ಮಂಡ್ಯ(ಫೆ.18): ಮಾಜಿ ಸಿಎಂ ಹಾಗೂ ಕರ್ನಾಟಕ ಕಾಂಗ್ರೆಸ್ ಹಿರಿಯ ನಾಯಕ ಸಿದ್ದರಾಮಯ್ಯರವರ ಅಭಿಮಾನಿ ಬಳಗ ಬಹಳ ದೊಡ್ಡದು. ತಮ್ಮ ಅಧಿಕಾರವಧಿಯಲ್ಲಿ ತಮ್ಮ ಅಭಿವೃದ್ಧಿ ಕಾರ್ಯಗಳಿಂದ ಗುರುತಿಸಿಕೊಂಡಿರುವ ಇವರು, ಆ ಜನಪರ ಕಾರ್ಯಗಳಿಂದ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಅದರಲ್ಲೂ ವಿಶೇಷವಾಗಿ ಅಹಿಂದ ಹೋರಾಟದ ಬಳಿಕ ಇವರ ಅಭಿಮಾನಿಗಳ ಸಂಖ್ಯೆ ಮತ್ತಷ್ಟು ವಿಸ್ತರಿಸಿದೆ. ಆದರೀಗ ಅವರ ಅಭಿಮಾನಿಯೊಬ್ಬ ಆತ್ಮಹತ್ಯೆಗೆ ಶರಣಾಗಿದ್ದಾರೆ. ಹೀಗಿರುವಾಗ ತನ್ನ ಅಭಿಮಾನಿಯ ಕೊನೆ ಆಸೆ ಈಡೇರಿಸಲು ಸಿದ್ದರಾಮಯ್ಯನವರು ಮಂಡ್ಯ ಜಿಲ್ಲೆಯ ಗ್ರಾಮವೊಂದಕ್ಕೆ ಭೇಟಿ ನೀಡುತ್ತಿದ್ದಾರೆ. 

ಶೀಘ್ರ ದೇಶಕ್ಕೆ ಮಾದರಿಯಾಗುವ ಮರಳು ನೀತಿ: ಸಚಿವ ಮುರುಗೇಶ್‌ ನಿರಾಣಿ

ಹೌದು ಮಂಡ್ಯ ಜಿಲ್ಲೆಯ ಕೆರಗೋಡು ಹೋಬಳಿಯ ಕೋಡಿದೊಡ್ಡಿ ಗ್ರಾಮದ ಯುವಕ ಕೃಷ್ಣ ಎಂಬಾತ ಮಾಜಿ ಸಿಎಂ ಸಿದ್ದರಾಮಯ್ಯನವರ ಅಪ್ಪಟ ಅಭಿಮಾನಿ. ಆದರೆ ಜೀವನದಲ್ಲಿ ಜಿಗುಸ್ಪೆಗೊಂಡಿದ್ದ ಈ ಯುವಕ ಆತ್ಮಹತ್ಯೆಗೆ ಶರಣಾಗಿದ್ದಾನೆ. ಆದರೆ ಆತ್ಮಹತ್ಯೆಗೂ ಮುನ್ನ ಬರೆದಿರುವ ಡೆತ್‌ನೋಟ್‌ನಲ್ಲಿ ಎರಡು ಇಚ್ಛೆಗಳನ್ನು ವ್ಯಕ್ತಪಡಿಸಿದ್ದಾನೆ. ಇದೇ ಕಾರಣದಿಂದಾಗಿ ಸದ್ಯ ಸಿದ್ದರಾಮಯ್ಯನವರು ಮಂಡ್ಯಕ್ಕೆ ಭೇಟಿ ನಿಡಲಿದ್ದಾರೆ.

ಡೆತ್‌ ನೋಟ್‌ ಬರೆದಿರುವ ಕೃಷ್ಣ ತಾನು ಸ್ಯಾಂಡಲ್‌ವುಟ್‌ ರಾಕಿಂಗ್ ಸ್ಟಾರ್ ಯಶ್‌ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯನವರ ಅಪ್ಪಟ ಅಭಿಮಾನಿ ಹೀಗಾಗಿ ತನ್ನ ಅಂತ್ಯಕ್ರಿಯೆಗೆ ಇವರಿಬ್ಬರೂ ಭಾಗಿಯಾಗಬೇಕು. ಇದು ತನ್ನ ಕೊನೆಯ ಇಚ್ಛೆ ಎಂದು ಬರೆದಿದ್ದಾರೆ.

ರಾಮನ ಹೆಸರಲ್ಲಿ ಪುಂಡ-ಪೋಕರಿಗಳಿಂದ ಹಣ ಸಂಗ್ರಹ: ಮತ್ತೆ ಸಿಡಿದ ಕುಮಾರಸ್ವಾಮಿ

ಹೀಗಿರುವಾಗ ತನ್ನ ಅಭಿಮಾನಿಯ ಕೊನೆ ಇಚ್ಛೆಯಂತೆ ಸಿದ್ದರಾಮಯ್ಯನವರು ಕೋಡಿದೊಡ್ಡಿ ಗ್ರಾಮಕ್ಕೆ ತೆರಳಿ ಈ ಯುವಕ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲಿದ್ದಾರೆ.