Asianet Suvarna News Asianet Suvarna News

'ರೈತರಿಗೆ ಸ್ವಾತಂತ್ರ್ಯ ಕೊಡುವ ಕೆಲಸ ಮೋದಿ ಮಾಡಿದ್ದಾರೆ'

ಕೃಷಿ ಮಸೂದೆ ರೈತ ವಿರೋಧಿ ಅಲ್ಲ/ ಕೇಂದ್ರ ಸಚಿವ ಸದಾನಂದ ಗೌಡ/ ರಸಗೊಬ್ಬರ ಕೊರತೆ ಆಗಿಲ್ಲ/ ರಾಜಕಾರಣದ ಉದ್ದೇಶಕ್ಕೆ ವಿರೋಧ ಮಾಡಲಾಗುತ್ತಿದೆ 

Farm Bill union minister sadananda gowda reaction mah
Author
Bengaluru, First Published Oct 2, 2020, 1:38 PM IST

ಬೆಂಗಳೂರು(ಅ. 02)  ರೈತರಿಗೆ ಸ್ವಾತಂತ್ರ್ಯ ಕೊಡುವ ಕೆಲಸವನ್ನು ಮೋದಿ ಸರ್ಕಾರ ಮಾಡಿದೆ. ಹೊಲ,ಶ್ರಮ ಎಲ್ಲ ರೈತರದ್ದು, ಆದರೆ ಮಾರಾಟ ಸಂಧರ್ಭದಲ್ಲಿ ಅವನಿಗೆ ಸ್ವಾತಂತ್ರ್ಯ ಇರಲಿಲ್ಲ ಎಂದು ಕೇಂದ್ರ ಸಚಿವ ಸದಾನಂದ ಗೌಡ ಹೇಳಿದ್ದಾರೆ.

ನಮ್ಮ ಸರ್ಕಾರ ಹಂತಹಂತವಾಗಿ ಇದರ ಬಗ್ಗೆ ಪರಿಶೀಲನೆ ಮಾಡಿ ಈ ಕಾಯಿದೆ ಜಾರಿಗೆ ತಂದಿದ್ದೇವೆ. ಮೂವತ್ತರಿಂದ ನಲವತ್ತರಷ್ಟು ಕೃಷಿ ದೇಶದಲ್ಲಿ ಆಗಿದೆ,ಆದರೆ ರಸಗೊಬ್ಬರ ಕೊರತೆ ಆಗಿಲ್ಲ. ಕೃಷಿ ಮಸೂದೆಗಳನ್ನು ವಿರೋಧ ಪಕ್ಷಗಳು ವಿನಾ ಕಾರಣ ವಿರೋಧಿಸುತ್ತಿವೆ  ಎಂದು ಸದಾನಂದ ಗೌಡ ಹೇಳಿದ್ದಾರೆ.

ರೈತರು ತಮ್ಮ ಉತ್ಪನ್ನ ಗಳನ್ನು ನೇರವಾಗಿ  ಕಂಪನಿಗಳಿಗೂ ಮಾರಾಟ ಮಾಡಬಹುದು. ಬೆಲೆ ಏರಿಳಿತಗಳ ನಡುವೆಯೂ ರೈತ ತಮ್ಮ ಒಪ್ಪಂದದ ಪ್ರಕಾರ ಮಾರಾಟ ಮಾಡಬಹುದು. ಕಾಂಗ್ರೆಸ್ ನಾಯಕರು ದಲ್ಲಾಳಿಗಳ ಪರವಾಗಿ ಹೋರಾಟ ಮಾಡಲು ಮುಂದಾಗಿದ್ದಾರೆ. ವಿರೋಧಿಗಳಿಗೆ ಅವರಿಗೆ ರೈತರ ಹಿತ ಬೇಕಿಲ್ಲ ಎಂದು ಟೀಕಿಸಿದ್ದಾರೆ.

ಕೇಂದ್ರ ಸರ್ಕಾರ ಪಾಸ್ ಮಾಡಿರುವ ಕೃಷಿ ಮಸೂದೆ ತಿದ್ದುಪಡಿ ಮತ್ತು ಎಪಿಎಂಸಿ ಕಾಯಿದೆಗೆ ದೇಶಾದ್ಯಂತ ವಿರೋಧದ ಅಲೆ ಬಂದಿದೆ. ಕರ್ನಾಟಕ ಬಂದ್ ಸಹ ನಡೆಸಲಾಗಿದೆ. ಕಾಯಿದೆ ಹಿಂಪಡೆಯದೆ ಇದ್ದರೆ ಮುಂದೆ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿವೆ.

 

Follow Us:
Download App:
  • android
  • ios