ಕಾಂಗ್ರೆಸ್‌ ಗೆದ್ದ ಮೇಲೆ ರಾಜ್ಯದಲ್ಲಿ ಪಾಕ್‌ ಧ್ವಜಗಳ ಹಾರಾಟ: ಯತ್ನಾಳ್

ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಬಂದ ಬಳಿಕ ಪಾಕ್‌ ಧ್ವಜಗಳ ಹಾರಾಟ ಪ್ರಾರಂಭವಾಗಿದೆ ಎಂದು ಬಿಜೆಪಿ ಸದಸ್ಯ ಬಸನಗೌಡ ಪಾಟೀಲ್‌ ಯತ್ನಾಳ ಆರೋಪಿಸಿದ್ದಾರೆ.

Flying Pakistani flags in state after Congress win karnataka assembly election says Yatnala at bengaluru rav

ವಿಧಾನಸಭೆ (ಜು.10) : ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಬಂದ ಬಳಿಕ ಪಾಕ್‌ ಧ್ವಜಗಳ ಹಾರಾಟ ಪ್ರಾರಂಭವಾಗಿದೆ ಎಂದು ಬಿಜೆಪಿ ಸದಸ್ಯ ಬಸನಗೌಡ ಪಾಟೀಲ್‌ ಯತ್ನಾಳ ಆರೋಪಿಸಿದ್ದಾರೆ.

ಸೋಮವಾರ ಬೆಳಗಾವಿಯ ಜೈನಮುನಿ ಹತ್ಯೆ ಕುರಿತು ಮಾತನಾಡುತ್ತಿದ್ದ ವೇಳೆ ಅವರು, ರಾಜ್ಯದಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಕಾಂಗ್ರೆಸ್‌ ಸರ್ಕಾರದಲ್ಲಿ ಜನತೆ ಭೀತಿಯಲ್ಲಿ ಬದುಕುವಂತಾಗಿದೆ. ಟಿ.ನರಸೀಪುರದಲ್ಲಿ ಹಿಂದೂ ಕಾರ್ಯಕರ್ತನ ಕೊಲೆಯಾಗಿದೆ. ಈ ಸರ್ಕಾರದಲ್ಲಿ ಪಾಕ್‌ ಧ್ವಜಗಳ ಹಾರಾಟ ಶುರುವಾಗಿದೆ ಎಂದು ಹೇಳಿದರು.

ಇದಕ್ಕೆ ಕಾಂಗ್ರೆಸ್‌ ಸದಸ್ಯರು ಮತ್ತು ಸಭಾಧ್ಯಕ್ಷ ಯು.ಟಿ.ಖಾದರ್‌ ಆಕ್ಷೇಪ ವ್ಯಕ್ತಪಡಿಸಿದರು. ಜೈನಮುನಿಗಳ ಹತ್ಯೆ ಕುರಿತು ಮಾತನಾಡುವಾಗ ಬೇರೆ ವಿಷಯದ ಚರ್ಚೆ ಬೇಡ. ನಿಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿ. ಬೇರೆ ಅವಧಿಯಲ್ಲಿ ಬೇಕಾದರೆ ಈ ವಿಷಯಗಳನ್ನು ಪ್ರಸ್ತಾಪಿಸಿ ಎಂದರು.

ಅದಕ್ಕಾಗಿ ಕಾಲಾವಕಾಶ ಕೋರಿದರೆ ನೀಡಲಾಗುವುದು. ಸದ್ಯಕ್ಕೆ ಜೈನಮುನಿಗಳ ಕೊಲೆಗೆ ಸಂಬಂಧಿಸಿದಂತೆ ಸರ್ಕಾರಕ್ಕೆ ತಮ್ಮ ಆಗ್ರಹವೇನು ಎಂಬುದನ್ನು ತಿಳಿಸಬೇಕು ಎಂದು ಸಭಾಧ್ಯಕ್ಷರು ತಿಳಿಸಿದರು.

ಕಾಂಗ್ರೆಸ್‌ ಸದಸ್ಯರು ಸಹ ಅನಗತ್ಯವಾಗಿ ಯತ್ನಾಳ ಅವರು ವಿಷಯಾಂತರ ಮಾಡುತ್ತಿದ್ದಾರೆ. ಯಾವ ವಿಷಯದ ಮೇಲೆ ಚರ್ಚೆ ನಡೆಯುತ್ತಿದೆಯೋ ಅದಕ್ಕೆ ಸಂಬಂಧಪಟ್ಟಂತೆ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಬೇಕು ಎಂದರು.

ಆಗ ಯತ್ನಾಳ, ಸರ್ಕಾರದ ಮೇಲೆ ವಿಶ್ವಾಸ ಇಲ್ಲ. ಜೈನಮುನಿಗಳ ಹತ್ಯೆ ಪ್ರಕರಣವನ್ನು ಸಿಬಿಐಗೆ ನೀಡಬೇಕು. ಒಂದು ಕೋಮಿನ ರಕ್ಷಣೆ ಮಾಡುವುದನ್ನು ಬಿಡಬೇಕು ಎಂದು ಆಗ್ರಹಿಸಿದರು.

ಸಿಎಂ ಆಗಲು 2400 ಕೋಟಿ ಬೇಕು: ಯತ್ನಾಳ್‌ ಹಳೆ ಹೇಳಿಕೆ ಜಟಾಪಟಿ

Latest Videos
Follow Us:
Download App:
  • android
  • ios