ಅಕ್ರಮ ಗೋಸಾಗಣೆ ಮತ್ತು ಗೋಹತ್ಯೆ ಆರೋಪದ ಮೇಲೆ ಶಾಸಕ ಶರಣು ಸಲಗರ ಸೇರಿ 7 ಜನರ ವಿರುದ್ಧ ಎಫ್‌ಐಆರ್ ದಾಖಲು. ಮುಸ್ಲಿಮರಿಗೆ ಬೆದರಿಕೆ ಹಾಕಿದ ಆರೋಪದಡಿ ವಿಜಯಸಿಂಗ್ ವಿರುದ್ಧವೂ ದೂರು ದಾಖಲು.
ಬಸವಕಲ್ಯಾಣ(ಬೀದರ್): ಅಕ್ರಮ ಗೋಸಾಗಣೆ ಮಾಡಿ ಗೋಹತ್ಯೆ ಮಾಡಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿ ಶುಕ್ರವಾರ ಮುಸ್ಲಿಮರಿಗೆ ಬೆದರಿಕೆ ಹಾಕಿದ ಆರೋಪದಡಿ ಶಾಸಕ ಶರಣು ಸಲಗರ, ಅವರ ವಾಹನ ಚಾಲಕ ಮಂಜು, ಬೆಂಬಲಿಗರಾದ ಕೃಷ್ಣಾ ಗೋಣೆ ಹಾಗೂ ಸಾಗರ್ ಲಾಡೆ ಸೇರಿ 7 ಜನರ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
ಶುಕ್ರವಾರ ಬೆಳಗ್ಗೆ ಶಾಸಕ ಶರಣು ಸಲಗರ ಅವರು ನಗರದ ಮೆಹಬೂಬ್‌ನಗರ ಬಡಾವಣೆಯಲ್ಲಿ 25ಕ್ಕೂ ಹೆಚ್ಚು ದನ ಕರುಗಳನ್ನು ಅಕ್ರಮವಾಗಿ ಕಟ್ಟಿ ಹಾಕಿರುವುದನ್ನು ಪತ್ತೆ ಹಚ್ಚಿದ್ದವು. ಅಲ್ಲದೆ ಅವುಗಳನ್ನು ಗೋಶಾಲೆಗೆ ರವಾನಿಸುವಂತೆ ಒತ್ತಾಯಿಸಿ ಯಶಸ್ವಿಯಾಗಿದ್ದರು. ಈ ವೇಳೆ ಅವರು ಮಾಜಿ ವಿಧಾನ ಪರಿಷತ್ ಸದಸ್ಯ ವಿಜಯಸಿಂಗ್ ಅವರ ಬಗ್ಗೆ ಅವಹೇಳನಾಕಾರಿಯಾಗಿ ಮಾತನಾಡಿದ್ದಾರೆ ಮತ್ತು ಬೆಂಬಲಿಗರೊಂದಿಗೆ ಮುಸ್ಲಿಂ ಸಮುದಾಯದ ಅವರ ಮನೆಯಂಗಳಕ್ಕೆ ತೆರಳಿ ಬೆದರಿಕೆಯೊಡ್ಡಿದ್ದಾರೆ ಎಂದು ಆರೋಪಿಸಿ ಪೊಲೀಸರು ಅವರ ಬೆಂಬಲಿಗರ ಮೇಲೆ ದೂರು ದಾಖಲಿಸಿಕೊಂಡಿದ್ದಾರೆ.
ಗೋಹತ್ಯೆ ಕಾಯ್ದೆ ಜಾರಿಯಿದ್ದರೂ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ಆಡಳಿತ ಇರುವ ಕಾರಣ ಅವ್ಯಾಹತವಾಗಿ ಗೋವುಗಳ ವಧೆ ಮಾಡಲಾಗುತ್ತಿದೆ. ಗೋಹತ್ಯೆ ಮಾಡುವವರ ವಿರುದ್ಧ ಕ್ರಮ ಜರುಗಿಸಬೇಕಾದ ಪೊಲೀಸರು. ಗೋ ರಕ್ಷಕರನ್ನ ಬಂಧಿಸುತ್ತಿರುವುದು ದುರಂತ, ಕಾನೂನು ವಿರೋಧಿ ಕ್ರಮ ಎಂದು ಹಿಂದೂಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
