Asianet Suvarna News Asianet Suvarna News

ಭೂ ಸುಧಾರಣಾ ಕಾಯ್ದೆ ವಿರುದ್ಧ ವಿವಿಧೆಡೆ ರೈತರ ಉಪವಾಸ

ಸತ್ಯಾ​ಗ್ರ​ಹಕ್ಕೆ ಹಲವು ಸಂಘ​ಟನೆಗಳ ಬೆಂಬ​ಲ| ಬೆಳಗಾವಿಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕೋಡಿಹಳ್ಳಿ ಚಂದ್ರಶೇಖರ ಬಣದ ನೇತೃತ್ವದಲ್ಲಿ ನಗರದ ಡಿಸಿ ಕಚೇರಿ ಎದುರು ಧರಣಿ| ಬಾಗಲಕೋಟೆಯಲ್ಲಿ, ವಿಜಯಪುರದಲ್ಲಿ ರೈತ ಸಂಘಟನೆಗಳಿಂದ ಸತ್ಯಾಗ್ರಹ| 

Fasting of the Farmers Against APMC Land Reform Actgrg
Author
Bengaluru, First Published Oct 3, 2020, 10:05 AM IST

ಬೆಂಗಳೂರು(ಅ.03): ಎಪಿಎಂಸಿ ಮತ್ತು ಭೂ ಸುಧಾರಣಾ ಕಾಯ್ದೆಯನ್ನು ವಿರೋಧಿಸಿ ರಾಜ್ಯಾದ್ಯಂತ ವಿವಿಧ ರೈತ ಸಂಘಟನೆಗಳು ಮತ್ತು ಕಾಂಗ್ರೆಸ್‌ ಕಾರ್ಯಕರ್ತರು ಪ್ರತಿಭಟನೆ ಮತ್ತು ಉಪವಾಸ ಸತ್ಯಾಗ್ರಹ ನಡೆಸಿವೆ.

ಕೇಂದ್ರ ಸರ್ಕಾರ ಸಾರ್ವಜನಿಕ ಕ್ಷೇತ್ರಗಳನ್ನು ಖಾಸಗೀಕರಣಗೊಳಿಸುವ ಮೂಲಕ ದೇಶದ ಸಂಪತ್ತನ್ನು ಅಗರ್ಭ ಶ್ರೀಮಂತರಿಗೆ ಮತ್ತು ಕಾರ್ಪೋರೇಟ್‌ ಕಂಪನಿಗಳಿಗೆ ಲೂಟಿ ಹೊಡೆಯಲು ಮುಕ್ತ ಅನುಕೂಲ ಕಲ್ಪಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಅಖಿಲ ಭಾರತ ರೈತ ಸಂಘರ್ಷ ಸಮನ್ವಯ ಸಮಿತಿ (ಎಐಕೆಎಸ್‌ಸಿಸಿ) ಸಂಘಟನೆ ಕೊಪ್ಪಳ ನಗರದ ಸಾಹಿತ್ಯ ಭನವನದ ಎದುರು ಧರಣಿ ಸತ್ಯಾಗ್ರಹವನ್ನು ನಡೆಸಿತು. ಶಿವಮೊಗ್ಗದಲ್ಲಿ ಅಖಿಲ ಭಾರತ ಕಿಸಾನ್‌ ಸಂಘರ್ಷ ಸಮಿತಿ, ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ, ಕರ್ನಾಟಕ ಜನಶಕ್ತಿ, ಕರ್ನಾಟಕ ದಲಿತ ಸಂಘರ್ಷ ಸಮಿತಿಯಿಂದ ಉಪವಾಸ ಸತ್ಯಾಗ್ರಹ ಮಾಡಿದ್ದಾರೆ. 

'ರೈತರಿಗೆ ಸ್ವಾತಂತ್ರ್ಯ ಕೊಡುವ ಕೆಲಸ ಮೋದಿ ಮಾಡಿದ್ದಾರೆ'

ರಾಯ​ಚೂ​ರಿನ ಸಿಂಧನೂರು ತಾಲೂ​ಕಿ​ನ​ಲ್ಲಿ ಯುವ ಕಾಂಗ್ರೆಸ್‌ ಹಾಗೂ ಕಿಸಾನ್‌ ಘಟಕದಿಂದ ಬೃಹತ್‌ ಪ್ರತಿಭಟನೆ ನಡೆಸಲಾಯಿತು. ಕಲಬುರಗಿ ಜಿಲ್ಲೆಯ ಜೇವರ್ಗಿ ಪಟ್ಟಣದ ಮಿನಿ ವಿಧಾನಸೌಧದ ಎದುರು ರೈತರು ಪ್ರತಿಭಟನೆ ನಡೆಸಿದ್ದಾರೆ. 

ಬೆಳಗಾವಿಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕೋಡಿಹಳ್ಳಿ ಚಂದ್ರಶೇಖರ ಬಣದ ನೇತೃತ್ವದಲ್ಲಿ ನಗರದ ಡಿಸಿ ಕಚೇರಿ ಎದುರು ಧರಣಿ ನಡೆಸಿದರು. ಬಾಗಲಕೋಟೆಯಲ್ಲಿ, ವಿಜಯಪುರದಲ್ಲಿ ರೈತ ಸಂಘಟನೆಗಳು ಸತ್ಯಾಗ್ರಹ ನಡೆಸಿವೆ.
 

Follow Us:
Download App:
  • android
  • ios