Asianet Suvarna News Asianet Suvarna News

Farmers Suicide Cases: ಕರ್ನಾಟಕದಲ್ಲಿ ರೈತರ ಆತ್ಮಹತ್ಯೆ ಇಳಿಕೆ: ಸಚಿವ ಪಾಟೀಲ್‌

*  ರಾಜ್ಯದಲ್ಲಿ ಮೊದಲ ಬಾರಿಗೆ ಎರಡನೇ ಹಂತದ ಕೃಷಿ ಚಟುವಟಿಕೆ ಆರಂಭ
*   ಕೋವಿಡ್‌ ಬಳಿಕ ಕೃಷಿ ಕ್ಷೇತ್ರದ ಬೆಲೆ ಹೆಚ್ಚಾಗಿದೆ
*  ವಿದ್ಯಾವಂತರೂ ಕೃಷಿ ಬಗ್ಗೆ ಗಮನ ಕೊಡುತ್ತಿದ್ದಾರೆ 
 

Farmers Suicide Cases Decline in Karnataka Says Minister BC Patil grg
Author
Bengaluru, First Published Mar 30, 2022, 6:09 AM IST

ಬೆಂಗಳೂರು(ಮಾ.30):  ರಾಜ್ಯದಲ್ಲಿ ಕಳೆದ ಏಳು ವರ್ಷಗಳಿಂದ ರೈತರ ಆತ್ಮಹತ್ಯೆ(Farmers Suicide) ಪ್ರಕರಣಗಳು ಗಣನೀಯವಾಗಿ ಕಡಿಮೆಯಾಗಿವೆ. ಇದು ಕೃಷಿ ಕ್ಷೇತ್ರದ ಪ್ರಗತಿಯ ಸೂಚಕ. ನಮ್ಮ ಸರ್ಕಾರ ರೈತರು, ಕೃಷಿ ಕ್ಷೇತ್ರದ ಅಭಿವೃದ್ಧಿಗಾಗಿ ರಾಜ್ಯದಲ್ಲಿ ಮೊದಲ ಬಾರಿಗೆ ಎರಡನೇ ಹಂತದ ಕೃಷಿ ಚಟುವಟಿಕೆ ಆರಂಭಿಸುತ್ತಿದೆ. ಎಲ್ಲ ಕೃಷಿ ವಿವಿಗಳ ವ್ಯಾಪ್ತಿಯ 1000 ಎಕರೆ ಪ್ರದೇಶದಲ್ಲಿ ನೈಸರ್ಗಿಕ ಕೃಷಿ ಪದ್ಧತಿ ಅಳವಡಿಕೆ ಸೇರಿದಂತೆ ಅನೇಕ ಹೊಸ ಕಾರ್ಯಕ್ರಮಗಳನ್ನು ಘೋಷಿಸಿದೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್‌(BC Patil) ತಿಳಿಸಿದರು.

ಇಲಾಖಾ ವಾರು ಬೇಡಿಕೆಗಳ ಮೇಲಿನ ಚರ್ಚೆಗೆ ಮಂಗಳವಾರ ಸದನದಲ್ಲಿ ಉತ್ತರ ನೀಡಿದ ಅವರು, ಕಳೆದ ಏಳು ವರ್ಷಗಳಿಂದ ರಾಜ್ಯದಲ್ಲಿ ರೈತರ ಆತ್ಮಹತ್ಯೆ ಪ್ರಕರಣಗಳು ಕಡಿಮೆಯಾಗಿವೆ. 2015-16ರಿಂದ ಮೂರು ವರ್ಷಗಳಲ್ಲಿ ರೈತರ ಆತ್ಮಹತ್ಯೆ ಪ್ರಕರಣಗಳು ಒಂದು ಸಾವಿರದ ಆಸು ಪಾಸಿನಲ್ಲಿದ್ದವು. 2018-19ರಿಂದ ಮೂರು ವರ್ಷಗಳಲ್ಲಿ ಇದು 800ರ ಆಸುಪಾಸಿಗೆ ಇಳಿಯಿತು. 2021-22ರಲ್ಲಿ ಈ ಸಂಖ್ಯೆ 268 ಆಗಿದೆ. ಕೋವಿಡ್‌ ಬಳಿಕ ಕೃಷಿ ಕ್ಷೇತ್ರದ ಬೆಲೆ ಹೆಚ್ಚಾಗಿದೆ. ವಿದ್ಯಾವಂತರೂ ಕೃಷಿ(Agriculture) ಬಗ್ಗೆ ಗಮನ ಕೊಡುತ್ತಿದ್ದಾರೆ. ಸೂಟು ಬೂಟು ಹಾಕಿದವರೂ ಕೃಷಿ ಬಗ್ಗೆ ಮಾತನಾಡುತ್ತಿದ್ದಾರೆ. ಕೃಷಿ ಪ್ರಗತಿಯತ್ತ ಸಾಗುತ್ತಿರುವುದಕ್ಕೆ ಸಂಕೇತ ಎಂದು ಹೇಳಿದರು.

ರೈತ ಮಹಿಳೆ ಮಾತಿಗೆ ಓಕೆ ಎಂದು ಮಾತಿನಂತೆ ನಡೆದುಕೊಂಡ ಕೌರವ..!

ಮಕ್ಕಳಿಗೆ ಸಿರಿಧಾನ್ಯ ಊಟ

ಕರ್ನಾಟಕ ಹಾಲು ಮಹಾಮಂಡಲ (KMF) ಸಹಯೋಗದಲ್ಲಿ ತಿಂಗಳಲ್ಲಿ ಒಂದು ದಿನ ರಾಜ್ಯದ ಶಾಲಾ ಮಕ್ಕಳಿಗೆ ಸಿರಿಧಾನ್ಯದ ಬಿಸಿಯೂಟ ನೀಡಲು ಉದ್ದೇಶಿಸಲಾಗಿದೆ. ಇದಕ್ಕಾಗಿ ಬಜೆಟ್‌ನಲ್ಲಿ(Budget) 10 ಕೋಟಿ ರು. ಮೀಸಲಿಡಿಸಲಾಗಿದೆ ಎಂದು ಇದೇ ವೇಳೆ ಬಿ.ಸಿ.ಪಾಟೀಲ್‌ ಹೇಳಿದರು.

ನಮ್ಮ ಸರ್ಕಾರ(Government of Karnataka) ಸಿರಿಧಾನ್ಯ ಕೃಷಿ ಪ್ರೋತ್ಸಾಹಕ್ಕೆ ಬದ್ಧವಾಗಿದೆ. ಇದಕ್ಕಾಗಿ ಒಂದು ಹೆಕ್ಟೇರ್‌ಗೆ ಕನಿಷ್ಠ 10 ಸಾವಿರ ರು.ನಿಂದ 20 ಸಾವಿರ ರು.ವರೆಗೆ ಪ್ರೋತ್ಸಾಹಧನ ನೀಡಲಾಗುವುದು. ರಾಜ್ಯದ ನಾಲ್ಕು ಭಾಗದಲ್ಲಿ ಸಿರಿಧಾನ್ಯ ಮೇಳ ಆಯೋಜಿಸಿ ರೈತರಿಗೆ ಸಿರಿಧಾನ್ಯ ಕೃಷಿ ಬಗ್ಗೆ ಜಾಗೃತಿ ಹಾಗೂ ಉತ್ತೇಜನ ನೀಡಲಾಗುವುದು ಎಂದರು.

ರಾಜ್ಯದ(Karnataka) ಎಲ್ಲ ಕೃಷಿ ವಿವಿಗಳ ವ್ಯಾಪ್ತಿಯ 1000 ಎಕರೆ ಪ್ರದೇಶದಲ್ಲಿ ನೈಸರ್ಗಿಕ ಕೃಷಿ ಪದ್ಧತಿ ಕೈಗೊಂಡು ನಂತರ ರೈತರಿಗೂ ಅದನ್ನು ವಿಸ್ತರಿಸಲಾಗುವುದು. ರಾಜ್ಯದಲ್ಲಿ ಮೊದಲ ಬಾರಿಗೆ ಎರಡನೇ ಹಂತದ ಕೃಷಿ ಆರಂಭಿಸಲಾಗುತ್ತಿದೆ ಎಂದು ಇದೇ ವೇಳೆ ಸಚಿವರು ತಿಳಿಸಿದರು.

ರೈತರ ಮಕ್ಕಳ ಸ್ಕಾಲರ್‌ಶಿಪ್‌ಗೆ ಪಹಣಿ ಬೇಕಿಲ್ಲ: ಸಚಿವ ಬಿ.ಸಿ.ಪಾಟೀಲ್‌

ಕೃಷಿ ಉತ್ಪನ್ನಗಳ ಮೌಲ್ಯವರ್ಧನೆ, ಬ್ರಾಂಡಿಂಗ್‌, ಪ್ಯಾಕೇಟಿಂಗ್‌, ಮಾರುಕಟ್ಟೆ, ರಪ್ತು, ಕೃಷಿ ತ್ಯಾಜ್ಯಗಳ ಮರು ಬಳಕೆಗೆ ಉತ್ತೇಜನ ನೀಡಲು ಎರಡನೇ ಹಂತದ ಕೃಷಿಗೆ ಉತ್ತೇಜನ ನೀಡಲಾಗುತ್ತಿದೆ. ಇದಕ್ಕಾಗಿ ಆಹಾರ ಸಂಸ್ಕರಣಾ ಘಟಕಗಳನ್ನು ಹೊಂದಾಣಿಕೆ ಮಾಡಲು ಬಜೆಟ್‌ನಲ್ಲಿ 50 ಕೋಟಿ ರು. ಮೀಸಲಿಡಲಾಗಿದೆ. ರಾಜ್ಯದ 11 ಕಡೆ ಕೃಷಿ ಉತ್ಪನ್ನಗಳ ಶೇಖರಣೆಗೆ ಶೀಥಲ ಸಂಸ್ಕರಣಾ ಘಟಕ ಸ್ಥಾಪಿಸಲಾಗುತ್ತಿದೆ ಎಂದು ಸಚಿವರು ತಿಳಿಸಿದರು.

ರೈತರ ಖಾತೆಗೆ 2 ಸಾವಿರ ರು.:

ಕೇಂದ್ರ ಸರ್ಕಾರ ಕಿಸಾನ್‌ ಸನ್ಮಾನ್‌ ಯೋಜನೆಯಡಿ ರೈತರಿಗೆ ವಾರ್ಷಿಕ 6 ಸಾವಿರ ರು. ನೀಡುತ್ತಿರುವ ಜತೆಗೆ ರಾಜ್ಯ ಸರ್ಕಾರವೂ ರಾಜ್ಯದ 50 ಲಕ್ಷಕ್ಕೂ ಹೆಚ್ಚು ರೈತರಿಗೆ ಪ್ರತಿ ವರ್ಷ ತಲಾ 4 ಸಾವಿರ ರು. ಸಹಾಯ ಧನವನ್ನು ಯಡಿಯೂರಪ್ಪ ಅವರ ಆಡಳಿತದಿಂದ ಜಾರಿಗೆ ತರಲಾಗಿದೆ. ಈ ಯೋಜನೆಗೆ ಅರ್ಹರಾದ ರಾಜ್ಯದ ರೈತರಿಗೆ ರಾಜ್ಯ ಸರ್ಕಾರದಿಂದ ನೀಡುವ ತಲಾ 4000 ರು. ಪ್ರೋತ್ಸಾಹ ಧನದ ಪೈಕಿ ಏಪ್ರಿಲ್‌ ತಿಂಗಳಲ್ಲಿ ಮೊದಲ ಹಂತದ 2000 ರು. ಬಿಡುಗಡೆ ಮಾಡಲಾಗುವುದು. ಇದಕ್ಕಾಗಿ 1019 ಕೋಟಿ ರು.ಗಳನ್ನು ಕೃಷಿ ಆಯುಕ್ತರ ಖಾತೆಗೆ ಜಮೆಯಾಗಿದೆ. ನಂತರದ ದಿನಗಳಲ್ಲಿ 2ನೇ ಕಂತಿನ ಹಣ ಬಿಡುಗಡೆಯಾಗಲಿದೆ ಎಂದು ಇದೇ ವೇಳೆ ಸಚಿವರು ತಿಳಿಸಿದರು.

ಕೃಷಿ ಕ್ಷೇತ್ರದ ಪ್ರಗತಿ ಸೂಚಕ:

ವರ್ಷ ರೈತರ ಸಾವಿನ ಪ್ರಮಾಣ

2015-16 1000
2018-19 800
 

Latest Videos
Follow Us:
Download App:
  • android
  • ios