ಮಂಗಳಮುಖಿ ವೇಷ ಧರಿಸಿ ಭಿಕ್ಷೆ ಬೇಡುತ್ತಿದ್ದ ಪುರುಷ ; ಮಂಗಳಮುಖಿಯರಿಂದಲೇ ಗೂಸಾ!
ಪಟ್ಟಣದಲ್ಲಿ ಮಂಗಳಮುಖಿ ವೇಷಧರಿಸಿ ಭಿಕ್ಷೆ ಬೇಡುತ್ತಿದ್ದ ಪುರುಷನ್ನು ಮಂಗಳಮುಖಿಯರು ಸೋಮವಾರ ಬಸ್ ನಿಲ್ದಾಣದಲ್ಲಿ ಹಿಡಿದು ವಿವಸ್ತ್ರಗೊಳಿಸಿದ ಘಟನೆ ನಡೆದಿದೆ.
ಯಲ್ಲಾಪುರ (ಆ.15): ಪಟ್ಟಣದಲ್ಲಿ ಮಂಗಳಮುಖಿ ವೇಷಧರಿಸಿ ಭಿಕ್ಷೆ ಬೇಡುತ್ತಿದ್ದ ಪುರುಷನ್ನು ಮಂಗಳಮುಖಿಯರು ಸೋಮವಾರ ಬಸ್ ನಿಲ್ದಾಣದಲ್ಲಿ ಹಿಡಿದು ವಿವಸ್ತ್ರಗೊಳಿಸಿದ ಘಟನೆ ನಡೆದಿದೆ.
ಇತ್ತೀಚೆಗೆ ರೈಲು ಮತ್ತು ಬಸ್ ನಿಲ್ದಾಣ ಸೇರಿದಂತೆ ವಿವಿಧ ಸಾರ್ವಜನಿಕ ಜನಸಂದಣಿಯ ಪ್ರದೇಶದಲ್ಲಿ ತೃತೀಯ ಲಿಂಗಿಗಳಿಂದ ಜನರಿಗೆ ಬಹು ತೊಂದರೆಯಾಗುತ್ತಿದೆ ಎಂಬ ದೂರುಗಳು ಕೇಳಿಬರುತ್ತಿದ್ದವು. ಈ ಕುರಿತಂತೆ ಅನೇಕ ವಿಡಿಯೋಗಳು ಕೂಡಾ ಹರಿದಾಡಿ ತೃತೀಯ ಲಿಂಗಿಗಳ ಕುರಿತು ಜನರಲ್ಲಿ ಕೆಟ್ಟಭಾವನೆ ಮೂಡುವಂತಾಗಿತ್ತು. ಪಟ್ಟಣದಲ್ಲಿ ಸೀರೆ ಧರಿಸಿ ತೃತೀಯ ಲಿಂಗಿಯಂತೆ ವರ್ತಿಸುತ್ತಿದ್ದ ಪುರುಷ ಕೊರೋನಾ ಎರಡನೇ ಅಲೆ ಬಳಿಕ ಪಟ್ಟಣದಲ್ಲಿ ಕಾಣಿಸಿಕೊಳ್ಳುತ್ತಿದ್ದ. ಹಣ ಬೇಡುವುದು, ಜನರಿಗೆ ತೊಂದರೆ ನೀಡುವುದು, ಹಣ ನೀಡದಿದ್ದರೆ ಕೈಯಲ್ಲಿದ್ದ ವಸ್ತುಗಳನ್ನೇ ನೆಲಕ್ಕೆ ಬಿಸಾಡುವ ಕೆಲಸ ಮಾಡುತ್ತಿದ್ದ ಎಂಬ ಆರೋಪಗಳಿದ್ದವು. ಈತ ಬಸ್ ನಿಲ್ದಾಣದಲ್ಲಿ ಚಾಲಕರು ಮತ್ತು ನಿರ್ವಾಹಕರಿಗೆ ಹೆಚ್ಚಿನ ಉಪಟಳ ನೀಡುತ್ತಿದ್ದ ಎನ್ನಲಾಗಿದೆ.
ಗೃಹ ಪ್ರವೇಶದ ಮನೆಗೆ ನುಗ್ಗಿ ಬಟ್ಟೆ ಎತ್ತಿ ತೋರಿಸಿದ ಮಂಗಳಮುಖಿಯರು
ಈತನ ವರ್ತನೆಗೆ ಬೇಸತ್ತ ಜನರು ಈತ ತೃತೀಯ ಲಿಂಗಿಯೆಂದೇ ಭಾವಿಸಿ ಹೆದರಿಸಿ ಕಳಿಸುತ್ತಿದ್ದರು. ಈತನ ವರ್ತನೆ ಮಿತಿಮೀರಿದಾಗ ಕೆಲವೊಮ್ಮೆ ಧರ್ಮದೇಟು ಕೂಡಾ ನೀಡಿದ್ದಾರೆ. ವಾರದ ಹಿಂದೆ ಹುಬ್ಬಳ್ಳಿಯಿಂದ ಆಗಮಿಸಿದ್ದ ತೃತೀಯ ಲಿಂಗಿಗಳ ತಂಡವೊಂದು ಸಾರ್ವಜನಿಕ ಸ್ಥಳದಲ್ಲಿಯೇ ಸೀರೆ ಬಿಚ್ಚಿಸಿ, ಒಂದಿಷ್ಟುಏಟು ಕೊಟ್ಟು ಕಳಿಸಿದ್ದರು. ಸೋಮವಾರ ಮಧ್ಯಾಹ್ನ 1 ಗಂಟೆ ಹೊತ್ತಿಗೆ ಹುಬ್ಬಳ್ಳಿಯಿಂದ ಆಗಮಿಸಿದ ಇಬ್ಬರು ತೃತೀಯ ಲಿಂಗಿಗಳು ಈತನನ್ನು ಮನಸೋಇಚ್ಛೆ ಥಳಿಸಿದ್ದಲ್ಲದೇ ಆತ ತೊಟ್ಟಿದ್ದ ಸೀರೆಯನ್ನು ಬಿಚ್ಚಿಸಿ ವಿವಸ್ತ್ರಗೊಳಿಸಿದ್ದಾರೆ.
Bengaluru News: ಗೃಹಪ್ರವೇಶ ಸಂಭ್ರಮಕ್ಕೆ ಕೊಳ್ಳಿ ಇಟ್ಟ ಮಂಗಳಮುಖಿಯರು: ಮನೆಗೆ ನುಗ್ಗಿ ದಾಂಧಲೆ