ಸ್ವಾತಂತ್ರ್ಯೋತ್ಸವ ಅಂಗವಾಗಿ ಸಸ್ಯಕಾಶಿ ಲಾಲ್‌ಬಾಗ್‌ನಲ್ಲಿ ವಿಧಾನಸೌಧದ ನಿರ್ಮಾತೃ ಕೆಂಗಲ್ ಹನುಮಂತಯ್ಯ ಅವರ ಸ್ಮರಣಾರ್ಥವಾಗಿ ಆಯೋಜಿಸಲಾಗಿರುವ 214ನೇ ಫಲಪುಷ್ಪ ಪ್ರದರ್ಶನಕ್ಕೆ ಮೊದಲ ದಿನವೇ ಜನಸಾಗರ ಹರಿದು ಬಂದಿದ್ದು, .18.50 ಲಕ್ಷ ಪ್ರವೇಶಾತಿ ಶುಲ್ಕ ಸಂಗ್ರಹವಾಗಿದೆ.
ಬೆಂಗಳೂರು (ಆ.6) : ಸ್ವಾತಂತ್ರ್ಯೋತ್ಸವ ಅಂಗವಾಗಿ ಸಸ್ಯಕಾಶಿ ಲಾಲ್‌ಬಾಗ್‌ನಲ್ಲಿ ವಿಧಾನಸೌಧದ ನಿರ್ಮಾತೃ ಕೆಂಗಲ್ ಹನುಮಂತಯ್ಯ ಅವರ ಸ್ಮರಣಾರ್ಥವಾಗಿ ಆಯೋಜಿಸಲಾಗಿರುವ 214ನೇ ಫಲಪುಷ್ಪ ಪ್ರದರ್ಶನಕ್ಕೆ ಮೊದಲ ದಿನವೇ ಜನಸಾಗರ ಹರಿದು ಬಂದಿದ್ದು, .18.50 ಲಕ್ಷ ಪ್ರವೇಶಾತಿ ಶುಲ್ಕ ಸಂಗ್ರಹವಾಗಿದೆ.
ವಾರಾಂತ್ಯದ ಶನಿವಾರದ ಹಿನ್ನೆಲೆಯಲ್ಲಿ ಸುಮಾರು 25 ಸಾವಿರಕ್ಕೂ ಹೆಚ್ಚು ಮಂದಿ ಫಲಪುಷ್ಪ ಪ್ರದರ್ಶನ ವೀಕ್ಷಿಸಿದರು. ಮುನ್ನೆಚ್ಚರಿಕೆ ಕ್ರಮವಾಗಿ ಉದ್ಯಾನದಲ್ಲಿ ಬಿಗಿ ಪೊಲೀಸ್ ಬಂದೋಬಸ್‌್ತ ಮಾಡಲಾಗಿತ್ತು. ಪೊಲೀಸರು ಉದ್ಯಾನದಲ್ಲಿ ಅಳವಡಿಸಿರುವ 138 ಸಿಸಿ ಕ್ಯಾಮೆರಾಗಳ ಮೂಲಕ ಕಣ್ಗಾವಲು ಇಟ್ಟಿದ್ದರು.
Bengaluru: ನಾಳೆಯಿಂದ ಲಾಲ್‌ಬಾಗ್ ಫಲಪುಷ್ಪ ಪ್ರದರ್ಶನ ಆರಂಭ: ಸಂಚಾರ ಮಾರ್ಗ, ವಾಹನ ನಿಲುಗಡೆಯಲ್ಲಿ ಬದಲಾವಣೆ
ಉದ್ಯಾನದ 10ಕ್ಕೂ ಹೆಚ್ಚು ಕಡೆಗಳಲ್ಲಿ ಕುಡಿಯುವ ನೀರಿನ ಘಟಕಗಳ ವ್ಯವಸ್ಥೆ ಮಾಡಿದ್ದು, ಆರು ಕಡೆಗಳಲ್ಲಿ ಮರುಬಳಕೆಯ ಬಾಟಲಿಗಳಲ್ಲಿ ನೀರಿನ ವ್ಯವಸ್ಥೆ ಮಾಡಲಾಗಿತ್ತು. ಈಗಾಗಲೇ ಅಸ್ತಿತ್ವದಲ್ಲಿರುವ ಆರು ಶೌಚಾಲಯಗಳೊಂದಿಗೆ ಹೆಚ್ಚುವರಿಯಾಗಿ ಆಯ್ದ ಸ್ಥಳಗಳಲ್ಲಿ 5 ಸಂಚಾರಿ ಶೌಚಾಲಯಗಳನ್ನು ಇಡಲಾಗಿತ್ತು. ಪ್ರದರ್ಶನದ ವೀಕ್ಷಣೆಗೆ ಬರುವವರು ನಾಲ್ಕು ಪ್ರವೇಶ ದ್ವಾರಗಳ ಬಳಿ ವ್ಯವಸ್ಥೆ ಮಾಡಿರುವ ಕ್ಲಾಕ್‌ರೂಂಗಳಲ್ಲಿ ತಮ್ಮ ಬ್ಯಾಗು ಮತ್ತು ಲಗೇಜುಗಳನ್ನು ಇಡಲು ಅವಕಾಶ ಕಲ್ಪಿಸಲಾಗಿತ್ತು. ಲಾಲ್‌ಬಾಗ್‌ನಲ್ಲಿ ಪ್ಲಾಸ್ಟಿಕ್ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಿದ್ದರೂ ತೋಟಗಾರಿಕೆ ಸಿಬ್ಬಂದಿಯ ಕಣ್ತಪ್ಪಿಸಿ ಬಳಸಿ ಬಿಸಾಡಿದ ಪ್ಲಾಸ್ಟಿಕ್ ತ್ಯಾಜ್ಯವನ್ನು ಎನ್‌ಜಿಒ ಸ್ವಯಂ ಸೇವಕರು, ತೋಟಗಾರಿಕೆ ಇಲಾಖೆ ಸಿಬ್ಬಂದಿ ಸ್ವಚ್ಛಗೊಳಿಸಿದರು.
ಲಾಲ್‌ಬಾಗ್ ಸುತ್ತ ಟ್ರಾಫಿಕ್ ಕಿರಿಕಿರಿ
ಲಾಲ್‌ಬಾಗ್‌ನ ನಾಲ್ಕು ದ್ವಾರಗಳಿಂದ ಸಾರ್ವಜನಿಕರಿಗೆ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿದೆ. ಹೀಗಾಗಿ ಎಲ್ಲೆಡೆ ವಾಹನ ಸಂಚಾರ ಅಧಿಕಗೊಂಡಿದ್ದು ಸಂಚಾರ ದಟ್ಟಣೆಯುಂಟಾಗಿತ್ತು. ಮುಖ್ಯವಾಗಿ ಕೃಂಬಿಗಲ್ ರಸ್ತೆ ದ್ವಾರ ಮತ್ತು ಡಬಲ್ ರೋಡ್ ಸಮೀಪ ಪೂರ್ವ ದ್ವಾರದ ಸುತ್ತಮುತ್ತ ದಟ್ಟಣೆ ಹೆಚ್ಚಾಗಿತ್ತು. ಸಂಚಾರಿ ಪೊಲೀಸರು ಟ್ರಾಫಿಕ್ ಸಮಸ್ಯೆ ನಿವಾರಿಸಲು ಹರಸಾಹಸ ಪಟ್ಟರು.
ಪೂರ್ವ ಗೇಟ್ ಮತ್ತು ಈಶಾನ್ಯ ಗೇಟ್ ಬಳಿಯಲ್ಲಿ ಆಟೋ ರಿಕ್ಷಾಗಳು ಹೆಚ್ಚಾಗಿ ಜಮಾಯಿಸಿದ್ದು, ಕೂಡ ಸಂಚಾರ ದಟ್ಟಣೆಗೆ ಕಾರಣವಾಗಿತ್ತು. ಈ ನಡುವೆ ಓಲಾ, ಊಬರ್ ಟ್ಯಾಕ್ಸಿಗಳನ್ನು ಬುಕ್ ಮಾಡಿ ತಾಸುಗಟ್ಟಲೆ ಕಾಯುವ ಪರಿಸ್ಥಿತಿಯಿಂದ ಹಲವರು ಬೇಸರಗೊಂಡಿದ್ದರು. ದ್ವಿಚಕ್ರ ವಾಹನಗಳಿಗೆ ಆಲ್‌ಅಮಿನ್ ಕಾಲೇಜು ಆವರಣದಲ್ಲಿ ಪಾರ್ಕಿಂಗ್‌ಗೆ ಅವಕಾಶ ನೀಡಲಾಗಿದ್ದರೂ ಗೇಟ್ ಮುಂಭಾಗದವರೆಗೂ ಬೈಕ್‌ಗಳನ್ನು ತರುತ್ತಿದ್ದುದರಿಂದ ಕಿರಿಕಿರಿಯುಂಟಾಗಿತ್ತು.
ಬಸ್ಗಳಲ್ಲಿ ವಿದ್ಯಾರ್ಥಿಗಳ ಆಗಮನ
ಫಲಪುಷ್ಪ ಪ್ರದರ್ಶನ ಮೊದಲ ದಿನವೇ ನಗರದ ಹಲವು ಶಾಲೆಗಳಿಂದ ವಿದ್ಯಾರ್ಥಿಗಳನ್ನು ಕರೆದುಕೊಂಡು ಶಿಕ್ಷಕರು ಆಗಮಿಸಿದ್ದರು. ವಿದ್ಯಾರ್ಥಿಗಳು ಸಮವಸ್ತ್ರದಲ್ಲಿ ಸರದಿ ಸಾಲಿನಲ್ಲಿ ಇಡೀ ಉದ್ಯಾನವನ್ನು ಸುತ್ತು ಹಾಕಿ ಫಲಪುಷ್ಪ ಪ್ರದರ್ಶನದ ಮೆರಗಿಗೆ ಮೈಮರೆತಿದ್ದರು. ಅನೇಕರು ತಮ್ಮ ಮೊಬೈಲ್‌ಗಳಲ್ಲಿ ಪುಷ್ಪದಿಂದ ಅರಳಿದ ಕಲಾಕೃತಿಗಳನ್ನು ಸೆರೆ ಹಿಡಿಯುವುದರಲ್ಲಿ ತಲ್ಲೀನರಾಗಿದ್ದರೆ, ಹಿರಿ-ಕಿರಿಯರು ವಿಧಾನಸೌಧ, ಶಿವಪುರದ ಧ್ವಜ ಸತ್ಯಾಗ್ರಹ ಭವನ ಸೇರಿದಂತೆ ವಿವಿಧ ಕಲಾಕೃತಿಗಳ ಮುಂದೆ ನಿಂತು ಸೆಲ್ಫಿ ತೆಗೆದುಕೊಂಡು ಸಂಭ್ರಮಿಸುತ್ತಿದ್ದ ದೃಶ್ಯ ಕಂಡುಬಂತು.
Bengaluru: ಆ.4ರಿಂದ ಫಲಪುಷ್ಪ ಪ್ರದರ್ಶನ-2023: ಕೆಂಗಲ್ ಹನುಮಂತಯ್ಯ, ವಿಧಾನಸೌಧದ ಪರಿಕಲ್ಪನೆ
ಇಕೆಬಾನ ಸ್ಪರ್ಧೆ ಪ್ರದರ್ಶನ:
ಇಕೆಬಾನ, ತರಕಾರಿ ಕೆತ್ತನೆ, ಪುಷ್ಪ ಭರತಿ, ಬೋನ್ಸಾಯ್, ಡಬ್ ಹೂವಿನ ಜೋಡಣೆ, ಥಾಯ್‌ಆರ್ಚ್, ಜಾನೂರು ಒಣಹೂವಿನ ಜೋಡಣೆಯ ಕಲೆಗಳ ಸ್ಪರ್ಧೆಗಳ ಪ್ರದರ್ಶನ ಲಾಲ್‌ಬಾಗಿನ ತೋಟಗಾರಿಕೆ ಮಾಹಿತಿ ಕೇಂದ್ರದ ಆವರಣದಲ್ಲಿ ನಡೆಯಿತು. ಈ ಕಾರ್ಯಕ್ರಮದಲ್ಲಿ ಮಾಜಿ ಸಚಿವ ಉಮಾಶ್ರೀ ಅವರು ಪಾಲ್ಗೊಂಡಿದ್ದರು.
