ಕಾಂಗ್ರೆಸ್ ಗೆ ಹೋಗದಿದ್ರೆ ಸಿಎಂ ಆಗ್ತಿರಲಿಲ್ಲ: ಸಿದ್ದು!
ಸಿದ್ದರಾಮಯ್ಯ ಕಾಂಗ್ರೆಸ್ ಸೇರಿದ್ದೇಕೆ ಅಂತಾ ಗೊತ್ತಾ?! ಕಾಂಗ್ರೆಸ್ ಸೇರಿರದಿದ್ದರೆ ಸಿದ್ದು ಸಿಎಂ ಆಗ್ತಿರಲಿಲ್ವಂತೆ! ಜಮಖಂಡಿಯಲ್ಲಿ ಮನದಾಳದ ಮಾತು ಬಿಚ್ಚಿಟ್ಟ ಸಿದ್ದು! ‘ಮತ್ತೆ ಸಿಎಂ ಆಗ್ತಿನಿ ಎಂಬ ಹೊಟ್ಟೆಕಿಚ್ಚಿನಿಂದ ನನ್ನನ್ನು ಸೋಲಿಸಿದರು’!
‘ನಾನು ಬಾದಾಮಿ ಕ್ಷೇತ್ರದ ಮತದಾರರ ಋಣ ತೀರಿಸಬೇಕಿದೆ’
ಮಲ್ಲಿಕಾರ್ಜುನ ಹೊಸಮನಿ
ಜಮಖಂಡಿ(ಅ.28): ಜಮಖಂಡಿ ಉಪ ಚುನಾವಣೆಯ ಪ್ರಚಾರದಲ್ಲಿ ತೊಡಗಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ತಾವೇಕೆ ಕಾಂಗ್ರೆಸ್ ಪಕ್ಷ ಸೇರಿದ್ದು ಎಂಬ ಪ್ರಶ್ನೆಗೆ ಉತ್ತರಿಸಿದ್ದಾರೆ.
‘ನಾನು ಕಾಂಗ್ರೆಸ್ ಗೆ ಹೋಗದೇ ಇದ್ದರೆ ಈ ರಾಜ್ಯದ ಮುಖ್ಯಮಂತ್ರಿಯೇ ಆಗುತ್ತಿರಲಿಲ್ಲ..’ ಎಂದು ಸಿದ್ದರಾಮಯ್ಯ ತಮ್ಮ ಮನದಾಳದ ಮಾತನ್ನು ಬಿಚ್ಚಿಟ್ಟಿದ್ದಾರೆ.
ಜಮಖಂಡಿ ಮತಕ್ಷೇತ್ರದ ಕುರುಬ ಸಮುದಾಯದ ಮುಖಂಡರು ಕರೆದ ಸಭೆಯಲ್ಲಿ ಮಾತನಾಡಿದ ಸಿದ್ದು , ಮೈಸೂರಲ್ಲಿ ಸಿದ್ದರಾಮಯ್ಯ ಮತ್ತೊಮ್ಮೆ ಮುಖ್ಯಮಂತ್ರಿ ಆಗ್ತಾನೆ ಎಂದು ಹೊಟ್ಟೆ ಕಿಚ್ಚಿನಿಂದ ತಮ್ಮನ್ನು ಸೋಲಿಸಿದರು ಎಂದು ಆಕ್ರೋಶ ವ್ಯಕ್ತಪಡಿಸಿದರು.
"
ರಾಹು,ಕೇತು,ಶನಿ,ಎಲ್ಲರೂ ಒಂದಾಗಿ ಸೇರಿಕೊಂಡು ನನ್ನನ್ನು ಸೋಲಿಸಿದ್ರೂ, ಬಾದಾಮಿ ಜನ ನನ್ನನ್ನು ಕೈಹಿಡಿದು ರಾಜಕೀಯ ಶಕ್ತಿ ತುಂಬಿದರು ಎಂದು ಸಿದ್ದರಾಮಯ್ಯ ಹೇಳಿದರು.
ನಾನು ಮತ್ತೊಮ್ಮೆ ಮುಖ್ಯಮಂತ್ರಿ ಆಗದೇ ಇರಬಹುದು. ಆದರೆ ಜನರ ಪ್ರೀತಿ, ವಿಶ್ವಾಸ, ಅಭಿಮಾನ ಉಳಿಸಿಕೊಂಡಿದ್ದೇನೆ. ನನ್ನನ್ನು ಮೈಸೂರಿನಿಂದ ಓಡಿಸಿಬಿಟ್ಟಿದ್ದಾರೆ. ಹಾಗಾಗಿ ನಾನು ಈಗ ಬಾಗಲಕೋಟೆ ಜಿಲ್ಲೆಯವನು ಎಂದು ಸಿದ್ದರಾಮಯ್ಯ ಘೋಷಿಸಿದರು.