Asianet Suvarna News Asianet Suvarna News

ಕೇಂದ್ರ ಸರ್ಕಾರದಿಂದ ಕರ್ನಾಟಕಕ್ಕೆ ಯಾವುದೇ ಬಾಕಿ ಉಳಿದಿಲ್ಲ: ನಿರ್ಮಲಾ ಸೀತಾರಾಮನ್

ಕೇಂದ್ರ ಸರ್ಕಾರದಿಂದ ಕರ್ನಾಟಕಕ್ಕೆ ಯಾವುದೇ ಬಾಕಿ ಉಳಿದಿಲ್ಲ. ರಾಜ್ಯ ಸರ್ಕಾರದ ಪತ್ರಕ್ಕೆ ನಾನು ಕಾಯುತ್ತಿದ್ದೇನೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

Finance minister Nirmala Sitharaman said No dues to Karnataka from central government sat
Author
First Published Nov 30, 2023, 11:00 PM IST

ಬೆಂಗಳೂರು (ನ.30): ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ರಾಜ್ಯದ ಕೃಷಿ, ಕಂದಾಯ ಸಚಿವರು ಕೇಂದ್ರ ಸರ್ಕಾರಕ್ಕೆ ಪತ್ರ ಬರೆದು ಆರೋಪಗಳನ್ನು ಮಾಡಬಹುದು. ಆ‌ ಪತ್ರ  ನನಗೆ ತಲುಪುವ ಮುನ್ನವೇ ಸಾಮಾಜಿಕ ಜಾಲತಾಣದಲ್ಲಿ ಹಾಕ್ತಾರೆ. ಕೇಂದ್ರ ಸರ್ಕಾರದಿಂದ ಕರ್ನಾಟಕಕ್ಕೆ ಯಾವುದೇ ಬಾಕಿ ಉಳಿದಿಲ್ಲ. ರಾಜ್ಯ ಸರ್ಕಾರದ ಪತ್ರಕ್ಕೆ ನಾನು ಕಾಯುತ್ತಿದ್ದೇನೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಹೇಳಿದ್ದಾರೆ.

ಬೆಂಗಳೂರಿನಲ್ಲಿ ಗುರುವಾರ ಜನೌಷಧಿ ಕೇಂದ್ರ ಉದ್ಘಾಟನೆಗೆ ಆಗಮಿಸಿದ್ದ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ರಾಜ್ಯದ ಕೃಷಿ, ಕಂದಾಯ ಸಚಿವರು ಕೇಂದ್ರ ಸರ್ಕಾರಕ್ಕೆ ಪತ್ರ ಬರೆದು ಆರೋಪಗಳನ್ನು ಮಾಡಬಹುದು. ಆ‌ ಪತ್ರ  ನನಗೆ ತಲುಪುವ ಮುನ್ನವೇ ಸಾಮಾಜಿಕ ಜಾಲತಾಣದಲ್ಲಿ ಹಾಕ್ತಾರೆ. ನಾನು ಕೇರಳದಲ್ಲಿಯೂ ಹೇಳಿದ್ದೇನೆ. ನರೇಂದ್ರ ಮೋದಿಯವರು ಪ್ರಧಾನಿ ಆಗುವ ಮುನ್ನವೇ 10 ವರ್ಷ ಕಾಲ ಗುಜರಾತ್ ಸಿಎಂ ಆಗಿದ್ದವರು. ಹೀಗಾಗಿ, ಕೇಂದ್ರದಿಂದ ಹಣವನ್ನು ಸೂಕ್ತ ಕಾಲಕ್ಕೆ ಪಡೆಯುವುದು ಹೇಗೆಂಬುದು ಪ್ರಧಾನಿಗೆ ಗೊತ್ತಿದೆ ಎಂದು. ಇನ್ನು ಕೇಂದ್ರ ಸರ್ಕಾರದಿಂದ ಕರ್ನಾಟಕಕ್ಕೆ ಯಾವುದೇ ಬಾಕಿ ಉಳಿದಿಲ್ಲ ಎಂದು ತಿಳಿಸಿದರು.

ಬೆಂಗಳೂರು, ಮಂಡ್ಯ, ಮೈಸೂರಿನ 900 ಭ್ರೂಣ ಹತ್ಯೆ ಕೇಸನ್ನು ಸಿಐಡಿ ತನಿಖೆಗೆ ವಹಿಸಿದ ಸರ್ಕಾರ!

ನಾನು  ಕರ್ನಾಟಕದ ಸಂಸದೆಯಾಗಿ ನನಗೂ ಜವಾಬ್ದಾರಿ ಇದೆ. ಕೇಂದ್ರ ಸರ್ಕಾರದಿಂದ ಕರ್ನಾಟಕಕ್ಕೆ ಯಾವುದೇ ಬಾಕಿ ಉಳಿದಿಲ್ಲ. ರಾಜ್ಯ ಸರ್ಕಾರದ ಪತ್ರಕ್ಕೆ ನಾನು ಕಾಯುತ್ತಿದ್ದೇನೆ. Accountant general ಸಹಿ ಇಲ್ಲದೆ ಹಣ ಕಳಿಸೋಕೆ ಸಾಧ್ಯನಾ? ಇದು ಸತ್ಯ.  ಎನ್ ಡಿ ಆರ್ ಎಫ್ ಹಣ ಬಿಡುಗಡೆಗೆ ಒಂದು ಕಮಿಟಿ ಇದೆ. ಕೇಂದ್ರ ಗೃಹ ಸಚಿವರು ಅದನ್ನ ನೋಡ್ತಾರೆ. ಕಂದಾಯ ಸಚಿವ ಕೃಷ್ಣ ಬೈರೇಗೌಡ  ಬಂದು ಭೇಟಿ ಮಾಡಿದ್ದರು. ನಾನು ಅವರಿಗೆ ವಿವರಣೆ ನೀಡಿದ್ದೇನೆ. ಎಸ್ ಡಿಆರ್ ಎಫ್ ಹಣ ರಾಜ್ಯ ಸರ್ಕಾರದ ಬಳಿ ಇದೆ. ಹಣ ಹಾಗೆ ಬರುವುದಿಲ್ಲ. ಕೇಂದ್ರ ತಂಡ ಬಂದು ಪರಿಶೀಲನೆ ಮಾಡಿ ವರದಿ ನೀಡಿದೆ. ಹೈಪವರ್ ಕಮಿಟಿ ಅದನ್ನು ಮುಂದೆ ನೋಡುತ್ತದೆ. ಹೈಪವರ್ ಕಮಿಟಿ ತೀರ್ಮಾನ ಮಾಡಿದ ತಕ್ಷಣವೇ ರಾಜ್ಯಕ್ಕೆ ಪರಿಹಾರ ಬರಲಿದೆ. ಅದನ್ನು ಯಾರು ನಿಲ್ಲಿಸಲು ಸಾಧ್ಯವಿಲ್ಲ ಎಂದರು.

ಉತ್ತರ ಕರ್ನಾಟಕದ ರೈತರಿಂದ ಬೆಳೆ ಖರೀದಿಗೆ ಐಟಿಸಿ ಸೂಚನೆ‌ ನೀಡಿದ್ದೇವೆ. ಇದರಿಂದ ರೈತರಿಗೆ ಸ್ವಲ್ಪ ಹಣ ಸಿಗಲಿದೆ. ಹೈಲೆವಲ್ ಮೀಟಿಂಗ್ ಯಾವಾಗ ಮಾಡ್ತಾರೆ ಎಂಬುದು ನನಗೆ ಗೊತ್ತಿಲ್ಲ. ಕೇಂದ್ರ ಗೃಹ ಸಚಿವ ಅಮಿಶ್ ಶಾ ನೋಡ್ತಾರೆ. ಶೇ.100 ನೀವು ಕೇಳಿದ್ದು ಸರಿಯಿದೆ. ಅದಕ್ಕೆ ನಾನು ನಿಂತು ಉತ್ತರ ನೀಡಿದ್ದೇನೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದರು.

ಬೆಂಗಳೂರು, ಮಂಡ್ಯ, ಮೈಸೂರಿನ 900 ಭ್ರೂಣ ಹತ್ಯೆ ಕೇಸನ್ನು ಸಿಐಡಿ ತನಿಖೆಗೆ ವಹಿಸಿದ ಸರ್ಕಾರ!

ಇಂದು ಪ್ರಧಾನಿ ಮೋದಿ 10 ಸಾವಿರದ ಜನೌಷಧಿ  ಕೇಂದ್ರ ಉದ್ಘಾಟನೆ ಮಾಡಿದ್ದಾರೆ. ದೇಶದ ಎಲ್ಲ ರಾಜ್ಯಗಳಲ್ಲಿ ಪ್ರಸಿದ್ಧಿ ಗಳಿಸಿವೆ. ಅದರಲ್ಲೂ ಬಡ‌ ಮದ್ಯಮ ವರ್ಗದ ಜನರಿಗೆ ,ಬಡವರಿಗೆ ಉತ್ತಮ ಸೇವೆ ನೀಡುತ್ತಿದೆ. ಇದರಿಂದ 70% ಹಣವನ್ನು ಉಳಿಸಬಹುದು. ಶೇ. 66% ಕಡಿಮೆ ಆಗಲಿದೆ. 100 ರೂಪಾಯಿ ಖರೀದಿ ಮಾಡಿದರೆ 40 ರೂಪಾಯಿ ಪಾವತಿ ಮಾಡಬಹುದು. ಇದರಿಂದ ಉಳಿದ ಹಣವನ್ನು ಮಕ್ಕಳ ಶಿಕ್ಷಣಕ್ಕೆ ಬಳಸಬಹುದು. ಬೆಂಗಳೂರಿನ ಇದನ್ನ ಬಳಕೆ ಮಾಡಿಕೊಳ್ಳಬೇಕು ಎಂದು ಮನವಿ ಮಾಡಿದರು.

Latest Videos
Follow Us:
Download App:
  • android
  • ios