ಸುಳ್ಳು ಹೇಳಿ ಅಧಿಕಾರಕ್ಕೆ ಬಂದಿರುವ ಬಿಜೆಪಿಯವರು ನಕಲಿ ರಾಷ್ಟ್ರವಾದಿಗಳಾಗಿದ್ದು, ಇಂಥವರಿಗೆ ಎಲ್ಲರೂ ಸೇರಿಕೊಂಡು ಸೋಲಿಸಬೇಕಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಕರೆ ನೀಡಿದರು.

ಬೀದರ್ (ನ.8):  ಸುಳ್ಳು ಹೇಳಿ ಅಧಿಕಾರಕ್ಕೆ ಬಂದಿರುವ ಬಿಜೆಪಿಯವರು ನಕಲಿ ರಾಷ್ಟ್ರವಾದಿಗಳಾಗಿದ್ದು, ಇಂಥವರಿಗೆ ಎಲ್ಲರೂ ಸೇರಿಕೊಂಡು ಸೋಲಿಸಬೇಕಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಕರೆ ನೀಡಿದರು.

ಅವರು ಮಂಗಳವಾರ ನಗರದಲ್ಲಿ ಲೋಕಸಭೆ ಚುನಾವಣೆಗೆ ಪಕ್ಷದ ಅಭ್ಯರ್ಥಿ ಆಯ್ಕೆ ಕುರಿತು ಅಭಿಪ್ರಾಯ ಸಂಗ್ರಹಿಸಲು ಬೀದರ್‌ಗೆ ಆಗಮಿಸಿದ ಕಾರ್ಮಿಕ ಸಚಿವ ಸಂತೋಷ ಲಾಡ್‌ ಅವರ ಸಭೆಯಲ್ಲಿ ಮಾತನಾಡಿ, ಕೋಮುವಾದಿ ಬಿಜೆಪಿ ಪಕ್ಷವನ್ನು ಬುಡ ಸಮೇತ ಕಿತ್ತು ಹಾಕಬೇಕು. ಬೀದರ್ ಜಿಲ್ಲೆಯಲ್ಲಿ ನಾವಿಬ್ಬರೂ ಶಾಸಕರಾಗಿ ಗೆದ್ದು ಸಚಿವರಾಗಿದ್ದೇವೆ. ರಾಜ್ಯದಲ್ಲಿ ನಮ್ಮ ಸರ್ಕಾರ ಜನರಿಗೆ ನೀಡಿದ ಎಲ್ಲ ಭರವಸೆಗಳನ್ನು ಈಡೇರಿಸಿದೆ. ಈಗ ನಮ್ಮ ಯೋಜನೆಗಳು ಜನರಿಗೆ ತಿಳಿ ಹೇಳುವ ಕೆಲಸ ಮಾಡಬೇಕಾಗಿದೆ ಎಂದರು.

ರಾಜ್ಯದ ಅಕ್ರಮ ಆಸ್ತಿಗಳಿಂದ ತೆರಿಗೆ ವಸೂಲಿಗೆ ಚಿಂತನೆ: ಬೆಂಗಳೂರು ಬಿಟ್ಟು ಇತರ ನಗರಗಳಿಗೆ ಅನ್ವಯ

ನಮ್ಮ ಸರ್ಕಾರದ ಶಕ್ತಿ, ಗೃಹಲಕ್ಷ್ಮಿ, ಉಚಿತ ವಿದ್ಯುತ್‌, ಅನ್ನ ಭಾಗ್ಯ ಹೀಗೆ ವಿವಿಧ ಯೋಜನೆಗಳಡಿ ಜಿಲ್ಲೆಗೆ ಸುಮಾರು 1400 ಕೋಟಿ ರು. ಅವರವರ ಖಾತೆಗೆ ನೇರವಾಗಿ ಸೇರುತ್ತಿದೆ. ಬರುವ ಜನವರಿಯಲ್ಲಿ ನಿರುದ್ಯೋಗ ಪದವೀಧರರಿಗೆ ಕೂಡ ಸೌಲಭ್ಯ ನೀಡುತ್ತೇವೆ ಎಂದ ಅವರು, ನಮ್ಮ ಗ್ಯಾರಂಟಿ ಯೋಜನೆಗಳು ಜಾರಿಯಾಗಿದ್ದರಿಂದ ಮಧ್ಯಪ್ರದೇಶ, ರಾಜಸ್ಥಾನದಲ್ಲಿನ ಕಾಂಗ್ರೆಸ್‌ ಪಕ್ಷದ ಮುಖಂಡರಿಗೆ ಹುಮ್ಮಸ್ಸು ಬಂದಿದೆ ಎಂದರು.

ಲೋಕಸಭೆಯ ಚುನಾವಣೆಯಲ್ಲಿ ಯಾರೇ ಅಭ್ಯರ್ಥಿಯಾಗಲಿ, ನಾನೇ ನಿಂತಿದ್ದೇನೆ ಎಂಬ ಭಾವನೆಯಿಂದ ಕೆಲಸ ಮಾಡಬೇಕು. ಪಕ್ಷವು ಯಾರಿಗೆ ಅಭ್ಯರ್ಥಿ ಮಾಡುತ್ತದೆ ಎಂಬುವುದು ವರಿಷ್ಠರಿಗೆ ಬಿಟ್ಟ ವಿಷಯವಾಗಿದೆ ಎಂದು ಈಶ್ವರ ಖಂಡ್ರೆ ತಿಳಿಸಿದರು.

ಮತ್ತೊಮ್ಮೆ ಮೋದಿ ಗೆದ್ದರೆ ಪ್ರಜಾಪ್ರಭುತ್ವ ಉಳಿಯಲ್ಲ

ಆಳಂದ ಕ್ಷೇತ್ರದ ಮಾಜಿ ಶಾಸಕ ಬಿ.ಆರ್‌. ಪಾಟೀಲ್‌ ಮಾತನಾಡಿ, ಬರುವ ಲೋಕಸಭೆ ಚುನಾವಣೆಯಲ್ಲಿ ಮತ್ತೊಮ್ಮೆ ನರೇಂದ್ರ ಮೋದಿ ಗೆದ್ದರೆ ಈ ದೇಶದಲ್ಲಿ ಪ್ರಜಾಪ್ರಭುತ್ವ ಉಳಿಯಲ್ಲ, ಅದಕ್ಕೆ ದೊಡ್ಡ ಅಪಾಯವಿದೆ. ಸರ್ವಾಧಿಕಾರ ತಲೆ ಎತ್ತುತ್ತದೆ ಎಂದು ಭವಿಷ್ಯ ನುಡಿದರು.

ಬೀದರ್‌ ಜಿಲ್ಲೆಯು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಜನ್ಮ ಭೂಮಿಯಾಗಿದೆ. ಇಲ್ಲಿ ಕಾಂಗ್ರೆಸ್‌ ಗೆದ್ದರೆ ನಮ್ಮ ಕೀರ್ತಿ ಇನ್ನೂ ಹೆಚ್ಚುತ್ತದೆ. ಹೀಗಾಗಿ ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿಗೆ ಎಲ್ಲರೂ ಒಟ್ಟಾಗಿ ಗೆಲ್ಲಿಸೋಣ. ಬೀದರ್‌ ಜಿಲ್ಲೆಯ ಪಕ್ಷದ ವರಿಷ್ಠರ ತಿರ್ಮಾನಕ್ಕೆ ಆಳಂದ ಹಾಗೂ ಚಿಂಚೋಳಿದವರೂ ಬದ್ಧರಾಗಿರುತ್ತೇವೆ ಎಂಬ ಭರವಸೆ ನೀಡಿದರು.

ಪ್ರಧಾನಿ ಮೋದಿ ಹೇಳಿಕೆ ಗಮನಿಸಿದ್ರೆ ನಮ್ಮ ಸರ್ಕಾರ ಅಲುಗಾಡಿಸೋ ಪ್ಲಾನ್ ಮಾಡಿದಂತೆ ಭಾಸವಾಗ್ತಿದೆ : ಸಚಿವ ಕೃಷ್ಣ ಬೈರೇಗೌಡ

ಪೌರಾಡಳಿತ ಸಚಿವ ರಹೀಮ ಖಾನ್‌ ಮಾತನಾಡಿ, ನಮ್ಮ ಯೋಜನೆಯ ಲಾಭ ಪಡೆಯುವವರು ನಮಗೆ ಸಹಾಯ ಮಾಡಿದರೆ ಲೋಕಸಭೆ ಚುನಾವಣೆಯಲ್ಲಿ ಕನಿಷ್ಠ 25 ಸ್ಥಾನವನ್ನಾದರೂ ನಾವು ಗೆಲ್ಲಬಹುದು. ಈಗಾಗಲೇ ನಮ್ಮ ಸರ್ಕಾರದ ಯೋಜನೆಗಳು ಎಲ್ಲರ ಮನೆ ಬಾಗಿಲಿಗೆ ಮುಟ್ಟುತ್ತಿವೆ. ನಮ್ಮ ಸರ್ಕಾರ ಕೇವಲ ಮೂರು ತಿಂಗಳಿನಲ್ಲಿ ಎಲ್ಲ ಗ್ಯಾರಂಟಿಗಳನ್ನು ಕೊಟ್ಟಿದೆ ಆದರೆ ಮೋದಿ ಮೇಲೆ ವಿಶ್ವಾಸ ಇಟ್ಟು ಮತ ನೀಡಿದವರಿಗೆ ಇಲ್ಲಿಯವರೆಗೆ ಏನೂ ಸಿಕ್ಕಿಲ್ಲ ಎಂದರು.