ಗಂಟೇಲಿ ಪೊಲೀಸ್ ತುರ್ತು ಸ್ಪಂದನೆ 112ಕ್ಕೆ ಬಂತು 50 ಸಾವಿರ ಕರೆ..!
ಪೊಲೀಸ್ ಇಲಾಖೆಯ ತುರ್ತು ಸ್ಪಂದನೆ ಸಹಾಯವಾಣಿಗೆ ನಿರೀಕ್ಷೆಗೂ ಮೀರಿ ಜನರಿಂದ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಒಂದು ತಾಸಿಗೆ ಸುಮಾರು 50 ಸಾವಿರಕ್ಕೂ ಅಧಿಕ ನೆರವು ಕೋರಿ ನಾಗರಿಕ ಸಮುದಾಯ ದಿಂದ ಕರೆಗಳು ಬರುತ್ತಿವೆ. ಪರಿಣಾಮ ಆರಂಭವಾದ ದಿನವೇ 112ರಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದೆ.
ಬೆಂಗಳೂರು(ನ.02): ಪೊಲೀಸ್ ಇಲಾಖೆಯ ತುರ್ತು ಸ್ಪಂದನೆ ಸಹಾಯವಾಣಿಗೆ ನಿರೀಕ್ಷೆಗೂ ಮೀರಿ ಜನರಿಂದ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಒಂದು ತಾಸಿಗೆ ಸುಮಾರು ೫೦ ಸಾವಿರಕ್ಕೂ ಅಧಿಕ ನೆರವು ಕೋರಿ ನಾಗರಿಕ ಸಮುದಾಯ ದಿಂದ ಕರೆಗಳು ಬರುತ್ತಿವೆ.
ಈ ಅನಿರೀಕ್ಷಿತ ಕರೆಗಳ ಪ್ರವಾಹ ಹಿನ್ನೆಲೆಯಲ್ಲಿ ಡಯಲ್ 112 ಸಂಪರ್ಕಕ್ಕೆ ತಾಂತ್ರಿಕ ತೊಂದರೆ ಎದುರಾಗಿದೆ. ‘ಒನ್ ಇಂಡಿಯಾ ಒನ್ ನಂಬರ್’ ಘೋಷಣೆಯಡಿ ದೇಶ ವ್ಯಾಪ್ತಿ ತುರ್ತು ಸ್ಪಂದನೆಗೆ ಒಂದೇ ಸಹಾಯವಾಣಿ ಸಂಖ್ಯೆ ಆರಂಭಿಸಲಾಗಿದೆ.
ಸುಮನಹಳ್ಳಿ ಮೇಲ್ಸೇತುವೆಯಲ್ಲಿ ಗುಂಡಿ, ವಾಹನ ಸವಾರರೇ ಹುಷಾರ್..!
ಅದರಂತೆ ರಾಜ್ಯದಲ್ಲಿ ಪೊಲೀಸ್ ಇಲಾಖೆಯ ವೈರ್‌ಲೆಸ್ ವಿಭಾಗದಲ್ಲಿ ಆರಂಭಿಸಲಾದ ‘ಡಯಲ್ 112’ಗೆ ಮುಖ್ಯಮಂತ್ರಿ ಯಡಿಯೂರಪ್ಪ ಗುರುವಾರ ಚಾಲನೆ ನೀಡಿದ್ದರು. ಚಾಲನೆ ನೀಡಿದ ಕೆಲವೇ ತಾಸುಗಳಲ್ಲಿ ನಾನಾ ರೀತಿಯ ಸಮಸ್ಯೆ ಹೇಳಿಕೊಂಡು ಜನರು ಕರೆ ಮಾಡಲಾರಂಭಿಸಿದರು.
ಆ್ಯಂಬುಲೆನ್ಸ್, ಅಗ್ನಿಶಾಮಕದಳ, ಪೊಲೀಸ್‌ಗೆ ಒಂದೇ ಸಂಖ್ಯೆ 112
ಪ್ರತಿ ಒಂದು ತಾಸಿಗೆ 50164 ಕರೆಗಳು ಬರುತ್ತಿವೆ. ಇದರಿಂದ ಕರೆಗಳ ದಟ್ಟಣೆ ಉಂಟಾಗಿದೆ. 112ಕ್ಕ ಆಗಮಿಸಿದ ಕರೆಗಳು ನಿಯಂತ್ರಣ ಕೊಠಡಿಯಲ್ಲಿ ದಾಖಲಾಗುತ್ತಿವೆ. ಎಲ್ಲಾ ಕರೆಗಳನ್ನು ಸ್ವೀಕರಿಸಲು ಆಗುತ್ತಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವ್ಹೀಲ್ ಚೇರ್ ನೀಡದ ಏರ್ ಇಂಡಿಯಾಗೆ 20 ಲಕ್ಷ ದಂಡ..!