'ಪರೀಕ್ಷೆನಾ ಬಡಿಯಾ.. ಪರೀಕ್ಷೆನಾ ಬಡಿಯಾ...' ಅಂದ್ಕೊಂಡು ಹುಡ್ಗಿ ಮಾಡಿದ್ಲು ಖತರ್ನಾಕ್‌ ಐಡಿಯಾ!

ಪರೀಕ್ಷೆಗೆ ಹೆದರಿ ವಿದ್ಯಾರ್ಥಿನಿಯೊಬ್ಬಳು ತನ್ನನ್ನು ಅಪಹರಣ ಮಾಡಲಾಗಿತ್ತು ಎನ್ನುವ ಸಖತ್‌ ಆದ ಕಥೆಯನ್ನು ಕಟ್ಟಿದ್ದಾಳೆ. ಕೊನೆಗೆ ಇದು ಪೊಲೀಸರ ಮಟ್ಟಕ್ಕೆ ಹೋಗಿ ತನಿಖೆಯಾದ ಬಳಿಕ, ಬಾಲಕಿ ಪರೀಕ್ಷೆಗೆ ಹೆದರಿ ಈ ಕೃತ್ಯ ಮಾಡಿದ್ದಾಳೆ ಎನ್ನುವುದು ಬಹಿರಂಗವಾಗಿದೆ.

fear of exams Girl creates fake Kidnap Story in uttara Kannada san

ದಾಂಡೇಲಿ (ಅ.20): ಪರೀಕ್ಷೆಗೆ ಭಯಪಟ್ಟ ವಿದ್ಯಾರ್ಥಿನಿಯೋರ್ವಳು ಅಪಹರಣದ ಕಥೆ ಹೆಣೆದು ನಂಬಿಸಿ ಕೊನೆಗೆ ಪೊಲೀಸರ ಕೈಯಲ್ಲಿ ಸಿಕ್ಕಿಬಿದ್ದ ಘಟನೆ ಉತ್ತರಕನ್ನಡ ಜಿಲ್ಲೆಯ ಹಳೇ ದಾಂಡೇಲಿಯಲ್ಲಿ ತಡವಾಗಿ ಬೆಳಕಿಗೆ ಬಂದಿದೆ. ದಾಂಡೇಲಿಯಲ್ಲಿ ಬೆಳಂಬೆಳಗ್ಗೆ ಶಾಲೆಗೆ ಹೋಗಿದ್ದ ವಿದ್ಯಾರ್ಥಿನಿ ಕಾಣೆಯಾಗಿದ್ದಳು. ನಂತರ ಸಂಬಂಧಿಕರ ಮನೆಗೆ ಬಂದ ಬಾಲಕಿ ತನ್ನನ್ನು ಅಪಹರಣ ಮಾಡಿ ವ್ಯಾನಿನಲ್ಲಿ ಹೊತ್ತೊಯ್ದಿದ್ದರು. ಆದರೆ, ನಾನು ತಪ್ಪಿಸಿಕೊಂಡು ಬಂದೆ ಎಂದು ಹೇಳಿದ್ದಳು. ವಿದ್ಯಾರ್ಥಿನಿ ಹೇಳಿದ ಈ ಮಾತು ಇಡೀ ನಗರವನ್ನೇ ಬೆಚ್ಚಿ ಬೀಳಿಸುವಂತೆ ಮಾಡಿದ್ದು, ನಗರ ಭಾಗದಲ್ಲಿ ಮಕ್ಕಳ ಕಳ್ಳರು ಬಂದಿರುವ ಗುಸು- ಗುಸು ಸುದ್ದಿ ಕೂಡಾ ಹರಿದಾಡಿತ್ತು. ಅಂದಹಾಗೆ,  ಪರೀಕ್ಷೆಗೆ ಭಯಪಟ್ಟ ವಿದ್ಯಾರ್ಥಿನಿ ಅಪಹರಣದ ಕಥೆ ಹೆಣೆದು ಅದನ್ನು ಎಲ್ಲರಿಗೂ ನಂಬಿಸಿ ಬಿಟ್ಟಿದ್ದಳು.

ಹಳೇ ದಾಂಡೇಲಿ (Old Dandeli) ಭಾಗದ ಪ್ರಾಥಮಿಕ ಶಾಲೆಯಲ್ಲಿ ಓದುತ್ತಿರುವ ಈ 12 ವರ್ಷದ ವಿದ್ಯಾರ್ಥಿನಿ ಶಾಲೆಗೆ ಹೋಗಲು ಮನಸ್ಸಿಲ್ಲದೆ, ಮುಂದೆ ನಡೆಯಲಿದ್ದ ಪರೀಕ್ಷೆಗೆ ಹೆದರಿ ಈ ಅಪಹರಣದ ಕಥೆಯನ್ನು ಸೃಷ್ಟಿಸಿದ್ದಳು. ಮನೆಯಿಂದ ಶಾಲಾ ಸಮವಸ್ತ್ರ ಧರಿಸಿ ಬಂದ ಈ ವಿದ್ಯಾರ್ಥಿನಿ ನೇರವಾಗಿ ಶಾಲೆಗೆ ಹೋಗದೆ ಕಿತ್ತೂರು ಚನ್ನಮ್ಮ ರಸ್ತೆಯವರೆಗೂ (Kittur Chennamma Road) ಹೋಗಿ ಅಲ್ಲೇ  ಪಕ್ಕದಲ್ಲೇ ಇರುವ ಮಿರಾಶಿ ಗಲ್ಲಿಯ ತನ್ನ ಅತ್ತೆಯ ಮನೆ ಸೇರಿಕೊಂಡಿದ್ದಳು. ಈ ಸಂದರ್ಭದಲ್ಲಿ ಆ ವಿದ್ಯಾರ್ಥಿನಿಯ (Girl Student) ಅತ್ತೆಯ ಮನೆಯವರು ವಿಚಾರಿಸಿದಾಗ ತನ್ನನ್ನು ಮಾರುತಿ ವ್ಯಾನಿನಲ್ಲಿ ಬಂದ ಯಾರೋ ಇಬ್ಬರು ಕಿಡ್ನಾಪ್ ಮಾಡಿದ್ದರು. ಕಿತ್ತೂರು ಚೆನ್ನಮ್ಮ ವೃತ್ತದ ಬಳಿ ವಾಹನವನ್ನು ನಿಲ್ಲಿಸಿದಾಗ ನಾನು ಅವರಿಂದ ತಪ್ಪಿಸಿಕೊಂಡು ಬಂದಿದ್ದೇನೆ ಎಂಬ ಕಥೆ ಹೇಳಿದ್ದಳು. 

UTTARA KANNADA: ಎಂಡೋಸಲ್ಫಾನ್‌ ಮಾಹಿತಿ ಕಲೆ ಹಾಕಲು ಸರ್ಕಾರ ಸಿದ್ಧತೆ

ನಂತರ ಆ ವಿದ್ಯಾರ್ಥಿನಿಯ ಸಂಬಂಧಿಕರು ಈ ವಿಷಯವನ್ನು ಆಕೆಯ ಪಾಲಕರಿಗೆ ತಿಳಿಸಿದ್ದಾರೆ. ಕೂಡಲೇ ಪೋಷಕರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಪೋಷಕರು ಕೂಡಾ ತಮ್ಮ ಮಗಳ ಮಾತನ್ನು ನಂಬಿ ಅಪಹರಣಕಾರರು ಬಂದು ನಮ್ಮ ಮಗಳನ್ನು ಅಪಹರಿಸಿದ್ದಾರೆ ಎಂದು ಪೊಲೀಸರಲ್ಲಿ ಹೇಳಿದ್ದರು.  ನಂತರ ಪೊಲೀಸರು (Police) ಕೂಡಾ ಘಟನೆಯ ಬಗ್ಗೆ ತಲೆಕೆಡಿಸಿಕೊಂಡು ಹುಡುಕಾಟ ಆರಂಭಿಸಿದ್ದರು. ವಿದ್ಯಾರ್ಥಿನಿಯನ್ನೇ ಕರೆದುಕೊಂಡು ನೀನು ಯಾವ ದಾರಿಯಲ್ಲಿ ಹೋಗುತ್ತಿದ್ದೆ, ಎಲ್ಲಿಂದ ಕಿಡ್ನ್ಯಾಪ್ ಮಾಡಿದ್ರು ಎಂಬ ಮಾಹಿತಿಯನ್ನು ಪಡೆಯುತ್ತಾ ಹೋಗಿದ್ದಾರೆ. ಅಲ್ಲಿಯೂ ಆ ವಿದ್ಯಾರ್ಥಿನಿ ಅಪಹರಣ ಆಗಿತ್ತು ಎನ್ನುವುದನ್ನು ನಂಬಿಸುತ್ತಾ ಹೋಗಿದ್ದಳು. 

ಕಾರವಾರದಲ್ಲಿ ಮತ್ತೆ ಭಾಷಾ ವಿವಾದಕ್ಕೆ ಕಿಡಿ ಇಟ್ಟ ಮಾಜಿ ಸಚಿವ ಆನಂದ ಆಸ್ನೋಟೆಕರ್

ಬಾಲಕಿ ಹೋದ ಹಾಗೂ ನಿಂತ ಮತ್ತು ತಪ್ಪಿಸಿಕೊಂಡ ಸ್ಥಳದಲ್ಲಿದ್ದ ಸಿಸಿ ಕ್ಯಾಮೆರಾಗಳನ್ನು ಪೊಲೀಸರು ಪರಿಶೀಲಿಸಿದಾಗ ಯಾವ ಸಿಸಿ ಕ್ಯಾಮೆರಾಗಳಲ್ಲಿಯೂ ಕೂಡಾ ಆಕೆಯ ಚಲನವಲನಗಳಾಗಲೀ ಅಥವಾ ಮಾರುತಿ ವ್ಯಾನ್ ನಿಂತ ಬಗ್ಗೆ ಸುಳಿವು ಸಿಕ್ಕಿರಲಿಲ್ಲ. ಮತ್ತೆ ಮತ್ತೆ ವಿದ್ಯಾರ್ಥಿನಿಯನ್ನು ಪ್ರಶ್ನಿಸಿದಾಗ ಆಕೆ ಅದೇ ಕಥೆ ಹೇಳುತ್ತಿದ್ದಳಾದ್ರೂ ಪೊಲೀಸರಿಗೆ ಈ ಬಗ್ಗೆ ಅನುಮಾನ ಮೂಡಿದೆ. ನಂತರ ಆಕೆಯನ್ನು ಪುಸಲಾಯಿಸಿ ಕೇಳಿದಾಗ ಆಕೆ ನಡೆದಿರುವ ಸತ್ಯವನ್ನು ಒಪ್ಪಿಕೊಂಡು ಶಾಲೆ ಆರಂಭವಾದ ದಿನ ಹಾಗೂ ಪರೀಕ್ಷೆಗೆ (Fear of Exam) ಅಂಜಿ ತಾನು ಈ ರೀತಿ ಮಾಡಿದೆ ಎನ್ನುವುದನ್ನು ಒಪ್ಪಿಕೊಂಡಿದ್ದಾಳೆ. ಕೊನೆಗೂ ಈ ಬಾಲಕಿಯ ಅಪಹರಣದ ರಹಸ್ಯ ಹೊರಬಂದಿದ್ದು, ನಗರದಲ್ಲಿ ಜನರು ನಿಟ್ಟುಸಿರು ಬಿಡುವಂತಾಗಿದೆ. 

Latest Videos
Follow Us:
Download App:
  • android
  • ios