Asianet Suvarna News Asianet Suvarna News

ಇನ್ನೆರಡು ತಿಂಗಳಲ್ಲಿ ಶಿವಮೊಗ್ಗಕ್ಕೆ ಫೈಟರ್‌ ಜೆಟ್‌ ವಿಮಾನ: ಸಂಸದ ರಾಘ​ವೇಂದ್ರ

ಭಾರತ-ಪಾಕಿಸ್ತಾನ ಮತ್ತು ಭಾರತ-ಬಾಂಗ್ಲಾ ವಿಮೋಚನಾ ಯುದ್ದದಲ್ಲಿ ಕಾರ್ಯನಿರ್ವಹಿಸಿದ್ದ ಯುದ್ಧ ಟ್ಯಾಂಕರ್‌ ಶಿವಮೊಗ್ಗಕ್ಕೆ ಬಂದಿದೆ. ಎರಡು ತಿಂಗಳಲ್ಲಿ ಫೈಟರ್‌ ಜೆಟ್‌ ವಿಮಾನ ಕೂಡ ಬರಲಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು. 

Fighter jet flight to Shivamogga in next two months Says MP BY Raghavendra gvd
Author
First Published Aug 15, 2023, 2:40 AM IST

ಶಿವಮೊಗ್ಗ (ಆ.15): ಭಾರತ-ಪಾಕಿಸ್ತಾನ ಮತ್ತು ಭಾರತ-ಬಾಂಗ್ಲಾ ವಿಮೋಚನಾ ಯುದ್ದದಲ್ಲಿ ಕಾರ್ಯನಿರ್ವಹಿಸಿದ್ದ ಯುದ್ಧ ಟ್ಯಾಂಕರ್‌ ಶಿವಮೊಗ್ಗಕ್ಕೆ ಬಂದಿದೆ. ಎರಡು ತಿಂಗಳಲ್ಲಿ ಫೈಟರ್‌ ಜೆಟ್‌ ವಿಮಾನ ಕೂಡ ಬರಲಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು. ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ಶಿವಮೊಗ್ಗಕ್ಕೆ ಬಂದಿರುವ ಯುದ್ಧ ಟ್ಯಾಂಕರ್‌ ಅನ್ನು ವಿಮಾನ ನಿಲ್ದಾಣಕ್ಕೆ ಹೋಗುವ ದಾರಿಯಲ್ಲಿ ಎಂಆರ್‌ಎಸ್‌ ವೃತ್ತದಲ್ಲಿ ಸ್ಥಾಪನೆ ಮಾಡಬೇಕೆಂಬ ಯೋಜನೆ ಇದೆ. 

ಮನವಿ ಮೇರೆಗೆ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಈ ನಿಷ್ಕಿ್ರಯ ಟ್ಯಾಂಕರ್‌ ಮತ್ತು ವಿಮಾನವನ್ನು ಶಿವಮೊಗ್ಗ ಜಿಲ್ಲೆಗೆ ಕೊಡುಗೆಯಾಗಿ ಕೊಟ್ಟಿದ್ದಾರೆ ಎಂದರು. ಶಿವಮೊಗ್ಗ ಜಿಲ್ಲೆಗೂ, ಸ್ವಾತಂತ್ರ್ಯ ಸಂಗ್ರಾಮಕ್ಕೂ, ದೇಶಾಭಿಮಾನಕ್ಕೂ ಒಂದಕ್ಕೊಂದು ಕೊಂಡಿಯಾಗಿರುವ ಈ ಕ್ಷೇತ್ರಕ್ಕೆ ಕೇಂದ್ರ ಸರ್ಕಾರ ವಿಶೇಷ ಆದ್ಯತೆ ಕೊಟ್ಟಿದೆ. ರೈಲ್ವೆ ಮತ್ತು ಹೈವೇಗೆ ಶಿವಮೊಗ್ಗ ಜಿಲ್ಲೆಗೆ ಅತಿ ಹೆಚ್ಚಿನ ಅನುದಾನವನ್ನು ಕೇಂದ್ರ ಒದಗಿಸಿದೆ. 

ಸಿದ್ದರಾಮಯ್ಯ ಸರ್ಕಾರ ಮೋಸಗಾರರ ಸರ್ಕಾರ: ಬಿಜೆಪಿ MLC ಛಲವಾದಿ ನಾರಾಯಣಸ್ವಾಮಿ

ಸ್ವಾತಂತ್ರ್ಯ ಪೂರ್ವದಲ್ಲೇ ಸ್ವಾತಂತ್ರ್ಯ ಗ್ರಾಮ ಎಂದು ದೇಶದಲ್ಲೇ ಗುರುತಿಸಿ ಸ್ವಾತಂತ್ರ್ಯ ಹೋರಾಟಕ್ಕೆ ಕಿಚ್ಚು ಹಚ್ಚಿ, ಐದು ಜನರನ್ನು ಗಲ್ಲಿಗೇರಿಸಿದ ಶಿಕಾರಿಪುರದ ಈಸೂರು ಗ್ರಾಮದಲ್ಲಿ .5 ಕೋಟಿ ವೆಚ್ಚದಲ್ಲಿ ಹುತಾತ್ಮ ಸ್ಮಾರಕ ಅಭಿವೃದ್ಧಿಪಡಿಸಿದ್ದು, ಗಣರಾಜ್ಯೋತ್ಸವ ದಿನದಂದು ಅದನ್ನು ಅದ್ಧೂರಿಯಾಗಿ ಉದ್ಘಾಟಿಸಲಾಗುತ್ತಿದೆ ಎಂದು ಹೇಳಿದರು. ಅದೇ ರೀತಿ ಆ.15ರೊಳಗೆ ಶಿವಮೊಗ್ಗ ವಿಮಾನ ನಿಲ್ದಾಣದಿಂದ ವಿಮಾನ ಹಾರಾಟ ಪ್ರಾರಂಭಿಸಬೇಕೆಂಬ ಇಚ್ಛೆ ಇತ್ತು. ಆದರೆ, ಈಗ ಆ.31ಕ್ಕೆ ಶಿವಮೊಗ್ಗದಿಂದ ವಿಮಾನ ಹಾರಾಟ ಪ್ರಾರಂಭವಾಗಲಿದೆ. ಶಿವಮೊಗ್ಗಕ್ಕೆ ಮುಂದಿನ ದಿನಗಳಲ್ಲಿ ಒಳ್ಳೆಯ ಭವಿಷ್ಯವಿದೆ ಎಂದರು.

ತಿರುಪತಿ, ಗೋವಾ, ಹೈದರಾಬಾದ್‌ಗೂ ವಿಮಾನ ಹಾರಾಟಕ್ಕೆ ಅನುಮತಿ: ಶಿವಮೊಗ್ಗದಿಂದ ತಿರುಪತಿ, ಗೋವಾ ಮತ್ತು ಹೈದರಾಬಾದ್‌ ನಗರಗಳಿಗೆ ಉಡಾನ್‌ ಯೋಜನೆಯಡಿ ವಿಮಾನ ಯಾನ ಸೇವೆ ನೀಡಲು ಸ್ಪೈಸ್‌ ಜೆಟ್‌, ಸ್ಟಾರ್‌ ಏರ್‌ಲೈನ್ಸ್‌ ಮತ್ತು ಅಲಯನ್ಸ್‌ ಏರ್‌ಲೈನ್‌ ಸಂಸ್ಥೆಗಳಿಗೆ ಅನುಮತಿ ಸಿಕ್ಕಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಈ ಮಾರ್ಗದಲ್ಲಿ ವಿಮಾನ ಸಂಚಾರ ಮಾಡುವ ಸಂಬಂಧ ಕರೆದಿದ್ದ ಟೆಂಡರ್‌ನಲ್ಲಿ ಭಾಗವಹಿಸಿ ಈ ಮೂರು ಏರ್‌ಲೈನ್ಸ್‌ ಸಂಸ್ಥೆಗಳು ಯಶಸ್ವಿಯಾಗಿವೆ. ಸದ್ಯಕ್ಕೆ ಹಗಲು ವೇಳೆಯಲ್ಲಿ ಮಾತ್ರ ವಿಮಾನ ಸಂಚಾರವಿದ್ದು, ರಾತ್ರಿ ವೇಳೆ ಲ್ಯಾಂಡಿಂಗ್‌ ವ್ಯವಸ್ಥೆಗೆ ಸಂಬಂಧಿಸಿದ ಕಾಮಗಾರಿ ಪ್ರಗತಿಯಲ್ಲಿದ್ದು ಆದಷ್ಟುಬೇಗ ಮುಗಿಯಲಿದೆ ಎಂದು ತಿಳಿಸಿದರು.

ಉಡಾನ್‌ ಯೋಜನೆಯಡಿ ಅನುಮತಿ ಪಡೆದಿರುವ ಏರ್‌ಲೈನ್ಸ್‌ ಸಂಸ್ಥೆಗಳು ವಿಮಾನ ಸಂಚಾರಕ್ಕೆ ಸಿದ್ಧತೆ ನಡೆಸಿವೆ. ನಾಗರಿಕ ವಿಮಾನ ಯಾನ ನಿರ್ದೇಶನಾಲಯದ ಅನುಮತಿ ದೊರೆತ ನಂತರ ಅವು ಕಾರ್ಯಾಚರಣೆ ನಡೆಸಲಿವೆ. ಆ.11ರಂದು ವಿಮಾನ ಹಾರಾಟ ಆರಂಭವಾಗಬೇಕಿತ್ತು. ಆದರೆ, ತಾಂತ್ರಿಕ ಕಾರಣಗಳಿಂದ ಆ.31ಕ್ಕೆ ಮುಂದೂಡಲ್ಪಟ್ಟಿದೆ ಮಾಹಿತಿ ನೀಡಿದರು.

ಕಾಡಾನೆ ಹಾವಳಿ ನಿಯಂತ್ರಣಕ್ಕೆ ಕ್ರಮವಹಿಸಲು ಸಚಿವ ಬೋಸರಾಜು ಸೂಚನೆ

ಎಫ್‌ಎಂ ಟ್ರಾನ್ಸ್‌ಮೀಟರ್‌ಗೆ 10 ಕೋಟಿ ಬಿಡುಗಡೆ: ಭದ್ರಾವತಿ ಆಕಾಶವಾಣಿ ಕೇಂದ್ರದಲ್ಲಿ ಪ್ರಸ್ತುತ 1 ಕಿಲೋ ವ್ಯಾಟ್‌ ಎಫ್‌ಎಂ ಟ್ರಾನ್ಸ್‌ಮೀಟರ್‌ ಬದಲಿಗೆ ಶಿವಮೊಗ್ಗಕ್ಕೆ 10 ಕಿಲೋ ವ್ಯಾಟ್‌ ಎಫ್‌ಎಂ ಟ್ರಾನ್ಸ್‌ಮೀಟರ್‌ ಪ್ರಸಾರ ಭಾರತಿ ಮಂಜೂರು ಮಾಡಿ 10 ಕೋಟಿ ಬಿಡುಗಡೆ ಮಾಡಿದೆ. ಮಂಜೂರಾದ 10 ಕಿಲೋ ವ್ಯಾಟ್‌ ಎಫ್‌ಎಂ ಟ್ರಾನ್ಸ್‌ಮೀಟರ್‌ನಿಂದ ಶಿವಮೊಗ್ಗ ಜಿಲ್ಲೆಯ ಸಾಂಸ್ಕೃತಿಕ ಚಟುವಟಿಕೆ, ರೈತಪರ ಯೋಜನೆ ಹಾಗೂ ಇತರೆ ಕ್ಷೇತ್ರಗಳ ಅಭಿವೃದ್ಧಿಗಳು ಜಗತ್ತಿಗೆ ಪರಿಚಯವಾಗಲಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.

Follow Us:
Download App:
  • android
  • ios