'ಹೊಸ ಬಾಟಲಿಯಲ್ಲಿ ಹಳೇ ವೈನ್ ನೋ ರಿಯಾಕ್ಷನ್'; ಬಿವೈ ವಿಜಯೇಂದ್ರ ನೇಮಕ ಬಗ್ಗೆ ಸಚಿವ ಸುಧಾಕರ್ ವ್ಯಂಗ್ಯ
ರಾಜ್ಯ ಬಿಜೆಪಿ ನೂತನ ರಾಜ್ಯಾಧ್ಯಕ್ಷರಾಗಿ ಬಿವೈ ವಿಜಯೇಂದ್ರ ಆಯ್ಕೆಯಾಗಿರುವುದು ಕಾರ್ಯಕರ್ತರಲ್ಲಿ ಹೊಸ ಹುರುಪು ತಂದಿದೆ. ರಾಜ್ಯಾದ್ಯಂತ ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಿಸುತ್ತಿದ್ದಾರೆ. ಇತ್ತ ಆಡಳಿತ ಪಕ್ಷ ಕಾಂಗ್ರೆಸ್ ಶಾಸಕ ಸಚಿವರು ಪೈಪೋಟಿಗೆ ಬಿದ್ದವರಂತೆ ವಿಜಯೇಂದ್ರ ಆಯ್ಕೆ ವಿರುದ್ಧ ವ್ಯಂಗ್ಯ, ಟೀಕೆ ಮಾಡಲಾರಂಭಿಸಿದ್ದಾರೆ.
ಚಿತ್ರದುರ್ಗ (ನ.11): ರಾಜ್ಯ ಬಿಜೆಪಿ ನೂತನ ರಾಜ್ಯಾಧ್ಯಕ್ಷರಾಗಿ ಬಿವೈ ವಿಜಯೇಂದ್ರ ಆಯ್ಕೆಯಾಗಿರುವುದು ಕಾರ್ಯಕರ್ತರಲ್ಲಿ ಹೊಸ ಹುರುಪು ತಂದಿದೆ. ರಾಜ್ಯಾದ್ಯಂತ ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಿಸುತ್ತಿದ್ದಾರೆ. ಇತ್ತ ಆಡಳಿತ ಪಕ್ಷ ಕಾಂಗ್ರೆಸ್ ಶಾಸಕ ಸಚಿವರು ಪೈಪೋಟಿಗೆ ಬಿದ್ದವರಂತೆ ವಿಜಯೇಂದ್ರ ಆಯ್ಕೆ ವಿರುದ್ಧ ವ್ಯಂಗ್ಯ, ಟೀಕೆ ಮಾಡಲಾರಂಭಿಸಿದ್ದಾರೆ.
ಬಿಜೆಪಿ ನೂತನ ರಾಜ್ಯಾಧ್ಯಕ್ಷರಾಗಿ ಬಿವೈ ವಿಜಯೇಂದ್ರ ಆಯ್ಕೆಯಾಗಿರುವ ಸಂಬಂಧ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದ ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವ ಡಿ ಸುಧಾಕರ್, ಈ ಆಯ್ಕೆ ಹೊಸ ಬಾಟಲಿಯಲ್ಲಿ ಹಳೆ ವೈನ್ ಸುರಿದಂತೆ ಎಂದು ವ್ಯಂಗ್ಯ ಮಾಡಿದರು.
ವಿರೋಧ ಪಕ್ಷದ ಸ್ಥಾನಕ್ಕೆ ನಾನೂ ಆಕಾಂಕ್ಷಿ, ನಮ್ಮ ನಾಯಕರು ಸೂಕ್ತ ವ್ಯಕ್ತಿಗೆ ಕೊಡುತ್ತಾರೆ: ಶಾಸಕ ಅಶ್ವತ್ಥ ನಾರಾಯಣ
ಅವರ ಪಕ್ಷದಲ್ಲಿ ಅಸಮಾಧಾನ ಇದೆ. ಅದು ಅವರ ಆಂತರಿಕ ವಿಚಾರ, ಅದರಲ್ಲಿ ನಾವು ಮೂಗು ತೂರಿಸಲ್ಲ. ಅವರ ಸಿದ್ಧಾಂತ ಬೇರೆ, ನಮ್ಮ ಸಿದ್ಧಾಂತ ಬೇರೆ. ಅವರು ಸಮಾಜ ಒಡೆಯುವ ನೀತಿ ಹೊಂದಿದ್ದಾರೆ. ಬಿಜೆಪಿ ಪಕ್ಷ ವಿಜಯೇಂದ್ರ ನೇತೃತ್ವದಲ್ಲಿ ನಮ್ಮ ರಾಜ್ಯದಲ್ಲಿ ಅಧಿಕಾರ ಪಡೆಯಲ್ಲ ಎಂದು ಭವಿಷ್ಯ ನುಡಿದರು. ಇದೇ ವೇಳೆ ಬಿವೈ ವಿಜಯೇಂದ್ರ ಡಿಕೆ ಶಿವಕುಮಾರ ನಾಯಕತ್ವ ಹೋಲಿಕೆ ಮಾಡಿದ್ದಕ್ಕೆ ಅವರನ್ನು ಡಿಕೆ ಶಿವಕುಮಾರ್ ನಾಯಕತ್ವಕ್ಕೆ ವಿಜಯೇಂದ್ರ ಅವರನ್ನ ಹೋಲಿಕೆ ಮಾಡಬೇಡಿ. ಅವರ ಅನುಭವ, ತಾಳ್ಮೆ, ಪಕ್ಷ ಸಂಘಟನೆ ಅವರಿಗೆ ಹೋಲಿಕೆ ಮಾಡುವುದು ಸರಿಯಲ್ಲ. ಎಲ್ಲಾ ಜಾತಿಯವರು ನಮ್ಮ ಪಕ್ಷದ ಜೊತೆಗೆ ಇದ್ದಾರೆ. ಆದರೆ ಬಿಜೆಪಿ ಪಕ್ಷ ಹಾಗಲ್ಲ. ಜನರ ಮಧ್ಯೆ ಒಡಕು ಮೂಡಿಸುವ ಪಕ್ಷವಾಗಿದೆ ಎಂದು ವಾಗ್ದಾಳಿ ನಡೆಸಿದರು.
48 ದಿನಗಳ ಬಳಿಕ ಇಂದು ಶ್ರೀರಾಮ ಸೇನೆ ಕಾರ್ಯಕರ್ತರ ಬಿಡುಗಡೆ; ಪರಪ್ಪನ ಆಗ್ರಹಾರಕ್ಕೆ ಆಗಮಿಸಿದ ಪ್ರಮೋದ್ ಮುತಾಲಿಕ್
ಇನ್ನು ಎಸ್‌ಟಿ ಸೋಮಶೇಖರ್ ಬಿಜೆಪಿ ವಿರುದ್ದ ಅಸಮಾಧಾನಗೊಂಡಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಸೋಮಶೇಖರ್ ನನ್ನ ಆಪ್ತ, ಅವರ ಮೈಯಲ್ಲಿ ಕಾಂಗ್ರೆಸ್ ರಕ್ತ ಹರಿಯುತ್ತಿದೆ. ಹಲವು ಕಾರಣಗಳಿಂದ ಆಪರೇಷನ್ ಕಮಲಕ್ಕೆ ಹೋಗಿದ್ದರು, ವಾಪಸ್ ಬರುತ್ತಾರೆ. ಸರ್ಕಾರ ಅಧಿಕಾರಕ್ಕೆ ಬಂದು ಐದು ತಿಂಗಳು ಮುಗಿಸಿದರೂ ಬಿಜೆಪಿಯಲ್ಲಿ ಇಲ್ಲಿವರೆಗೂ ವಿರೋದ ಪಕ್ಷದ ನಾಯಕನ ಆಯ್ಕೆ ಮಾಡಲಾಗಿಲ್ಲವಲ್ಲ? ಎನ್ನುವ ಮೂಲಕ ಬಿಜೆಪಿಯವರ ಸದ್ಯದ ಪರಿಸ್ಥಿತಿ ಬಗ್ಗೆ ಗೇಲಿ ಮಾಡಿದರು.