Asianet Suvarna News Asianet Suvarna News

ಪ್ರಜ್ವಲ್‌ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣದ ತನಿಖೆ ದಾರಿ ತಪ್ಪುತ್ತಿದೆ: ಕುಮಾರಸ್ವಾಮಿ

ಸಂತ್ರಸ್ತೆಯ ಹಳಿಕೆಯ ರಹಸ್ಯವನ್ನೇ ಕಾಪಾಡುತ್ತಿಲ್ಲವೆಂದ ಮೇಲೆ ಎಸ್‌ಐಟಿ ತನಿಖೆ ದಾರಿ ಬಿಡುತ್ತಿದೆ ಎಂದೇ ತಾನೆ ಅರ್ಥ?. ತನಿಖೆಯ ಅನೇಕ ಸಂಗತಿಗಳು ಸೋರಿಕೆಯಾಗುತ್ತಿರೋದು ಹೇಗೆ? ಯಾರು ಈ ಕೆಲಸ ಮಾಡುತ್ತಿದ್ದಾರೆ?. ಸರಕಾರಕ್ಕೆ ತನಿಖೆ ನಡೆಸೋದಕ್ಕಿಂತ ಜನತೆಗೆ ತೋರಿಸಬೇಕಾಗಿದೆ ಎಂದು ದೂರಿದ ಮಾಜಿ ಸಿಎಂ ಕುಮಾರಸ್ವಾಮಿ 

Former CM HD Kumaraswamy React Prajwal Revanna Sex Scandal Case Investigation grg
Author
First Published May 4, 2024, 5:42 PM IST

ಕಲಬುರಗಿ(ಮೇ.04):  ಹಾಸನ ಜೆಡಿಎಸ್‌ ಸಂಸದ ಪ್ರಜ್ವಲ್‌ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣದ ತನಿಖೆ ದಾರಿ ತಪ್ಪುತ್ತಿದೆ. ಸರಕಾರಕ್ಕೆ ಸರಿಯಾದ ರೀತಿಯಲ್ಲಿ ತನಿಖೆ ಮಾಡೋದಕ್ಕಿಂತ ಏನೆಲ್ಲಾ ಮಾಡುತ್ತಿದ್ದೇವೆಂದು ಟಾಂಟಾಂ ಮಾಡುವ ಉದ್ದೇಶವೇ ಹೆಚ್ಚಾಗಿದೆ ಅನ್ನಿಸುತ್ತಿದೆ.  ಸಂತ್ರಸ್ತೆಯೊಬ್ಬಳ ಹೇಳಿಕೆ ನ್ಯಾಯಾದೀಶರ ಮುಂದೆ ನಾಲ್ಕು ಗೋಡೆಗಳಲ್ಲಿ ಪಡೆದಿರುತ್ತಾರೆ, ಅದೆಲ್ಲವೂ ಮಾಧ್ಯಮಗಳಿಗೆ ಹೇಗೆ ಗೊತ್ತಾಯ್ತು? ಎಂದು ಮಾಜಿ ಸಿಎಂ ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.

ಇಂದು(ಶನಿವಾರ) ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಕುಮಾರಸ್ವಾಮಿ ಅವರು, ಸಂತ್ರಸ್ತೆಯ ಹಳಿಕೆಯ ರಹಸ್ಯವನ್ನೇ ಕಾಪಾಡುತ್ತಿಲ್ಲವೆಂದ ಮೇಲೆ ಎಸ್‌ಐಟಿ ತನಿಖೆ ದಾರಿ ಬಿಡುತ್ತಿದೆ ಎಂದೇ ತಾನೆ ಅರ್ಥ?. ತನಿಖೆಯ ಅನೇಕ ಸಂಗತಿಗಳು ಸೋರಿಕೆಯಾಗುತ್ತಿರೋದು ಹೇಗೆ? ಯಾರು ಈ ಕೆಲಸ ಮಾಡುತ್ತಿದ್ದಾರೆ?. ಸರಕಾರಕ್ಕೆ ತನಿಖೆ ನಡೆಸೋದಕ್ಕಿಂತ ಜನತೆಗೆ ತೋರಿಸಬೇಕಾಗಿದೆ ಎಂದು ದೂರಿದ್ದಾರೆ. 

ಹಾಸನ ರಾಸಲೀಲೆ ಪ್ರಕರಣ: ಕಿಡ್ನಾಪ್‌ ಆಗಿದ್ದ ಸಂತ್ರಸ್ಥೆ ರೇವಣ್ಣ ಆಪ್ತನ ಹುಣಸೂರು ತೋಟದ ಮನೆಯಲ್ಲಿ ಪತ್ತೆ

ಹಾಸನದ ಈ ಪ್ರಕರಣವನ್ನ ಪ್ರಧಾನಿಗೆ ತಳಕು ಹಾಕುತ್ತಿದ್ದಾರೆ ಕಾಂಗ್ರೆಸ್ಸಿಗರು. ಈ ಪ್ರಕರಣಕ್ಕೂ ಪ್ರಧಾನಿಗೂ ಏನು ಸಂಬಂಧ? ಕಾಂಗ್ರೆಸ್ಸಿಗರು ಹೇಳಿಕೆ ಕೊಡುತ್ತ ಇಡೀ ಪ್ರಕರಣದ ದಿಕ್ಕು ತಪ್ಪಿಸುತ್ತಿದ್ದಾರೆ. ಪ್ರಕರಣದ ಎಸ್‌ಐಟಿ ತನಿಖೆ ನಡೆಸೋದ ಅಂದ್ರೆ ಹೀಗೇನಾ ಗೃಹ ಸಚಿವರೆ? ಹೇಳಿ ಏನಿದೆಲ್ಲಾ?. ತನಿಖೆಯ ಅನೇಕ ಸೂಕ್ಷ್ಮ ವಿಷಯಗಳು ಹೇಗೆ ಮಾಧ್ಯಮಗಳಿಗೆ ಸೋರಿಕೆಯಾಗುತ್ತಿವೆ? ಗೃಹ ಸಚಿವರೇ ಉತ್ತರಿಸಲಿ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ಅವರಿಗೆ ಆಗ್ರಹಿಸಿದ್ದಾರೆ.

ಈ ಬಾರಿ ರಾಜ್ಯದಲ್ಲಿ, ದೇಶದಲ್ಲಿ ಬಿಜೆಪಿ ಅಲೆ ಇದೆ, ಮೋದಿಯವರು ಮತ್ತೆ ಪ್ರಧಾನಿ ಆಗಲಿ ಎಂದು ಜನರ ಆಸೆಯಿದೆ. ಲೋಕಸಮರದಲ್ಲಿ ಬಿಜೆಪಿ ಮೈತ್ರಿಕೂಟ ಜಯಭೇರಿ ಬಾರಿಸಲಿದೆ ಎಂದು ಕುಮಾರಸ್ವಾಮಿ ತಿಳಿಸಿದ್ದಾರೆ.

Follow Us:
Download App:
  • android
  • ios