚಾಮರಾಜನಗರ (ಏ.29): ಮಾಜಿ ಸಚಿವರು ಹಾಗೂ ಸಂಸದರೂ ಆಗಿರುವ ವಿ. ಶ್ರೀನಿವಾಸ ಪ್ರಸಾದ್ ನಿಧನರಾದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದಿಂದ ತೀವ್ರ ಸಂತಾಪ ವ್ಯಕ್ತಪಡಿಸಲಾಗಿದೆ. ಜೊತೆಗೆ, ದಿವಂಗತರ ಗೌರವಾರ್ಥವಾಗಿ ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಯ ಎಲ್ಲಾ ಸರ್ಕಾರಿ ಕಛೇರಿಗಳಿಗೂ ಹಾಗೂ ಎಲ್ಲಾ ಶಾಲಾ ಕಾಲೇಜುಗಳಿಗೂ (ಪೂರ್ವ ನಿಗದಿಯಾಗಿರುವ ಪರೀಕ್ಷೆಗಳನ್ನು ಹೊರತುಪಡಿಸಿ), ಅನುದಾನ ಪಡೆಯುವ ಎಲ್ಲಾ ವಿದ್ಯಾ ಸಂಸ್ಥೆಗಳಿಗೂ  ಏ.30ರ ಮಂಗಳವಾರ ರಜೆ ಘೋಷಿಸಲಾಗಿದೆ.

ಸರ್ಕಾರದಿಂದ ಹೊರಡಿಸಲಾದ ಈ ಆದೇಶದವು ನೆಗೋಷಿಯೇಬಲ್ ಇನ್ಸ್‌ ಸ್ಟ್ರುಮೆಂಟ್ ಆಕ್ಟ್ 1881ರ ಪ್ರಕಾರವು ಕೂಡ ಸಾರ್ವಜನಿಕ ರಜೆ ಎಂದು ಘೋಷಿಸಲಾಗಿದೆ. ಮೃತರ ಅಂತ್ಯಕ್ರಿಯೆಯನ್ನು ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿಸುವಂತೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಅಧೀನ ಕಾರ್ಯದರ್ಶಿ ವಿನಯ್ ಕುಮಾರ್ ಅವರು ರಾಜ್ಯಪಾಲರ ಆಜ್ಞಾನುಸಾರ ಆದೇಶ ಹೊರಡಿಸಿದ್ದಾರೆ.

ಶೋಷಿತ ವರ್ಗದ ದನಿಯಾಗಿದ್ದರು, ಯಾವುದೇ ಕಪ್ಪು ಚುಕ್ಕೆ ಇಲ್ಲದೆ ರಾಜಕೀಯ: ಜಿ ಟಿ ದೇವೇಗೌಡ

ವಿ ಶ್ರೀನಿವಾಸ ಪ್ರಸಾದ್ (Srinivasa Prasad death) ಅಗಲಿಕೆಗೆ ಸುತ್ತೂರು ಶ್ರೀ(Suttur shree) ಸಂತಾಪ ಸೂಚಿಸಿದ್ದಾರೆ. ಶ್ರೀನಿವಾಸ ಪ್ರಸಾದ್ ರಾಜಕೀಯ ಕ್ಷೇತ್ರದ ಧೃವತಾರೆ, ಸ್ವಂತ ಪ್ರತಿಭೆಯಿಂದ ಬೆಳೆದ ವ್ಯಕ್ತಿ ಶ್ರೀನಿವಾಸ ಪ್ರಸಾದ್ ದಲಿತರ ಧ್ವನಿಯಾಗಿದ್ದರು. ಹಾಗೆಯೇ ಶೋಷಣೆಗಳ ವಿರುದ್ಧ ಧ್ವನಿ ಎತ್ತುತ್ತಿದ್ದ ಅಪರೂಪದ ವ್ಯಕ್ತಿ ಇವರು, ತಮ್ಮ ಸಿದ್ಧಾಂತಗಳಿಗೆ ಸದಾ ಬದ್ಧರಾಗಿ ಕೆಲಸ ಮಾಡಿದರು ಎಂದು ಮೈಸೂರಲ್ಲಿ ದೇಶೀಕೇಂದ್ರ ಸ್ವಾಮೀಜಿ (sutturu shree Deshikendra Swamiji) ಹೇಳಿಕೆ ನೀಡಿದ್ದಾರೆ. ಹಾಗೆಯೇ ಸುತ್ತೂರು ಸ್ವಾಮೀಜಿ ಅವರು ಅಂತಿಮ ದರ್ಶನ ಪಡೆದು ನಂತರ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದ್ದಾರೆ. ಜೊತೆಗೆ ಪಾರ್ಥೀವ ಶರೀರದ ಸಾರ್ವಜನಿಕ ದರ್ಶನದ ಬಗ್ಗೆ ಶ್ರೀಗಳು ಮಾಹಿತಿ ಪಡೆದುಕೊಂಡಿದ್ದರು.

ನಮ್ಮ ಹೆಚ್.ಡಿ.ರೇವಣ್ಣ ಸಾಹೇಬ್ರು ದೇವರಂತೋರು, ಕಂಪ್ಲೇಂಟ್‌ ಕೊಟ್ಟಿರೋ ನನ್ ಸೊಸೆ ನಡತೆಯೇ ಸರಿಯಿಲ್ಲ

ಮಧ್ಯರಾತ್ರಿಯೇ ಪ್ರಾಣತ್ಯಾಗ ಮಾಡಿದ ಸಂಸದ: ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಹಾಲಿ ಸಂಸದ ಶ್ರೀನಿವಾಸ್ ಪ್ರಸಾದ್ ಅವರು ಕಳೆದ ಸೋಮವಾರವೇ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ, ಆರೋಗ್ಯದಲ್ಲಿ ಚೇತರಿಕೆ ಕಾಣಿಸಿಕೊಂಡಿದ್ದರಿಂದ ಮನೆಗೆ ಕರೆದುಕೊಂಡು ಬಂದಿದ್ದೆವು. ಮನೆಗೆ ಬಂದ ನಂತರ ಪುನಃ ಆರೋಗ್ಯದಲ್ಲಿ ಏರು ಪೇರಾಗಿದ್ದು, ಪುನಃ ಆಸ್ಪತ್ರೆಗೆ ಕರೆದುಕೊಂಡು ಬರಲಾಗಿತ್ತು. ಆದರೆ, ಈ ಬಾರಿ ಚಿಕಿತ್ಸೆಗೆ ಸ್ಪಂದಿಸದೇ ತೀವ್ರ ಹೃದಯಾಘಾತ ಸಂಭವಿಸಿದೆ. ಇದರಿಂದ ಆಸ್ಪತ್ರೆಯಲ್ಲಿಯೇ ಮಧ್ಯರಾತ್ರಿ 1.20ಕ್ಕೆ ಕೊನೆಯುಸಿರೆಳೆದಿದ್ದಾರೆ ಎಂದು ಕುಟುಂಬಸ್ಥರು ಮಾಹಿತಿ ನೀಡಿದ್ದರು.

 

Latest Videos
Follow Us:
Download App:
  • android
  • ios