Asianet Suvarna News Asianet Suvarna News

ಪ್ರಧಾನಿ ಬಂದಾಗ, ಜನರ ಸಾಲಲ್ಲಿ ನಿಂತ ಬಿಜೆಪಿ ನಾಯಕರ ನಡೆ ರಾಜ್ಯಕ್ಕೆ ಮಾದರಿ: ಮಾಜಿ ಸಿಎಂ ಬೊಮ್ಮಾಯಿ ಸಮರ್ಥನೆ

ಚಂದ್ರಯಾನ-3 ಯಶಸ್ವಿಯಾದ ಬೆನ್ನಲ್ಲೇ ಇಸ್ರೋ ಸಂಸ್ಥೆಗೆ ಬಂದ ಪ್ರಧಾನಿ ನರೇಂದ್ರ ಮೋದಿ ರೋಡ್‌ ಶೋ ವೇಳೆ ಸಾರ್ವಜನಿಕ ಸಾಲಿನಲ್ಲಿ ನಿಂತ ಬಿಜೆಪಿ ನಾಯಕರ ನಡೆ ಮಾದರಿಯಾಗಿದೆ.

Former CM Basavaraj Bommai said Karnataka BJP leaders action is good model for country sat
Author
First Published Aug 27, 2023, 6:56 PM IST

ಬೆಂಗಳೂರು (ಆ.27): ಚಂದ್ರಯಾನ 3 ಯಶಸ್ಸಿನ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಇಸ್ರೊ ವಿಜ್ಞಾನಿಗಳನ್ನು ಸನ್ಮಾನಿಸಲು ಆಗಮಿಸಿದಾಗ ನಮ್ಮ ಬಿಜೆಪಿ ನಾಯಕರು ಸಾರ್ವಜನಿಕರೊಂದಿಗೆ ನಿಂತು ಮಾದರಿಯ ನಡೆ ಅನುಸರಿಸಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಶೋಭಾ ನಾಗಸಂದ್ರ ಅಪಾರ್ಟ್‌ಮೆಂಟ್ ವೆಲ್ ಫೇರ್ ಅಸೋಸಿಯೇಷನ್ ವತಿಯಿಂದ ಭಾನುವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಚಂದ್ರಯಾನ 3 ಯಶಸ್ವಿ ಉಡಾವಣೆಗೆ ಕಾರಣರಾದ ವಿಜ್ಞಾನಿಗಳಿಗೆ ಸನ್ಮಾನ ಮಾಡಿ, ನಂತರ ಮಾಧ್ಯಮಗಳೊಂದಿಗೆ ಮಾತನಾಡಿದರು. ಪ್ರಧಾನಿಯವರ ಶಿಷ್ಟಾಚಾರ ಪಾಲನೆಯಲ್ಲಿ ರಾಜ್ಯ ಬಿಜೆಪಿ ನಾಯಕರು ರಸ್ತೆಯ ಮಧ್ಯ ಜನರ ಜೊತೆ ನಿಂತ ಕೈ ಬೀಸಿರುವುದಕ್ಕೆ ಕಾಂಗ್ರೆಸ್ ಟೀಕೆ ಮಾಡಿರುವದಕ್ಕೆ ಪ್ರತಿಕ್ರಿಯಿಸಿದ ಅವರು, ಪ್ರೋಟೋಕಾಲ್‌ ಪಾಲನೆಯಲ್ಲಿ ಯಾವುದೇ ಗೊಂದಲ ಇರಲಿಲ್ಲ. ನಾವೆಲ್ಲ ಸಾರ್ವಜನಿಕ ಜೀವನಕ್ಕೆ ಬಂದಿರುವುದು ಸೇವೆ ಮಾಡಲು.ಇಸ್ರೋದಂಥ ಸಂಸ್ಥೆ, ವಿಜ್ಞಾನಿಗಳು ಇಂಥ ದೊಡ್ಡ ಸಾಧನೆ ಮಾಡಿದಾಗ ನಾವು ಒಂದು ಹೆಜ್ಜೆ ಹಿಂದೆ ಸರಿಯಬೇಕು. ನಾವು ಹಿಂದೆ ಸರಿದು ಅವರಿಗೆ ಮಹತ್ವ ಕೊಡಬೇಕು. ಸೇವಾ ಮನೋಭಾವದಿಂದ ಸಾಮಾನ್ಯ ಜನರ ನಡುವೆ ನಮ ನಾಯಕರು ಇದ್ದು ಆ ಕೆಲಸ ಮಾಡಿದ್ದಾರೆ. ಅದನ್ನು ತಿಳಿದುಕೊಳ್ಳುವ, ಹೊಗಳುವ ಮನಸುಗಳು ಬೇಕಷ್ಟೇ ಎಂದರು. 

ಬಿಜೆಪಿ 'ದಂಡ'ನಾಯಕರು, ಚಕ್ರವರ್ತಿಗಳು, ಸಾಮ್ರಾಟರೆಲ್ಲಾ ಬೀದಿ ಪಾಲು: ಕುಟುಕಿದ ಕಾಂಗ್ರೆಸ್‌

ಇಸ್ರೋ ಅಧ್ಯಕ್ಷರು ಮೂರು ನಿಮಿಷ ಮಾತನಾಡಿ ಸಾಧನೆಗೆ ಕಾರಣರಾದವರಿಗೆ ಮುಂದೆ ಬಿಟ್ಟರು. ಇದರರ್ಥ ಇಸ್ರೋ ಅಧ್ಯಕ್ಷರು ಹಿಂದೆ ಸರಿದರು ಅಂತಲ್ಲ. ನಮ್ಮ ನಾಯಕರು ಹಿಂದೆ ಸರಿದು ನಿಂತು ಜನರನ್ನು ಮುಂದೆ ಬಿಟ್ಟಿದ್ದಾರೆ ಎಂದು ಸಮರ್ಥಿಸಿಕೊಂಡರು. ಇಸ್ರೋ ವಿಜ್ಞಾನಿಗಳಿಗೆ ಅಭಿನಂದಿಸಲು ಪ್ರಧಾನಿಯವರು ಬಂದಾಗ ಜನರ ಮಧ್ಯೆ ನಮ್ಮ ನಾಯಕರು ನಿಂತಿದ್ದಾರೆ. ನಮ್ಮ ನಾಯಕರು ಅತ್ಯಂತ ಮಾದರಿಯಾದ ಅನುಕರಣೀಯ ನಡವಳಿಕೆ ತೋರಿದ್ದಾರೆ. ಇವತ್ತಿನ ದಿನ ಎಲ್ಲರೂ ತಮ್ಮ ಸ್ಥಾನಮಾನಕ್ಕೆ ಪೈಪೋಟಿ ಮಾಡುತ್ತಾರೆ. ನಮ್ಮ ನಾಯಕರು ಅತ್ಯಂತ ಅನುಕರಣನೀಯ ಮಾದರಿ ಅನುಸರಿಸಿದ್ದಾರೆ. ಬಿಜೆಪಿ ನಾಯಕರು ಬೀದಿ ಪಾಲಾದರು, ಬ್ಯಾರಿಕೇಡ್ ಬಂಧಿ ಆದರು ಅಂತ ಕಾಂಗ್ರೆಸ್ ನವರು ಹೇಳಿರುವುದು ಅವರ ಮನಸ್ಥಿತಿ ತೋರಿಸುತ್ತದೆ. ಪ್ರಧಾನಿ ನರೇಂದ್ರ ಮೋದಿ ಸ್ವಾಗತಕ್ಕೆ ಶಾಸಕ ಎಸ್.ಟಿ.‌ಸೋಮಶೇಖರ್  ಬಾರದೇ ಇರದಿರುವ ಕುರಿತು ಕೇಳಿದ ಪ್ರಶ್ನೆಗೆ ಅವರ ಜೊತೆ ಮಾತನಾಡಿದ್ದೇನೆ ಎಂದರು. 

ಪಿಎಸ್‌ಐ ನೇಮಕಾತಿ ಹಗರಣದಲ್ಲಿರುವವರ ರಕ್ಷಣೆಗೆ ಸರ್ಕಾರದ ಚಿಂತನೆ: ಹಿಂದಿನ ರಾಜ್ಯ ಸರ್ಕಾರದ ಅವಧಿಯಲ್ಲಿ ಶೇ.40 ಪರ್ಸೆಂಟ್‌ ಕಮೀಷನ್, ಕೋವಿಡ್ ಅಕ್ರಮಗಳ ತನಿಖೆಗೆ ವಿಚಾರಣಾ ಆಯೋಗಗಳ ರಚನೆ ಮಾಡಿರುವ‌ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ವಿಚಾರಣೆ ಆಗಲಿ, ತನಿಖೆ ಆಗಲಿ ಇದರಲ್ಲಿ ಆಶ್ಚರ್ಯ ಏನಿಲ್ಲ. ಈಗಾಗಲೇ ಪಿಎಸ್‌ಐ ನೇಮಕಾತಿ ಕೇಸ್ ತನಿಖೆ ನಡೆದು ಚರ್ಜ್‌ಶೀಟ್ ಆಗಿದೆ. ಇವರು ಚಾರ್ಜ್‌ಶೀಟ್ ನಲ್ಲಿರುವವರ ರಕ್ಷಣೆ ಮಾಡುತ್ತಾರಾ ಅಥವಾ ಇನ್ನೊಂದು ಆಯಾಮದಲ್ಲಿ ತನಿಖೆ ಮಾಡುತ್ತಾರಾ? ಪಿಎಸ್‌ಐ ಕೇಸ್ ನ ತನಿಖೆಯೂ ಪೊಲೀಸರೇ ಮಾಡಬೇಕು ಯಾವ ರೀತಿ ತನಿಖೆ ಮಾಡುತ್ತಾರೆ ಅಂತ ನೋಡೋಣ ಎಂದರು. 

ಮೋದಿ ಕಾರ್ಯಕ್ರಮಕ್ಕೆ ಜನರ ಕಳಿಸಿದೆ, ನನ್ನನ್ನೇ ಕರೆಯಲಿಲ್ಲ: ಎಸ್‌.ಟಿ.ಸೋಮಶೇಖರ್‌

ಶೇ.40 ಪರ್ಸೆಂಟ್‌ ನಿರ್ಧಿಷ್ಟ ಪ್ರಕರಣ ಇಲ್ಲ: ಇನ್ನು 40% ಆರೋಪದಲ್ಲಿ ನಿರ್ದಿಷ್ಟ ಪ್ರಕರಣ ಇಲ್ಲ, ದಾಖಲೆ ಇಲ್ಲ. ಎರಡು ವರ್ಷವಾದರೂ ಅವರು ದಾಖಲೆ ಕೊಟ್ಟಿಲ್ಲ. ಲೋಕಾಯುಕ್ತ ಎದುರು ಹೆಚ್ಚು ಟೆಂಡರ್ ಕೊಟ್ಟ ಹಲವು ಪ್ರಕರಣಗಳು ಇವೆ. ಇವುಗಳನ್ನು ತನಿಖೆಗೆ ಕೊಡುತ್ತಾರಾ? ಹೊಸ ದೂರು ಕೊಟ್ಟರೆ ಇವರು ಸೇರಿಸಿಕೊಳ್ಳುರಾ? ಭ್ರಷ್ಟಾಚಾರ ಯಾವತ್ತಿದ್ದರೂ ಭ್ರಷ್ಟಾಚಾರವೇ, ಅವರ ಕಾಲದ ಆರೋಪಗಳನ್ನು ತನಿಖೆ ಮಾಡ್ತಾರಾ?ನಮ್ಮ ಕಾಲದ ಆರೋಪಗಳನ್ನು ತನಿಖೆ ಮಾಡಿ ಅಂತ ಮುಕ್ತವಾಗಿ ಹೇಳಿದ್ದೇವೆ. ಆದರೆ, ಅವರ ಕಾಲದ ಆರೋಪಗಳ ಬಗ್ಗೆಯೂ ತನಿಖೆ ಮಾಡಲಿ ಅದಕ್ಯಾಕೆ ಹಿಂದೇಟು ಹಾಕ್ತಿದಾರೆ? ರಾಜಕೀಯವಾಗಿ ಸೇಡು ತೀರಿಸಿಕೊಳ್ಳುವ, ರಾಜಕೀಯವಾಗಿ ದುರುಪಯೋಗಪಡಿಸಿಕೊಳ್ಳುವ ಹುನ್ನಾರ ಇದರ ಹಿಂದೆ ಇದೆ ಎಂದರು. 

Follow Us:
Download App:
  • android
  • ios