ಅಕ್ಕಿ ಖರೀದಿಯೇ ಆಗಿಲ್ಲ, ಅನ್ನಭಾಗ್ಯ ಯೋಜನೆ ವಿಳಂಬ ಆಗಲಿದೆ: ಆಹಾರ ಸಚಿವ ಮುನಿಯಪ್ಪ

ಕೇಂದ್ರ ಸರ್ಕಾರ ಹಾಗೂ ವಿವಿಧ ರಾಜ್ಯಗಳಿಂದ ಅಕ್ಕಿ ಖರೀದಿ ಮಾಡಲಾಗುತ್ತಿದೆ. ಈ ಪ್ರಕ್ರಿಯೆ ವಿಳಂಬವಾಗಲಿದೆ ಎಂದು ಹೇಳುವ ಮೂಲಕ ಅನ್ನಭಾಗ್ಯ ಯೋಜನೆ ಜಾರಿ ವಿಳಂಬದ ಸುಳಿವನ್ನು ಆಹಾರ ಸಚಿವರು ನೀಡಿದ್ದಾರೆ. 

Food Minister Muniyappa said Karnataka Annabhagya scheme implementation will be delayed sat

ಬೆಂಗಳೂರು (ಜೂ.20): ಕೇಂದ್ರ ಸರ್ಕಾರದ ಜೊತೆ ಅಕ್ಕಿ ಖರೀದಿಯ ಪ್ರಯತ್ನದ ಜೊತೆಗೆ ಒರಿಸ್ಸಾ, ಛತ್ತೀಸಗಢ, ಆಂಧ್ರಪ್ರದೇಶ, ತೆಲಂಗಾಣ ಎಲ್ಲಾ ಕಡೆ ಅಕ್ಕಿ ಖರೀದಿಯ ಪ್ರಯತ್ನ ನಡೆಯುತ್ತಿದೆ. ಈ ಪ್ರಕ್ರಿಯೆ ಸ್ವಲ್ಪ ವಿಳಂಬ ಆಗಬಹುದು ಎನ್ನುವ ಮೂಲಕ ಅನ್ನಭಾಗ್ಯ ಯೋಜನೆ ಜಾರಿ ವಿಳಂಬವಾಗಲಿದೆ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆ.ಹೆಚ್. ಮುನಿಯಪ್ಪ ಹೇಳಿದ್ದಾರೆ.

ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಒರಿಸ್ಸಾ, ಛತ್ತೀಸಗಢ, ಆಂಧ್ರ, ತೆಲಂಗಾಣ ಎಲ್ಲಾ ಕಡೆ ಅಕ್ಕಿ ಖರೀದಿಯ ಪ್ರಯತ್ನ ನಡೆಯುತ್ತಿದೆ. ಗ್ಯಾರಂಟಿ ಪ್ರಕಾರ 10 ಕೆ.ಜಿ. ಅಕ್ಕಿ ಕೊಡುತ್ತೇವೆ ಎಂದು ಮಾತು ಕೊಟ್ಟಿದ್ದೇವೆ. ಫುಡ್‌ ಕಾರ್ಪೋರೇಷನ್‌ ಆಫ್‌ ಇಂಡಿಯಾ (ಎಫ್‌ಸಿಐ) ಅಧಿಕಾರಿಗಳು ಅಕ್ಕಿ ಕೊಡುತ್ತೇವೆ ಎಂದು ಜೂ.12ಕ್ಕೆ ಹೇಳಿದ್ದರು. ಆದರೆಮ ಜೂ.13 ಕ್ಕೆ ಕೊಡಲ್ಲ ಅಂತ ಹೇಳಿದ್ದಾರೆ. ಈ ಹಿನ್ನೆಲೆ ಮುಖ್ಯಮಂತ್ರಿ ಸಿದ್ದರಾಂಯ್ಯ ಅವರ ನಿರ್ದೇಶನದ ಮೇರೆಗೆ ನಾಳೆ ದೆಹಲಿಗೆ ತೆರಳುತ್ತೇನೆ. ಕೇಂದ್ರ ಆಹಾರ ಸರಬರಾಜು ಸಚಿವರನ್ನು ಭೇಟಿಯಾಗುತ್ತೇನೆ ಎಂದು ಹೇಳಿದರು. 

ಕರ್ನಾಟಕದ ಅಕ್ಕಿ ಖರೀದಿ ಒಪ್ಪಂದ ರದ್ದುಗೊಳಿಸಿದ ಕೇಂದ್ರ ಸರ್ಕಾರ: ಜುಲೈ 1ರಿಂದ ಅನ್ನಭಾಗ್ಯ ಯೋಜನೆ ಜಾರಿ ಅನುಮಾನ

2.28 ಲಕ್ಷ ಮೆಟ್ರಿಕ್ ಟನ್ ಅಕ್ಕಿ ನಮಗೆ ಬೇಕು: ದೆಹಲಿಯಲ್ಲಿ ಮತ್ತೊಮ್ಮೆ ಕೇಂದ್ರ ಸರ್ಕಾರದಿಂದ ಅಕ್ಕಿ ಖರೀದಿಯ ಪ್ರಯತ್ನ ಮಾಡುತ್ತೇವೆ. ಎಫ್‌ಸಿಐ ಬಳಿ 7 ಲಕ್ಷ ಮೆಟ್ರಿಕ್‌ ಟನ್ ಅಕ್ಕಿ ದಾಸ್ತಾನು ಇದೆ. ಅದರಲ್ಲಿ 2.28 ಲಕ್ಷ ಮೆಟ್ರಿಕ್ ಟನ್ ಅಕ್ಕಿ ನಮಗೆ ಬೇಕಾಗಿದೆ. ಕೇಂದ್ರ ಸರ್ಕಾರದ ಜೊತೆ ಅಕ್ಕಿ ಖರೀದಿಯ ಪ್ರಯತ್ನದ ಜೊತೆಗೆ ಬೇರೆ ರಾಜ್ಯಗಳಿಂದ ಅಕ್ಕಿ ಖರೀದಿಗೆ ಪ್ರಯತ್ನ ಮಾಡುತ್ತೇವೆ. ಆದರೆ, ಈ ಪ್ರಕ್ರಿಯೆ ಸ್ವಲ್ಪ ವಿಳಂಬ ಆಗಬಹುದು. ಕೇಂದ್ರೀಯ ಭಂಡಾರ, ನಾಫೆಡ್, ಎನ್ ಸಿಸಿಎಫ್ ನಿಂದ ಅಕ್ಕಿ ಖರೀದಿ ಮಾಡಬೇಕಾಗಿದೆ. ಇದು ಸ್ವಲ್ಪ ವಿಳಂಬವಾಗಲಿದೆ ಎಂದು ಅನ್ನಭಾಗ್ಯ ಯೋಜನೆ ವಿಳಂಬದ ಬಗ್ಗೆ ಸುಳಿವು ನೀಡಿದರು.

ಅನ್ನಭಾಗ್ಯ ಯೋಜನೆಗೆ ಮತ್ತೆ ಹಿನ್ನಡೆ: ಅಕ್ಕಿ ಸರಬರಾಜು ಸಾಧ್ಯವಿಲ್ಲವೆಂದ ತೆಲಂಗಾಣ ಸರ್ಕಾರ

ಟೆಂಡರ್‌ ಪ್ರಕ್ರಿಯೆ ಮಾಡಲು ತಡವಾಗಲಿದೆ: ರಾಜ್ಯದಿಂದ ಅಕ್ಕಿ ಖರೀದಿ ಮಾಡುವ ಗ್ಗೆ ಕಾನೂನು ಮತ್ತು ಟೆಂಡರ್ ಪ್ರಕ್ರಿಯೆಗಳಿಂದ ಸ್ವಲ್ಪ ವಿಳಂಬವಾಗಲಿದೆ. ಈ ಹಿಂದೆ ಇದೇ ಸಂಸ್ಥೆಗಳು ರಾಜ್ಯಕ್ಕೆ ಅಕ್ಕಿ ಪೂರೈಕೆ ಮಾಡುತ್ತಿದ್ದವು. ಈ ಸಂಸ್ಥೆಗಳಿಗೆ ಆದಷ್ಟು ಬೇಗ ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಲು ಹೇಳಲಾಗಿದೆ. ಸ್ವಲ್ಪ ವಿಳಂಬವಾದರೂ ಅಕ್ಕಿಯನ್ನು ‌ನಾವು ಕೊಡುತ್ತೇವೆ. ಎಲ್ಲಾ ರಾಜ್ಯಗಳಿಂದ ಅಕ್ಕಿ ಖರೀದಿಗೆ ಯತ್ನ ಮಾಡುತ್ತೇವೆ. ಬಹಳ ದೂರದಿಂದ ಬರುವ ಖರೀದಿಸುವ ಸಾಗಣೆ ವೆಚ್ಚ ಹೆಚ್ಚಾಗಲಿದೆ. ಹಾಗಾಗಿ ಕೇಂದ್ರೀಯ ಸಂಸ್ಥೆಗಳಿಂದ ಖರೀದಿ ಮಾಡುತ್ತೇವೆ. ಇದರಿಂದ ಆರ್ಥಿಕ ಹೊರೆ ಕಡಿಮೆ ಆಗುತ್ತದೆ ಎಂದು ಮಾಹಿತಿ ನೀಡಿದರು.

Latest Videos
Follow Us:
Download App:
  • android
  • ios