ರೆಡ್ಡಿ ಮೇಲಿನ ಸೇಡು: ಬಳ್ಳಾರಿ ಕಹಾನಿ ಸತ್ಯ ಬಿಚ್ಟಿಟ್ಟ ಸಿದ್ದು!
ರೆಡ್ಡಿ ಸಹೋದರರ ಮೇಲೆ ಸಿದ್ದುಗೆ ಏಕಿಷ್ಟು ಕೋಪ?! ಸಿದ್ದರಾಮಯ್ಯ ಬಿಚ್ಚಿಟ್ಟರು ರೆಡ್ಡಿ ಮೇಲಿನ ಕೋಪದ ರಹಸ್ಯ! ಬಳ್ಳಾರಿಯಲ್ಲಿ ಸಿದ್ದುಗೆ ಶಾನೆ ತೊಂದರೆ ಕೊಟ್ಟಿದ್ದ ರೆಡ್ಡಿ ಬ್ರದರ್ಸ್! ಸಭೆ ನಡೆಸಲು ಬಿಡದ ರೆಡ್ಡಿ ಪರ ಗೂಂಡಾಗಳು! ಶಾಮಿಯಾನ ಹಾಕಲು ಬಿಡದೇ ಸತಾಯಿಸಿದ್ದ ಬಳ್ಳಾರಿ ಡಿಸಿ! ರೆಡ್ಡಿ ಕೋಟೆ ಒಡೆಯಲು ನಿರ್ಧರಿಸಿದ ಸಿದ್ದರಾಮಯ್ಯ
ಮಲ್ಲಿಕಾರ್ಜುನ ಹೊಸಮನಿ
ಜಮಖಂಡಿ(ಅ.30): ಗಣಿಧಣಿ ಜನಾರ್ಧನ್ ರೆಡ್ಡಿ ಮೇಲೆ ತಮಗೇಕೆ ಕೋಪ ಇದೆ ಎಂಬ ರಹಸ್ಯವನ್ನು ಖುದ್ದು ಮಾಜಿ ಸಿಎಂ ಸಿದ್ದರಾಮಯ್ಯ ಅವರೇ ಬಿಚ್ಚಿಟ್ಟಿದ್ದಾರೆ.
ಜಮಖಂಡಿಯ ಕುರುಬ ಸಮಾಜದ ಸಭೆಯಲ್ಲಿ ಮಾತನಾಡಿದ ಸಿದ್ದರಾಮಯ್ಯ, ಬಳ್ಳಾರಿಯಲ್ಲಿ ತಾವು ಸಭೆ ನಡೆಸಲು ರೆಡ್ಡಿ ಸಹೋದರರು ಜಾಗ ಸಿಗದಂತೆ ಮಾಡಿದ್ದರು ಎಂದು ಹೇಳಿದ್ದಾರೆ.
ರೆಡ್ಡಿ ಸಹೋದರರಿಗೆ ಹೆದರಿ ಆಗಿನ ಬಳ್ಳಾರಿ ಜಿಲ್ಲಾಧಿಕಾರಿ ಶಾಮಿಯಾನ ಹಾಕಲೂ ಅನುಮತಿ ನೀಡಿರಲಿಲ್ಲ ಎಂದು ಸಿದ್ದು ಹಳೆಯ ದಿನಗಳನ್ನು ನೆನೆದಿದ್ದಾರೆ. ಅಲ್ಲದೇ ಗಣಿಗಾರಿಕೆ ನಡೆಯುವ ಜಾಗದಲ್ಲಿ ಭಾಷಣಕ್ಕೆ ಹೋದಾಗ ರೌಡಿಗಳನ್ನು ಕಳುಹಿಸಿ ಬೆದರಿಕೆಯೊಡ್ಡುವ ಪ್ರಯತ್ನ ಕೂಡ ನಡೆದಿತ್ತಂತೆ.
"
ತಾವು ಬಳ್ಳಾರಿಗೆ ಹೋದಾಗ ರೌಡಿಗಳನ್ನು ತಮ್ಮ ಕಾರಿನ ಹಿಂದೆ ಬಿಡಲಾಗಿತ್ತು ಎಂದ ಸಿದ್ದರಾಮಯ್ಯ, ತಾವು ಹಾದು ಹೋಗುಬೇಕಿದ್ದ ರಸ್ತೆಯಲ್ಲಿ ಲಾರಿಯಲ್ಲಿ ಮಣ್ಣು ತಂದು ಸುರಿದು ಅಡ್ಡಗಟ್ಟಿದ್ದರು ಎಂದು ರೆಡ್ಡಿ ಸಹೋದರರ ವಿರುದ್ಧ ಆರೋಪ ಮಾಡಿದರು.
ಆಗಲೇ ರೆಡ್ಡಿ ಸಹೋದರರ ಬಳ್ಳಾರಿ ರಿಪಬ್ಲಿಕ್ ನ್ನು ನಾಶ ಮಾಡಿ ಕಾನೂನು ಸುವ್ಯವಸ್ಥೆ ಸ್ಥಾಪಿಸುವ ನಿರ್ಧಾರ ಮಾಡಿದ್ದಾಗಿ ಸಿದ್ದು ಸಭೆಯಲ್ಲಿ ಹೇಳಿದರು.