ಬೆಂಗಳೂರು(A.09): ಮಲೆ​ನಾಡು, ಕರಾ​ವ​ಳಿ​ಯಲ್ಲಿ ಶನಿ​ವಾರ ಸಂಜೆ​ಯಿಂದ ಅಬ್ಬ​ರಿ​ಸ​ಲಾ​ರಂಭಿ​ಸಿದ ಮಳೆ​ಯಿಂದಾ​ಗಿ ಮತ್ತೆ ಪ್ರವಾ​ಹ-ಭೂಕು​ಸಿ​ತದ ಆತಂಕ ತಂದೊಂಡಿದ್ದು, ಮಹಾ​ರಾ​ಷ್ಟ್ರ​ದಲ್ಲಿ ಮುಂದು​ವ​ರಿ​ದ ವರು​ಣ​ನಾ​ರ್ಭಟದಿಂದ ಉತ್ತರ ಕರ್ನಾಟ​ಕದ 5 ಜಿಲ್ಲೆ​ಗ​ಳಲ್ಲಿ ಮತ್ತೊಮ್ಮೆ ಮುಳು​ಗ​ಡೆಯ ಭೀತಿ ಮನೆ ಮಾಡಿ​ದೆ. ಮಹಾ​ರಾ​ಷ್ಟ್ರ​ದ ಡ್ಯಾಂಗಳಿಂದ ಯಾವುದೇ ಕ್ಷಣ​ದಲ್ಲೂ ಭಾರೀ ಪ್ರಮಾ​ಣದ ನೀರು ಹೊರ​ಬಿ​ಡುವ ಸಾಧ್ಯತೆ ಇದ್ದು, ಉತ್ತರ ಕರ್ನಾ​ಟ​ಕದ 5 ಜಿಲ್ಲೆ​ಗಳ ನದಿ ತೀರದ ಜನ​ರಲ್ಲಿ ನಡುಕ ಶುರು​ವಾ​ಗಿದೆ. ಪ್ರವಾ​ಹದ ಆತಂಕ ಇರುವ ಕೊಡಗು, ಚಿಕ್ಕ​ಮ​ಗ​ಳೂರು, ಉಡುಪಿ ಸೇರಿ 10 ಜಿಲ್ಲೆ​ಗ​ಳಲ್ಲಿ ರೆಡ್‌ ಅಲ​ರ್ಟ್‌ ಘೋಷಿ​ಸ​ಲಾ​ಗಿ​ದೆ. ಏತ​ನ್ಮ​ಧ್ಯೆ, ಮಳೆ ಸಂಬಂಧಿ ಅನಾ​ಹು​ತಕ್ಕೆ ಮಂಡ್ಯ ಮತ್ತು ಚಿಕ್ಕ​ಮ​ಗ​ಳೂ​ರಲ್ಲಿ ಬಾಲಕಿ ಸೇರಿ ಇಬ್ಬರು ಬಲಿ​ಯಾ​ಗಿ​ದ್ದಾ​ರೆ.

ಕೊರೋನಾ ವೈರಸ್ ಆತಂಕದ ಮಧ್ಯೆ ಪ್ರವಾಹ ಭೀತಿ: ಕೆಲವೊಂದಷ್ಟು ಪರಿಹಾರ ಘೋಷಿಸಿದ ಸರ್ಕಾರ

ಮಹಾ​ರಾ​ಷ್ಟ್ರ​ದಲ್ಲಿ ಭಾರೀ ಮಳೆ ಮುಂದು​ವ​ರಿ​ದಿ​ರುವ ಹೊರ​ತಾ​ಗಿಯೂ ಅಲ್ಲಿನ ಡ್ಯಾಂಗ​ಳಿಂದ ಈವ​ರೆಗೆ ದೊಡ್ಡ​ಪ್ರ​ಮಾ​ಣದ ನೀರು ಹೊರ​ಬಿ​ಟ್ಟಿಲ್ಲ. ಆದ​ರೂ ಬೆಳ​ಗಾ​ವಿ, ಬಾಗ​ಲ​ಕೋ​ಟೆ​ಯ ಹಲವು ಜಿಲ್ಲೆ​ಗ​ಳಲ್ಲಿ ಕೃಷ್ಣಾ, ಘಟ​ಪ್ರಭಾದಂಥ ಜೀವ​ನ​ದಿ​ಗಳು ಅಪಾ​ಯ​ಮಟ್ಟಮೀರಿ ಹರಿ​ಯು​ತ್ತಿ​ವೆ. ಈಗಾ​ಗಲೇ ಆಲ​ಮ​ಟ್ಟಿಗೆ 2.20 ಲಕ್ಷ ಕ್ಯುಸೆ​ಕ್‌ಗೂ ಹೆಚ್ಚು ನೀರು ಹರಿ​ದು​ಬ​ರು​ತ್ತಿದ್ದು, ಇಷ್ಟೇ ಪ್ರಮಾ​ಣದ ನೀರನ್ನು ಮುನ್ನೆ​ಚ್ಚ​ರಿಕಾ ಕ್ರಮ​ವಾಗಿ ನಾರಾ​ಯ​ಣ​ಪುರ ಡ್ಯಾಂನಿಂದ ಹೊರ​ಬಿ​ಡ​ಲಾ​ಗು​ತ್ತಿ​ದೆ. ಇದ​ರಿಂದ ಯಾದ​ಗಿರಿ, ಬಾಗ​ಲ​ಕೋಟೆ, ಕಲ​ಬು​ರಗಿ, ರಾಯ​ಚೂರು, ವಿಜ​ಯ​ಪು​ರ ಹಾಗೂ ಬೆಳ​ಗಾ​ವಿಯ ಕೃಷ್ಣಾ ತೀರದ ಅನೇಕ ತಗ್ಗು​ಪ್ರ​ದೇ​ಶ​ಗಳ, 30ಕ್ಕೂ ಹೆಚ್ಚು ಸೇತು​ವೆ​ಗಳು ಜಲಾ​ವೃ​ತ​ವಾ​ಗಿ​ವೆ. ಒಂದು ವೇಳೆ ಕೊಯ್ನಾ ಡ್ಯಾಂನಿಂದ ಭಾರೀ ಪ್ರಮಾ​ಣ​ದಲ್ಲಿ ನೀರು ಹೊರ​ಬಿ​ಟ್ಟರೆ ಉತ್ತರ ಕರ್ನಾ​ಟ​ಕ​ಕ್ಕೆ ಮತ್ತೊಂದು ಮಹಾ​ಪ್ರ​ಳ​ಯದ ಆತಂಕ ಎದು​ರಾ​ಗ​ಲಿ​ದೆ.

ಮಲೆ​ನಾ​ಡಲ್ಲಿ ಗುಡ್ಡ​ಕು​ಸಿ​ತ: ಕೊಡ​ಗಿ​ನಲ್ಲಿ ಮತ್ತೆ ಮಳೆ ಆರಂಭ​ವಾ​ಗಿ​ದ್ದು ಈಗಾ​ಗಲೇ 600ಕ್ಕೂ ಹೆಚ್ಚು ಮಂದಿ​ಯನ್ನು ಸುರ​ಕ್ಷಿತ ಪ್ರದೇ​ಶಕ್ಕೆ ಸ್ಥಳಾಂತ​ರಿ​ಸ​ಲಾ​ಗಿ​ದೆ. ಲಕ್ಷ್ಮ​ಣ​ತೀ​ರ್ಥ, ಕಾವೇರಿ ನದಿ​ಗಳು ಪ್ರವಾ​ಹ​ಮ​ಟ್ಟ​ದಲ್ಲೇ ಹರಿ​ಯು​ತ್ತಿದ್ದು, ಜಿಲ್ಲೆ​ಯಲ್ಲಿ ಒಟ್ಟಾರೆ 10ಕ್ಕೂ ಹೆಚ್ಚು ರಸ್ತೆ​ಗಳು ಸಂಪರ್ಕ ಕಳೆ​ದು​ಕೊಂಡಿ​ವೆ. ಅಲ್ಲಲ್ಲಿ ಸಣ್ಣ​ಪುಟ್ಟಭೂಕು​ಸಿ​ತ​ಗಳು ಮುಂದು​ವ​ರಿ​ದಿದ್ದು, ಮತ್ತೆ ಭಾರೀ ಮಳೆ​ಯಾ​ದರೆ ಕಳೆದ ವರ್ಷ​ದಂತೆ ಮತ್ತೊಂದು ಜಲ​ಕಂಟಕ ಈ ಭಾಗ​ದ​ಲ್ಲಿ ಕಾಡುವ ಆತಂಕ ಹೆಚ್ಚಾ​ಗಿ​ದೆ.

ಆಲಮಟ್ಟಿ: ವರುಣನ ಅಬ್ಬರ, 1.80 ಲಕ್ಷ ಕ್ಯುಸೆಕ್‌ ನೀರು ಹೊರಕ್ಕೆ

ಇನ್ನು ಚಿಕ್ಕ​ಮ​ಗ​ಳೂರು ಜಿಲ್ಲೆಯ ಮೂಡಿ​ಗೆರೆ, ಶೃಂಗೇರಿ ಹಾಗೂ ಎನ್‌.​ಆ​ರ್‌.​ಪು​ರ​ದಲ್ಲಿ ಮಳೆ ಮುಂದು​ವ​ರಿ​ದಿ​ದ್ದು, ತುಂಗೆ, ಹೇಮಾ​ವ​ತಿ ಮತ್ತು ಭದ್ರಾ ಅಪಾ​ಯ​ಮ​ಟ್ಟ​ದಲ್ಲೇ ಹರಿ​ಯು​ತ್ತಿ​ದೆ. ಕಳಸ ರಸ್ತೆಯ ಹೆಬ್ಬಾಳ್‌ ಸೇತುವೆ, ಮಹಲ್ಗೋಡು ಸೇತುವೆ ಮುಳುಗಡೆಯಾಗಿದ್ದು ಕೆಲವೆಡೆ ಭೂಕುಸಿತವಾಗಿದೆ. ಮೂಡಿಗೆರೆ ತಾಲೂಕಿನ ಜನ್ನಾಪುರದದ ರುದ್ರಮ್ಮ (87) ಹೇಮಾವತಿ ನದಿ ನೀರಿನಲ್ಲಿ ಕೊಚ್ಚಿ​ಹೋ​ಗಿ​ದ್ದಾ​ರೆ.

ಹಾಸ​ನ​ ಜಿಲ್ಲೆಯ ಸಕ​ಲೇ​ಶ​ಪು​ರ​ದಲ್ಲಿ ಭಾರೀ ಗಾಳಿ ಮಳೆ ಮುಂದು​ವ​ರಿ​ದಿದ್ದು, ನೂರಾರು ಎಕರೆ ಕಾಫಿ ತೋಟ ಮಳೆಗೆ ಆಹು​ತಿ​ಯಾ​ಗಿ​ದೆ. ಹಲ​ವೆಡೆ ವಿದ್ಯುತ್‌ ಕಂಬ​ಗಳು ಉರುಳಿ ಬಿದ್ದು, ಜನ​ಜೀ​ವನ ಅಸ್ತ​ವ್ಯ​ಸ್ತ​ಗೊಂಡಿ​ದೆ. ಕಬಿನಿ ಡ್ಯಾಂನಿಂದ ನೀರು ಹೊರ​ಬಿ​ಡು​ತ್ತಿ​ರುವ ಕಾರಣ ಕಪಿಲಾ ನದಿ ಪಾತ್ರದ ನಂಜನಗೂಡಲ್ಲಿ 48 ಮನೆಗಳಿಗೆ ನೀರು ನುಗ್ಗಿದೆ. ಈ ಮಧ್ಯೆ, ಮಂಡ್ಯ​ಜಿ​ಲ್ಲೆಯ ಶ್ರೀರಂಗ​ಪ​ಟ್ಟ​ಣದಲ್ಲಿ ವೆಲ್ಲಸ್ಲಿ ಸೇತುವೆ ಬಳಿ ನದಿ ನೋಡಲು ಬಂದಿದ್ದ ಕೀರ್ತ​ನ​(2) ಕಾಲು​ಜಾರಿ ಕಾವೇ​ರಿ ನದಿಗೆ ಬಿದ್ದು ಕೊಚ್ಚಿ​ಹೋ​ಗಿ​ದ್ದಾ​ಳೆ.

ಕಳೆದ ವರ್ಷಕ್ಕಿಂತ 5 ಲಕ್ಷ ಹೆಕ್ಟೇರ್‌ ಹೆಚ್ಚು ಬಿತ್ತನೆ!

ಕರಾ​ವ​ಳಿ​ಯಲ್ಲಿ ಮತ್ತೆ ಭಾರೀ ಮಳೆ​ಯಾ​ಗು​ತ್ತಿದ್ದು, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯ ಜೀವ​ನ​ದಿ​ಗ​ಳಾದ ಕುಮಾ​ರ​ಧಾರಾ, ನೇತ್ರಾ​ವತಿ, ಸುವ​ರ್ಣಾ ನದಿ​ಗಳು ಉಕ್ಕಿ​ಹ​ರಿ​ಯು​ತ್ತಿವೆ. ಬಂಟ್ವಾ​ಳ​ದ​ಲ್ಲಿ ಪ್ರವಾಹ ಕಾಣಿ​ಸಿ​ಕೊಂಡಿ​ದೆ. ಉತ್ತರ ಕರ್ನಾ​ಟ​ಕದ ಶರಾ​ವತಿ, ಗಂಗಾ​ವಳಿ ನದಿ​ಯಲ್ಲೂ ನೀರು ಪ್ರವಾ​ಹ್ಮ ಮಟ್ಟ​ದಲ್ಲೇ ಇದೆ