ಟಿಕೆಟ್ ಕಾದಿರಿಸಿದರೂ ದಂಡ ವಿಧಿಸಿದ್ದ ರೈಲ್ವೆಗೆ ‘ದಂಡ’..!
ಪಿಎನ್‌ಆರ್ ಸಮೇತ ಸೀಟ್ ಟಿಕೆಟ್ ಬುಕ್ ಆಗಿದ್ದರೂ, ರೈಲಿನಲ್ಲಿ ಸೀಟು ಸಿಗದೆ ಇರುವ ಬಗ್ಗೆ ಅಲೋಕ್ ರೈಲ್ವೆ ಇಲಾಖೆಗೆ ದೂರು ನೀಡಿ ಹಣ ಮರು ಪಾವತಿಗೆ ಕೋರಿದ್ದರೂ ಹಣ ಪಾವತಿ ಮಾಡದ ಕಾರಣ ಗ್ರಾಹಕರ ವೇದಿಕೆಗೆ ದೂರು ನೀಡಿದ್ದರು. ಐಆರ್‌ಸಿಟಿಸಿಯಲ್ಲಿ ಹ್ಯಾಕ್ ಆಗಿ ನನಗೆ ಮೋಸವಾಗಿದೆ. ಯಾವುದೇ ತಪ್ಪಿಲ್ಲದ ನನಗೆ ಹಣ ರಿಫಂಡ್ ಮಾಡಬೇಕು ಎಂದು ಕೋರಿದ್ದರು.

ಬೆಂಗಳೂರು(ಅ.26): ಸೀಟು ಖಚಿತವಾಗಿದ್ದರೂ ಟಿಕೆಟ್ ರಹಿತ ಪ್ರಯಾಣವೆಂದು ಇಬ್ಬರು ಪ್ರಯಾಣಿಕರಿಂದ ದಂಡದ ರೂಪದಲ್ಲಿ ವಸೂಲಿ ಮಾಡಿದ್ದ ಹಣವನ್ನು ಮರಳಿಸುವ ಜೊತೆಗೆ ₹30 ಸಾವಿರ ಪರಿಹಾರ ದಂಡ ಪಾವತಿಸುವಂತೆ ಐಆರ್‌ಟಿಸಿ ಮತ್ತು ಭಾರತೀಯ ರೈಲ್ವೆಗೆ ಬೆಂಗಳೂರು ನಗರ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ವೇದಿಕೆ ಆದೇಶಿಸಿದೆ.
ನಗರದ ನಿವಾಸಿ ಅಲೋಕ್ ಕುಮಾರ್ ಕಳೆದ ವರ್ಷ ಮೇ ತಿಂಗಳಲ್ಲಿ ತಮ್ಮ ವೃದ್ಧ ಪಾಲಕರ ಪ್ರಯಾಣಕ್ಕಾಗಿ ನವದೆಹಲಿಯಿಂದ ಬರೌನಿಗೆ ಐಆರ್‌ಸಿಟಿಸಿ ಮೂಲಕ ₹6,995 ಪಾವತಿಸಿ ಎ1 ಕೋಚ್‌ನಲ್ಲಿ ಎರಡು ಟಿಕೆಟ್ ಕಾಯ್ದಿರಿಸಿದ್ದರು. ಸೀಟು ಖಚಿತಪಡಿಸಲಾಗಿತ್ತು. ಮೇ 21ರಂದು ದಂಪತಿ ರೈಲು ಹತ್ತಿದಾಗ, ‘ಪಿಎನ್‌ಆರ್ ಸರಿ ಇದ್ದರೂ, ಕೋಚ್‌ನಲ್ಲಿ (ನೋ ರೂಮ್) ನಿಮಗೆ ಸೀಟ್ ಇಲ್ಲ. ರೈಲಿನಿಂದ ಇಳಿಯಬೇಕು ದಂಡ ಪಾವತಿಸಿ ಪ್ರಯಾಣಿಸಬೇಕು’ ಎಂದು ಟಿಟಿಇ ಹೇಳಿ ದಂಪತಿಯಿಂದ ದಂಡದ ಮೊತ್ತ ಪಡೆದಿದ್ದರು.
ಬೆಂಗಳೂರು: ಮೆಜೆಸ್ಟಿಕ್-ಏರ್‌ಪೋರ್ಟ್ ರೈಲು ಮಾರ್ಗ ನೆನೆಗುದಿಗೆ
ಪಿಎನ್‌ಆರ್ ಸಮೇತ ಸೀಟ್ ಟಿಕೆಟ್ ಬುಕ್ ಆಗಿದ್ದರೂ, ರೈಲಿನಲ್ಲಿ ಸೀಟು ಸಿಗದೆ ಇರುವ ಬಗ್ಗೆ ಅಲೋಕ್ ರೈಲ್ವೆ ಇಲಾಖೆಗೆ ದೂರು ನೀಡಿ ಹಣ ಮರು ಪಾವತಿಗೆ ಕೋರಿದ್ದರೂ ಹಣ ಪಾವತಿ ಮಾಡದ ಕಾರಣ ಗ್ರಾಹಕರ ವೇದಿಕೆಗೆ ದೂರು ನೀಡಿದ್ದರು. ಐಆರ್‌ಸಿಟಿಸಿಯಲ್ಲಿ ಹ್ಯಾಕ್ ಆಗಿ ನನಗೆ ಮೋಸವಾಗಿದೆ. ಯಾವುದೇ ತಪ್ಪಿಲ್ಲದ ನನಗೆ ಹಣ ರಿಫಂಡ್ ಮಾಡಬೇಕು ಎಂದು ಕೋರಿದ್ದರು. ಆದರೆ ‘ನಮ್ಮದು ಟಿಕೆಟ್ ಬುಕ್ಕಿಂಗ್ ಮಾಡುವ ವೇದಿಕೆ (ಆ್ಯಪ್, ವೆಬ್‌ಸೈಟ್) ಮಾತ್ರ. ಮರುಪಾವತಿ ಮಾಡುವುದು ನಮ್ಮ ಕೈಯಲ್ಲಿ ಇಲ್ಲ’ ಎಂದು ಐಆರ್‌ಸಿಟಿಸಿ ವಾದಿಸಿತ್ತು. ರೈಲ್ವೆ ಇಲಾಖೆ ಸ್ಪಂದಿಸಿರಲಿಲ್ಲ.
ವಿಚಾರಣೆ ವೇಳೆ ‘ಐಆರ್‌ಸಿಟಿಸಿ ಮತ್ತು ರೈಲ್ವೆ ಇಲಾಖೆಯ ಸೇವೆಯಲ್ಲಿ ಲೋಪದಿಂದ ವೃದ್ಧ ದಂಪತಿಗೆ ಅನಾಕೂಲವಾಗಿದೆ. ವೆಬ್‌ಸೈಟನ್ನು ಸುರಕ್ಷಿತವಾಗಿ ಅಪ್ ಟು ಡೇಟ್ ಇಟ್ಟುಕೊಳ್ಳುವುದು ಐಆರ್‌ಸಿಟಿಸಿ ಮತ್ತು ರೈಲ್ವೆ ಇಲಾಖೆಯ ಜವಾಬ್ದಾರಿ. ನಿಮ್ಮ ಲೋಪಕ್ಕೆ ಪ್ರಯಾಣಿಕರಿಗೆ ದಂಡ ಹಾಕಿ ಅವರನ್ನು ಹೊಣೆ ಮಾಡುವಂತಿಲ್ಲ’ ಎಂದು ಗ್ರಾಹಕರ ವೇದಿಕೆ ಅಭಿಪ್ರಾಯಪಟ್ಟಿದೆ.
ದಂಡದ ರೂಪದಲ್ಲಿ ಪ್ರಯಾಣಿಕರಿಂದ ವಸೂಲಿ ಮಾಡಿದ ‘22,300 ಹಿಂತಿರುಗಿಸಬೇಕು. ಅನಾನುಕೂಲ ಮತ್ತು ಮಾನಸಿಕ ಹಿಂಸೆಗೆ ಪರಿಹಾರವಾಗಿ ₹30 ಸಾವಿರ ಹಾಗೂ ಕಾನೂನು ಹೋರಾಟದ ಶುಲ್ಕ ₹10,000 ವನ್ನು ಐಆರ್‌ಸಿಟಿಸಿ ಮತ್ತು ರೈಲ್ವೆ ಇಲಾಖೆ ಪಾವತಿಸಬೇಕು ಎಂದು ನ್ಯಾಯಾಲಯ ಆದೇಶದಲ್ಲಿ ತಿಳಿಸಿದೆ.