ಒಕ್ಕಲಿಗರ ಅವಹೇಳನ ಆರೋಪ; ಕೊನೆಗೂ ಕೆಎಸ್ ಭಗವಾನ್ ವಿರುದ್ಧ ಎಫ್‌ಐಆರ್ ದಾಖಲು!

ಒಕ್ಕಲಿಗ ಸಮುದಾಯದ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪ ಹಿನ್ನೆಲೆ ಚಿಂತಕ ಪ್ರೊ.ಕೆಎಸ್ ಭಗವಾನ್ ವಿರುದ್ಧ ಮೈಸೂರಿನ ದೇವರಾಜ ಪೊಲೀಸ್ ಠಾಣೆಯಲ್ಲಿ ದೂರು ದಾಖಲ ಕರ್ನಾಟಕ ರಾಜ್ಯ ಒಕ್ಕಲಿಗ ಸಂಘದ ನಿರ್ದೇಶಕ ಮೈಸೂರಿನ ಗಂಗಾಧರ್ ಸಿ ಎಂಬುವವರು ಕೆಎಸ್ ಭಗವಾನ್ ಹೇಳಿಕೆ ವಿರುದ್ಧ  ದೂರು ದಾಖಲಿಸಿದ್ದರು. ಐಪಿಸಿ ಸೆಕ್ಷನ್ 153 ಹಾಗೂ 153 A ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು.

Finally an FIR was filed against KS Bhagwan his controversy statement about vokkaligas rav

ಮೈಸೂರು (ಅ.21) ಒಕ್ಕಲಿಗ ಸಮುದಾಯದ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪ ಹಿನ್ನೆಲೆ ಚಿಂತಕ ಪ್ರೊ.ಕೆಎಸ್ ಭಗವಾನ್ ವಿರುದ್ಧ ಮೈಸೂರಿನ ದೇವರಾಜ ಪೊಲೀಸ್ ಠಾಣೆಯಲ್ಲಿ ದೂರು ದಾಖಲ

ಕರ್ನಾಟಕ ರಾಜ್ಯ ಒಕ್ಕಲಿಗ ಸಂಘದ ನಿರ್ದೇಶಕ ಮೈಸೂರಿನ ಗಂಗಾಧರ್ ಸಿ ಎಂಬುವವರು ಕೆಎಸ್ ಭಗವಾನ್ ಹೇಳಿಕೆ ವಿರುದ್ಧ  ದೂರು ದಾಖಲಿಸಿದ್ದರು. ಐಪಿಸಿ ಸೆಕ್ಷನ್ 153 ಹಾಗೂ 153 A ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು.

'ಒಕ್ಕಲಿಗರು ಸಂಸ್ಕೃತಿ ಹೀನರು' ಅವಹೇಳನಕಾರಿ ಹೇಳಿಕೆ: ನಮಗೆ ಸಂಸ್ಕೃತಿ ಪಾಠ ಮಾಡುವಂತೆ ಭಗವಾನ್ ಮನೆಮುಂದೆ ಒಕ್ಕಲಿಗರು ಪಟ್ಟು!

ಪ್ರೊ ಭಗವಾನ್ ಶ್ರೀರಾಮ ಹಾಗೂ ಒಕ್ಕಲಿಗ ಸಮುದಾಯದ ವಿರುದ್ದ ಅವಹೇಳನಕಾರಿ ಹೇಳಿಕೆ ನೀಡಿದ್ದ ವಿಚಾರಕ್ಕೆ ಇತ್ತೀಚೆಗೆ ಎನ್‌ಸಿಆರ್ ದಾಖಲಿಸಿಕೊಂಡಿದ್ದ ಪೊಲೀಸರು. ಈ ಸಂಬಂಧ  ಪ್ರೊ.ಭಗವಾ‌ನ್‌ಗೆ ನೋಟಿಸ್ ಜಾರಿ ಮಾಡಿದ್ದರು. ಅವಹೇಳನಕಾರಿ ಹೇಳಿ ನೀಡಿದರೂ ಬಂಧಿಸದ ಪೊಲೀಸರ ನಡೆ ವಿರುದ್ಧ  ಒಕ್ಕಲಿಗ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿದ್ದರು. ಭಗವಾನ್ ರನ್ನು ಬಂಧಿಸುವಂತೆ ರಾಜ್ಯಾದ್ಯಂತ ಒಕ್ಕಲಿಗ ಸಂಘಟನೆಗಳು ಬೀದಿಗಿಳಿದು ಪ್ರತಿಭಟನೆ ನಡೆಸಿದ್ದರು. ಇದೀಗ ಎಫ್‌ಐಆರ್ ದಾಖಲು ಮಾಡಿಕೊಂಡಿರುವ ಪೊಲೀಸರು.

ದಸರಾ ಕವಿಗೋಷ್ಠಿ ಪಟ್ಟಿಯಿಂದ ಪ್ರೊ. ಭಗವಾನ್‌ಗೆ ಕೊಕ್‌: ರಾಜೇಂದ್ರರಿಂದ ಚಾಲನೆ

ನಗರದ ಪುರಭವನ ಆವರಣದಲ್ಲಿ ಮಹಿಷ ದಸರಾ ಆಚರಣಾ ಸಮಿತಿಯು ಆಯೋಜಿಸಿದ್ದ ಮಹಿಷ ಉತ್ಸವ ಸಮಾರಂಭದಲ್ಲಿ ಅವಹೇಳಕಾರಿ ಮಾತನಾಡಿದ್ದ ಭಗವಾನ್, ಒಕ್ಕಲಿಗರು ಸಂಸ್ಕೃತಿ ಹೀನರು, ಪಶುಗಳು ಎಂದಿದ್ದ ಭಗವಾನ್. ಭಗವಾನರ ಹೇಳಿಕೆ ವಿರೋಧಿಸಿ ಭಗವಾನ್ ಮನೆ ಮುಂದೆ ತೀವ್ರ ಪ್ರತಿಭಟನೆ ನಡೆಸಿದ್ದರು.

Latest Videos
Follow Us:
Download App:
  • android
  • ios