Asianet Suvarna News Asianet Suvarna News

ಕಲಬುರಗಿ: ಮಾಜಿ ಸಿಎಂ ವೀರೇಂದ್ರ ಪಾಟೀಲ್‌ರ ಪತ್ನಿ ವಿಧಿವಶ

ಮಾಜಿ ಸಿಎಂ ವೀರೇಂದ್ರ ಪಾಟೀಲ್‌ರ ಪತ್ನಿ 93 ವರ್ಷದ ಶಾರದಾ ಪಾಟೀಲ್ ಅವರು ವಯೋಸಹಜ ಕಾಯಿಲೆಗಳಿಂದ ಬೆಂಗಳೂರಿನ ಸದಾಶಿವನಗರದಲ್ಲಿನ ಮನೆಯಲ್ಲಿ ನಿಧನರಾಗಿದ್ದಾರೆ. 

Former CM Late Veerendra Patil's Wife Sharada Patil Passed Away in Bengaluru grg
Author
First Published Sep 26, 2023, 10:50 AM IST

ಬೆಂಗಳೂರು/ಕಲಬುರಗಿ(ಸೆ.26): ಮಾಜಿ ಮುಖ್ಯಮಂತ್ರಿ ದಿ.ವೀರೇಂದ್ರ ಪಾಟೀಲ್ ಅವರ ಪತ್ನಿ ಶಾರದಾ ಪಾಟೀಲ್(93) ಇಂದು(ಮಂಗಳವಾರ) ಬೆಂಗಳೂರಿನಲ್ಲಿ ವಿಧಿವಶರಾಗಿದ್ದಾರೆ. 

ಮಾಜಿ ಸಿಎಂ ವೀರೇಂದ್ರ ಪಾಟೀಲ್‌ರ ಪತ್ನಿ 93 ವರ್ಷದ ಶಾರದಾ ಪಾಟೀಲ್ ಅವರು ವಯೋಸಹಜ ಕಾಯಿಲೆಗಳಿಂದ ಬೆಂಗಳೂರಿನ ಸದಾಶಿವನಗರದಲ್ಲಿನ ಮನೆಯಲ್ಲಿ ನಿಧನರಾಗಿದ್ದಾರೆ. 

Dr Kamala Hemmige: ಹಿರಿಯ ಲೇಖಕಿ, ಸಂಶೋಧಕಿ ಡಾ.ಕಮಲಾ ಹೆಮ್ಮಿಗೆ ನಿಧನ

ಮೃತರ ಪಾರ್ಥೀವ ಶರೀರವನ್ನ ಕಲಬುರಗಿ ಜಿಲ್ಲೆಯ ಚಿಂಚೋಳಿಗೆ ತರುವ ಸಾಧ್ಯತೆ. ಚಿಂಚೋಳಿಯ ವೀರೇಂದ್ರ ಪಾಟೀಲ್ ಸಮಾಧಿ ಪಕ್ಕದಲ್ಲಿಯೇ ಅವರ ಪತ್ನಿ ಶಾರದಾ ಪಾಟೀಲ್ ಅವರ ಅಂತ್ಯಕ್ರಿಯೆ ನೆರವೇರಿಸುವ ಸಾಧ್ಯತೆ ಇದೆ. ಶಾರದಾ ಪಾಟೀಲ್ ಅವರು, ಮಾಜಿ ಶಾಸಕ ಕೈಲಾಸನಾಥ ಪಾಟೀಲ್ ಸೇರಿದಂತೆ ಮೂವರು ಮಕ್ಕಳು ಸೇರಿ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. 

Follow Us:
Download App:
  • android
  • ios