ಡಿ.ಕೆ.ಶಿವಕುಮಾರ್ ಅವರು ಉಪಾಹಾರ ಕೂಟ ನಡೆಸಿದ ಬೆನ್ನಲ್ಲೇ ಮಾಜಿ ಸಿಎಂ ಸಿದ್ದರಾಮಯ್ಯ ಆತಂಕಕ್ಕೆ ಒಳಗಾಗಿದ್ದಾರೆ. ತಮಗೆ ಟಾಂಗ್ ನೀಡುವುದಕ್ಕೆಂದೇ ಡಿಕೆಶಿ ಈ ಔತಣ ನೀಡಿರುವುದು ಸಿದ್ದುಗೆ ಗೊತ್ತಾಗಿದೆ. 

ಬೆಂಗಳೂರು :  ಡಿ.ಕೆ.ಶಿವಕುಮಾರ್ ಅವರು ಉಪಾಹಾರ ಕೂಟ ನಡೆಸಿದ ಬೆನ್ನಲ್ಲೇ ಮಾಜಿ ಸಿಎಂ ಸಿದ್ದರಾಮಯ್ಯ ಆತಂಕಕ್ಕೆ ಒಳಗಾಗಿದ್ದಾರೆ. ತಮಗೆ ಟಾಂಗ್ ನೀಡುವುದಕ್ಕೆಂದೇ ಡಿಕೆಶಿ ಈ ಔತಣ ನೀಡಿರುವುದು ಸಿದ್ದುಗೆ ಗೊತ್ತಾಗಿದೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಉಪಾಹಾರಕ್ಕೆ ಬೆಳ್ಳಿ ತಟ್ಟೆಗಳನ್ನು ಬಳಸಿರುವುದು ದೊಡ್ಡ ಸುದ್ದಿಯಾಗಿದೆ. ಹೀಗಾಗಿ, ಡಿಕೆಶಿಗಿಂತ ತಮಗೆ ಪಕ್ಷದ ಸಚಿವರ ಮೇಲೆ ಹಿಡಿತವಿದೆ ಎಂದು ತೋರಿಸಿಕೊಳ್ಳಲು ನಾಳೆ ಸಿದ್ದರಾಮಯ್ಯ ಅವರು ಚಿನ್ನದ ತಟ್ಟೆಯಲ್ಲಿ ಮಂತ್ರಿಗಳಿಗೆ ಊಟ ಹಾಕಿಸಲಿದ್ದಾರೆ. 

ಅಚ್ಚರಿಯೆಂದರೆ, ಡಿಕೆಶಿ ಅವರು ಕಾಂಗ್ರೆಸ್ ಸಚಿವರನ್ನು ಮಾತ್ರ ಕರೆಸಿದ್ದರೆ ಸಿದ್ದರಾಮಯ್ಯ ಅವರು ಜೆಡಿಎಸ್ ಸಚಿವರನ್ನೂ ಔತಣಕ್ಕೆ ಕರೆದು ಸ್ವತಃ ಮುಖ್ಯಮಂತ್ರಿಗೂ ಟಾಂಗ್ ನೀಡಲಿದ್ದಾರೆಂದು ಸುಳ್‌ಸುದ್ದಿ ಮೂಲಗಳು ಹೇಳಿವೆ.