ವ್ಹೀಲ್ ಚೇರ್ ನೀಡದ ಏರ್ ಇಂಡಿಯಾಗೆ 20 ಲಕ್ಷ ದಂಡ..!

ವಿಶೇಷ ಚೇತನ ದಂತವೈದ್ಯೆಯೊಬ್ಬರಿಗೆ ವ್ಹೀಲ್ ಚೇರ್ ನೀಡದಿರುವುದಕ್ಕೆ ಏರ್‌ ಇಂಯಾಗದೆ ದಂಡ ವಿಧಿಸಲಾಗಿದೆ. ಮಂಗಳ ಮುಖಿಗೆ ಉದ್ಯೋಗ ನಿರಾಕರಿಸಿ ಟೀಕೆಗೊಳಗಾಗಿದ್ದ ಏರ್ ಇಂಡಿಯಾ ಈಗ ಮತ್ತೊಮ್ಮೆ ತೀವ್ರ ಮುಜುಗರಕ್ಕೀಡಾಗಿದೆ.

air india charged with fine for not providing wheelchair

ಬೆಂಗಳೂರು(ನ.02): ವಿದೇಶ ಪ್ರವಾಸ ಕೈಗೊಂಡಿದ್ದ ಸಂದರ್ಭದಲ್ಲಿ ಅಂಗವಿಕಲ ದಂತ ವೈದ್ಯೆಯೊಬ್ಬರಿಗೆ ಗಾಲಿ ಕುರ್ಚಿ (ವ್ಹೀಲ್‌ಚೇರ್) ಒದಗಿಸದ ಪ್ರಕರಣ ಸಂಬಂಧ ಸಂತ್ರಸ್ತೆ ವೈದ್ಯ ಮತ್ತವರ ತಾಯಿಗೆ ಒಟ್ಟು ೨೦ ಲಕ್ಷ ರು. ಪಾವತಿಸುವಂತೆ ಏರ್ ಇಂಡಿಯಾ ಲಿಮಿಟೆಡ್‌ಗೆ ಹೈಕೋರ್ಟ್ ಆದೇಶಿಸಿದೆ.

ವ್ಹೀಲ್‌ಚೇರ್ ಒದಗಿಸದೆ ದೈಹಿಕ ಹಾಗೂ ಮಾನಸಿಕ ತೊಂದರೆ ಅನುಭವಿಸುವಂತೆ ಮಾಡಲಾಗಿದ್ದು, ಅದಕ್ಕಾಗಿ ತಮಗೆ ಪರಿಹಾರ ನೀಡಲು ಏರ್ ಇಂಡಿಯಾ ಲಿಮಿಟೆಡ್‌ಗೆ ನಿರ್ದೇಶಿಸುವಂತೆ ಕೋರಿ ಡಾ.ಎಸ್.ಜೆ. ರಾಜಲಕ್ಷ್ಮೀ ಮತ್ತವರ ತಾಯಿ ಡಾ.ಎಸ್. ಶೋಭಾ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿ ಬಿ.ವೀರಪ್ಪ ಅವರು ಇತ್ತೀಚೆಗೆ ಈ ಆದೇಶ ಮಾಡಿದ್ದಾರೆ.

ಗಿರಿನಗರ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ವಿರುದ್ಧ ಕ್ರಮ

ಈ ಆದೇಶ ಪ್ರತಿ ದೊರೆತ ಎಂಟು ವಾರಗಳಲ್ಲಿ ಅರ್ಜಿದಾರರಿಬ್ಬರಿಗೂ ತಲಾ 10 ಲಕ್ಷ ರು. ಪಾವತಿ ಮಾಡಬೇಕು ಎಂದು ಏರ್ ಇಂಡಿಯಾ ಲಿಮಿಟೆಡ್‌ಗೆ ನ್ಯಾಯಪೀಠ ಆದೇಶಿಸಿದೆ. ಜತೆಗೆ, ಪ್ರಕರಣದ ಕುರಿತು ಅರ್ಜಿದಾರರು ನೀಡಿದ ಮಾಹಿತಿ ಆಧರಿಸಿ ಪ್ರಕರಣ ದಾಖಲಿಸದೆ ನಿರ್ಲಕ್ಷ್ಯ ಪ್ರದರ್ಶಿಸಿದ ಹಿನ್ನೆಲೆಯಲ್ಲಿ ಬೆಂಗಳೂರಿನ ಗಿರಿನಗರ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕು ಎಂದು ಬೆಂಗಳೂರು ದಕ್ಷಿಣ ವಿಭಾಗದ ಡಿಸಿಪಿಗೆ ನ್ಯಾಯಪೀಠ ನಿರ್ದೇಶಿಸಿದೆ.

ಮಂಗಳಮುಖಿಗೆ ಉದ್ಯೋಗ ನಿರಾಕರಣೆ: ವಿಮಾನಯಾನ, ಏರ್ ಇಂಡಿಯಾಗೆ ಸುಪ್ರೀಂ ನೋಟಿಸ್

ಅಂಗವಿಕಲರ ಕಲ್ಯಾಣಕ್ಕಾಗಿ ಕೇಂದ್ರ ಸರ್ಕಾರ ಹಲವು ಯೋಜನೆ ಜಾರಿಗೆ ತಂದಿದೆ. ವಿಮಾನ ಪ್ರಯಾಣದ ವೇಳೆ ಏರ್ ಇಂಡಿಯಾ ಲಿಮಿಟೆಡ್ ಕೇಂದ್ರ ಸರ್ಕಾರ ಜಾರಿ ಮಾಡಿದ ಮಾರ್ಗಸೂಚಿಗಳ ಅನ್ವಯ ಅರ್ಜಿದಾರ ಅಂಗವಿಕಲೆಗೆ ಸವಲತ್ತು ನೀಡದೇ ತಪ್ಪು ಮಾಡಿದೆ. ಆಕೆಗೆ ವ್ಹೀಲ್‌ಚೇರ್ ನೀಡದಿರುವುದು ಅಕ್ಷಮ್ಯ. ಇದರಿಂದ ಅವರು ದೈಹಿಕ, ಮಾನಸಿಕ ಹಾಗೂ ಭಾವನಾತ್ಮಕವಾಗಿ ಆಘಾತ ಅನುಭವಿಸಿ ದ್ದಾರೆ. ಜತೆಗೆ, ಅವಮಾನವೂ ಎದುರಿಸಿದ್ದಾರೆ. ಇದು ಸಂವಿಧಾನದ ಪರಿಚ್ಛೇದ 14ರ ಉಲ್ಲಂಘ ನೆಯಾಗಿದೆ. ಆದ್ದರಿಂದ ಏರ್ ಇಂಡಿಯಾ ಲಿಮಿಟೆಡ್ ಪರಿಹಾರ ರೂಪದಲ್ಲಿ 20 ಲಕ್ಷ ರು. ಅನ್ನು ಅರ್ಜಿದರರಿಗೆ ಪಾವತಿಸಬೇಕು ಎಂದು ಹೈಕೋರ್ಟ್ ಆದೇಶದಲ್ಲಿ ತಿಳಿಸಿದೆ.

ಡಾ.ರಾಜಲಕ್ಷ್ಮೀ ಮತ್ತ ಅವರ ತಾಯಿ ಡಾ.ಶೋಭಾ 2016ರ ಜುಲೈ 19ರಂದು ಬೆಂಗಳೂರಿನಿಂದ ಲಂಡನ್‌ಗೆ ಏರ್ ಇಂಡಿಯಾ ವಿಮಾನದಲ್ಲಿ ಪ್ರಯಾಣಿಸಿದ್ದರು. ಅಂಗವಿಕಲೆಯಾದ ಕಾರಣ ಡಾ.ರಾಜಲಕ್ಷ್ಮೀ ಅವರು ವ್ಹೀಲ್‌ಚೇರ್ ತೆಗೆದುಕೊಂಡು ಹೋಗಿದ್ದರು. ಆದರೆ, ವಿಮಾನದಲ್ಲಿ ಪ್ರಯಾಣಿಸುವಾಗ ಏರ್ ಇಂಡಿಯಾ, ವ್ಹೀಲ್‌ಚೇರ್ ನೀಡಿರಲಿಲ್ಲ.

ವ್ಹೀಲ್ ಚೇರ್ ಕಳುಹಿಸಿರಲಿಲ್ಲ:

ಲಂಡನ್ ತಲುಪಿದ ನಂತರವೂ ವ್ಹೀಲ್ ಚೇರ್ ನೀಡಿರಲಿಲ್ಲ. ಈ ಹಿನ್ನೆಲೆಯಲ್ಲಿ ಹೈಕೋರ್ಟ್ ಮೆಟ್ಟಿಲೇರಿದ್ದ ರಾಜಲಕ್ಷ್ಮೀ ಅವರು, ಲಂಡನ್‌ಗೆ ತೆರಳಿದ ನಂತರವೂ ನನ್ನ ವ್ಹೀಲ್‌ಚೇರ್ ನೀಡಿರಲಿಲ್ಲ. ಈ ಬಗ್ಗೆ ವಿಚಾರಿಸಿದಾಗ ಬೆಂಗಳೂರಿನಿಂದಲೇ ವ್ಹೀಲ್‌ಚೇರ್ ಕಳುಹಿಸಿ ಕೊಟ್ಟಿಲ್ಲ ಎಂದು ವಿಮಾನ ಸಂಸ್ಥೆ ಅಧಿಕಾರಿಗಳು ತಿಳಿಸಿದ್ದರು. ಹೀಗಿದ್ದರೂ ಬೇರೊಂದು ವ್ಹೀಲ್‌ಚೇರ್ ಒದಗಿಸದೆ ತಡರಾತ್ರಿವರೆಗೂ ಕಾಯಿಸಿದ್ದರು. ಇದರಿಂದ ಲಂಡನ್‌ನಿಂದ ಸ್ಕಾಟ್‌ಲ್ಯಾಂಡ್ ಪ್ರವಾಸ ತಪ್ಪಿತು. ಅಲ್ಲದೆ, ಬೇರೊಂದು ಟ್ರಾವೆಲ್ ಏಜೆನ್ಸಿಗೆ ಹೆಚ್ಚಿನ ಹಣ ಪಾವತಿಸಿ ಬೆಂಗಳೂರಿಗೆ ಹಿಂದಿರುಗಿದೆ ಎಂದು ಆರೋಪಿಸಿದ್ದಾರೆ.

ಬಿಎಸ್ ವೈ ಆಡಳಿತಕ್ಕೆ ಸಿದ್ದರಾಮಯ್ಯ ಶೂನ್ಯ ಅಂಕ.

ಪ್ರಯಾಣದ ವೇಳೆ ಉಂಟಾದ ಕಷ್ಟದಿಂದ ನಾನು ಅನಾರೋಗ್ಯಕ್ಕೆ ಗುರಿಯಾಗಿ, 6 ತಿಂಗಳು ಕಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದೆ. ಆದ್ದರಿಂದ ಪ್ರವಾಸ ಮುನ್ನ ಪಾವತಿಸಿದ್ದ 5.7 ಲಕ್ಷ ರು. ಹಿಂದಿರುಗಿಸಲು ಹಾಗೂ 6 ತಿಂಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಕ್ಕೆ 15 ಲಕ್ಷ ರು. ಪರಿಹಾರ ನೀಡುವಂತೆ ಟ್ರಾವೆಲ್ಸ್ ಹಾಗೂ ಏರ್ ಇಂಡಿಯಾಗೆ ನಿರ್ದೇಶಿಸುವಂತೆ ಕೋರಿದ್ದರು.

Latest Videos
Follow Us:
Download App:
  • android
  • ios