ಬಿಜೆಪಿ ಅವಧಿಯಲ್ಲಿ ಮುಖ್ಯಮಂತ್ರಿ ಬದಲಾವಣೆ ವೇಳೆ ಮುಖ್ಯಮಂತ್ರಿಯಾಗಲು 2,400 ಕೋಟಿ ರು. ನೀಡಬೇಕು ಎಂದು ಬಸನಗೌಡ ಪಾಟೀಲ್‌ ಯತ್ನಾಳ್‌ ಹೇಳಿದ್ದರು. ಇದರ ಬಗ್ಗೆಯೂ ಚರ್ಚೆಯಾಗಲಿ ಎಂದು ಹೇಳಿದ ಎಂ.ಬಿ.ಪಾಟೀಲ್‌

ವಿಧಾನಸಭೆ(ಜು.07):  ಮುಖ್ಯಮಂತ್ರಿಯಾಗಲು 2,400 ಕೋಟಿ ರು. ಬೇಕು ಎಂಬ ಬಿಜೆಪಿಯ ಬಸನಗೌಡ ಪಾಟೀಲ್‌ ಯತ್ನಾಳ್‌ ಹೇಳಿಕೆಯನ್ನು ಸಚಿವ ಎಂ.ಬಿ.ಪಾಟೀಲ್‌ ಸದನದಲ್ಲಿ ಪ್ರಸ್ತಾಪಿಸಿದ್ದರಿಂದ ಕ್ರುದ್ಧರಾದ ಯತ್ನಾಳ್‌, ತಾಕತ್ತಿದ್ದರೆ ನನ್ನ ಹೇಳಿಕೆ ಬಗ್ಗೆ ಸಿಬಿಐ ತನಿಖೆ ನಡೆಸಿ ಎಂದು ಸವಾಲು ಹಾಕಿದ ಘಟನೆ ನಡೆಯಿತು.

ಚಾಲಕ ಜಗದೀಶ್‌ ಆತ್ಮಹತ್ಯೆ ಯತ್ನ ಪ್ರಕರಣದ ಕುರಿತ ಚರ್ಚೆ ವೇಳೆ ಮಾತನಾಡಿದ ಎಂ.ಬಿ.ಪಾಟೀಲ್‌, ಬಿಜೆಪಿ ಅವಧಿಯಲ್ಲಿ ಮುಖ್ಯಮಂತ್ರಿ ಬದಲಾವಣೆ ವೇಳೆ ಮುಖ್ಯಮಂತ್ರಿಯಾಗಲು 2,400 ಕೋಟಿ ರು. ನೀಡಬೇಕು ಎಂದು ಬಸನಗೌಡ ಪಾಟೀಲ್‌ ಯತ್ನಾಳ್‌ ಹೇಳಿದ್ದರು. ಇದರ ಬಗ್ಗೆಯೂ ಚರ್ಚೆಯಾಗಲಿ ಎಂದು ಹೇಳಿದರು. ಅದರಿಂದ ಸಿಟ್ಟಾದ ಬಸನಗೌಡ ಪಾಟೀಲ್‌ ಯತ್ನಾಳ್‌, ಹಳೆಯ ವಿಚಾರವನ್ನೆಲ್ಲ ಈಗ ಹೇಳಬೇಡಿ. ನನ್ನ ಹೇಳಿಕೆಯನ್ನು ತಿರುಚುವುದನ್ನು ಬಿಡಿ. ನಿಮಗೆ ತಾಕತ್ತಿದ್ದರೆ ನನ್ನ ಹೇಳಿಕೆ ಬಗ್ಗೆ ಸಿಬಿಐ ತನಿಖೆಗೆ ಒಪ್ಪಿಸಿ ಎಂದು ಆಗ್ರಹಿಸಿದರು.

News Hour: ವರ್ಗಾವಣೆ ದಂಧೆಗೆ ಎಚ್‌ಡಿಕೆ ಪೆನ್‌ಡ್ರೈವ್‌ ಸಾಕ್ಷ್ಯ, ಸಿದ್ದು ಸರ್ಕಾರಕ್ಕೆ ಸವಾಲಾದ 'ದಳಪತಿ'

ಆಗ ಮಧ್ಯಪ್ರವೇಶಿಸಿದ ಸಚಿವ ಬೈರತಿ ಸುರೇಶ್‌, ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಪದವಿಯಿಂದ ಕೆಳಗಿಳಿಸಲು ಕಾರಣ ಯಾರು? ಯಡಿಯೂರಪ್ಪ ಬಗ್ಗೆ ಏನೆಲ್ಲ ಮಾತನಾಡಿದ್ದೀರಿ ಎಂದಾಗ ವಿಷಯಾಂತರವಾಗಿ ಈ ವಿಚಾರ ಅಲ್ಲಿಗೆ ಮುಗಿಯಿತು.