Asianet Suvarna News Asianet Suvarna News

Bengaluru: ಗೃಹ ಪ್ರವೇಶದ ಮನೆಗೆ ನುಗ್ಗಿ ಬಟ್ಟೆ ಎತ್ತಿ ತೋರಿಸಿದ ಮಂಗಳಮುಖಿಯರು

ಸಾಲ ಸೋಲ ಮಾಡಿ ನಿರ್ಮಿಸಿದ ಮನೆಯ ಗೃಹ ಪ್ರವೇಶದ ವೇಳೆ ಬಂದ ಮಂಗಳಮುಖಿಯರು ಕಡಿಮೆ ಹಣ ಕೊಟ್ಟಿದ್ದಕ್ಕೆ, ಮಾಲೀಕರುಗೆ ಬಾಯಿಗೆ ಬಂದಂತೆ ಬೈದು, ಬಟ್ಟೆ ಎತ್ತಿ ತೋರಿಸಿದ್ದಾರೆ.

Bengaluru transgender showing half naked body into the Gruha pravesha house sat
Author
First Published Jun 28, 2023, 5:30 PM IST

ಬೆಂಗಳೂರು (ಜೂ.28): ಬೆಂಗಳೂರಿನಲ್ಲಿ ಇನ್ನೂ ನಿಂತಿಲ್ಲ ಮಂಗಳಮುಖಿಯರ ಆಟಾಟೋಪ. ಸಾಲ ಸೋಲ ಮಾಡಿ ಕನಸಿನ ಮನೆಯನ್ನು ನಿರ್ಮಿಸಿ ಗೃಹ ಪ್ರವೇಶ ಮಾಡುವಾಗ ಮನೆಗೆ ಬಂದ ಮಂಗಳಮುಖಿಯರು ಕಡಿಮೆ ಹಣವನ್ನು ಕೊಟ್ಟಿದ್ದಕ್ಕೆ ಬಾಯಿಗೆ ಬಂದಂತೆ ಬೈದು, ಬಟ್ಟೆ ಎತ್ತಿಕೊಂಡು ನಿಂತುಕೊಂಡಿದ್ದಾರೆ.

ಬೆಂಗಳೂರಿನ ವೈಯಾಲಿಕಾವಲ್‌ ವ್ಯಾಪ್ತಿಯಲ್ಲಿ ಕನಸಿನ ಮನೆ ನಿರ್ಮಾಣ ಮಾಡಿದ್ದ ಕುಟುಂಬವೊಂದು, ಶಾಸ್ರ್ತೋತ್ರವಾಗಿ ಗೃಹ ಪ್ರವೇಶ ನಿಶ್ಚಯ ಮಾಡಿದ್ದರು. ಅದರಂತೆ ಇಂದು ಮನೆ ಗೃಹ ಪ್ರವೇಶದ ವೇಳೆ ಮುಂಗಳಮುಖಿಯರು ಏಕಾಏಕಿ ಮನೆಯೊಳಗೆ ನುಗ್ಗಿದ್ದಾರೆ. ಈ ವೇಳೆ ಮಂಗಳಮುಖಿಯರನ್ನ ನೋಡಿ ಕುಟುಂಬ ಸದಸ್ಯರು ಊಟಕ್ಕೆ ಕರೆದಿದ್ದಾರೆ. ನಮಗೆ ಊಟ ಬೇಡ ಹಣ ಕೊಡಿ ಎಂದು ಮೂವರು ಮಂಗಳಮುಖಿಯರು ಪಟ್ಟು ಹಿಡಿದಿದ್ದಾರೆ. ಈ ವೇಳೆ ಎಲ್ಲರ ನಡುವೆ 500 ರೂ. ಹಣವನ್ನು ಕುಟುಂಬ ನೀಡಿದೆ. ಈ ವೇಳೆ ಮನೆ ಮಾಲೀಕನಿಗೆ ಹಣವನ್ನು ಆರತಿ ಮಾಡಿ ಜೇಬಿನಲ್ಲಿಟ್ಟು ಬಾಯಿಗೆ ಬಂದಂತೆ ಬೈದಿದ್ದಾರೆ. ನಮಗೆ ತಲಾ 5 ಸಾವಿರ ರೂ.ನಂತೆ 15 ಸಾವಿರ ರೂ. ಕೊಡುವಂತೆ ಹೇಳಿದ್ದಾರೆ. ಕೊಡಲು ಆಗುವುದಿಲ್ಲ ಎಂದಿದ್ದಕ್ಕೆ ಬಟ್ಟೆ ಎತ್ತಿ ತೋರಿಸಲು ಮುಂದಾಗಿದ್ದಾರೆ. ಈ ವೇಳೆ ಅರ್ಧ ಬಟ್ಟೆಯನ್ನೂ ಬಿಚ್ಚಿದ್ದರು ಎಂದು ಮನೆಯ ಮಾಲೀಕರು ಅಳಲು ತೋಡಿಕೊಂಡಿದ್ದಾರೆ.

ಮಹಿಳೆಯರಿಗೆ ಮತ್ತೊಂದು ಗುಡ್‌ ನ್ಯೂಸ್: ಮುಂದಿನ ವರ್ಷ ಸ್ತ್ರೀ ಶಕ್ತಿ ಸಂಘದ ಸಾಲ ಮನ್ನಾ

ಒಬ್ಬೊಬ್ಬರಿಗೆ 5 ಸಾವಿರ ರೂ.ಗೆ ಬೇಡಿಕೆ: ಶುಭ ಕಾರ್ಯದ ವೇಲೆ ಮಂಗಳಮುಖಿಯರೊಂದಿಗೆ ಗಲಾಟೆ ಮಾಡಿಕೊಂಡರೆ ಒಳ್ಳೆಯದಲ್ಲ ಎಂಬ ಉದ್ದೇಶದಿಂದ ಕುಟುಂಬದ ಇತರೆ ಸದಸ್ಯರು ಮನೆ ಮಾಲೀಕನನ್ನು ಒಳಗೆ ಕಳುಹಿಸಿ ಮೂವರ ನಡುವೆ 5,000 ರೂ. ಕೊಟ್ಟಿದ್ದಾರೆ. ಆದರೆ, ಇದಕ್ಕೂ ಒಪ್ಪಿಕೊಳ್ಳದ ಅವರು ಒಬ್ಬೊಬ್ಬರಿಗೆ ತಲಾ ಐದೈದು ಸಾವಿರ ನೀಡುವಂತೆ ಕಿರಿಕ್ ಮಾಡಿದ್ದಾರೆ. ಹಣ ಪಡೆಯದೆ ಮಂಗಳಮುಖಿಯರಿಂದ ದಾಂಧಲೆ ಮಾಡಿದ್ದಾರೆ. ಬಾಯಿಗೆ ಬಂದಂತೆ ಬೈದು, ಕುಟುಂಬಸ್ತರ ಮುಂದೆ ಬಟ್ಟೆಯನ್ನು ಎತಿ ತೋರಿಸುತ್ತಾ ಅಸಭ್ಯ ವರ್ತನೆ ಮಾಡಿದ್ದಾರೆ. ಈ ಹಿಂದೆಯೂ ಕೂಡ ಬೆಂಗಳೂರಿನಲ್ಲಿ ಇದೇ ರೀತಿ ನಡೆದಿತ್ತು. ಈ ಘಟನೆ ವೈಯಾಲಿಕಾವೆಲ್ ಪೊಲೀಸ್ ಠಾಣಾ ವ್ಯಾಪ್ತಿ ನಡೆದಿದ್ದು, ಕುಟುಂಬ ಸದಸ್ಯರಿಗೆ ಭಾರಿ ಅವಮಾನವಾಗಿದೆ. 

ಮನೆಯೊಳಗೇ ಬಟ್ಟೆ ಬಿಚ್ಚಲು ಮುಂದಾದ್ರು: ಈ ಕುರಿತು ಮಾತನಾಡಿದ ಮನೆ ಮಾಲೀಕ ರಾಜೇಶ್ ಹಾಗೂ ಪತ್ನಿ ದೀಪಾ ಅವರು, ಮದ್ನಾಹ್ನ 3 ಗಂಟೆಗೆ ಮೂವರು ಮಂಗಮುಖಿಯರು ಮನೆಗೆ ಬಂದರು. ಆಗ ಅವರಿಗೆ 500 ರೂಪಾಯಿ ಕೊಟ್ಟೆ. ಆದರೆ ಅವರು ನನಗೆ ಅದರಿಂದ ಮುಖಕ್ಕೆ ಆರತಿ ಥರಾ ಮಾಡಿ ಜೇಬಲ್ಲಿ ಹಣವಿಟ್ಟರು. ನಂತರ 10,000 ರೂ. ಹಣ ಕೊಡುವಂತೆ ಬಾಯಿಗೆ ಬಂದಂತೆ ಬೈದು ಬಟ್ಟೆಎಲ್ಲಾ ಬಿಚ್ಚಲು ಮುಂದಾದರು. ಇನ್ನೂ ಹೊರಗೆ ಇದ್ದಾರೆ, ಅವರಿಗೆ 20,000 ಕೊಡಬೇಕು ಎಂದು ಗಲಾಟೆ ಮಾಡಿದರು. ಕುಟುಂಬಸ್ಥರ ಮುಂದೆ ನಮಗೆ ತಲೆ  ತಗ್ಗಿಸುವಂತಾಯಿತು ಎಂದರು.

ಕಬ್ಬು ಬೆಳಗಾರರಿಗೆ ಸಿಹಿ ಸುದ್ದಿ: ಎಫ್‌ಆರ್‌ಪಿ ದರ ಹೆಚ್ಚಿಸಿದ ಕೇಂದ್ರ ಸರ್ಕಾರ

ಲೋನ್‌ ಮಾಡಿ ಮನೆ ಕಟ್ಟಿದರೂ ಇಂಥವರಿಂದ ನೆಮ್ಮದಿ ಇಲ್ಲ: ಇನ್ನು ಮಂಗಳಮುಖಿಯರಿಗೆ ಎಷ್ಟೇ ಹೇಳಿದರೂ ಕೇಳದ ಹಿನ್ನೆಲೆಯಲ್ಲಿ ಗಲಾಟೆಯನ್ನು ತಡೆಯಲು ನನ್ನನ್ನು (ಮನೆ ಮಾಲೀಕ ರಾಜೇಶ್‌) ಮನೆಯವರೆಲ್ಲಾ ಸೇರಿ ರೂಮಿಗೆ ಕಳುಹಿಸಿದರು. ನಂತರ ನಮ್ಮ ಮನೆಗೆ ಬಂದ ನೆಂಟರು 5 ಸಾವಿರ ಕೊಟ್ಟು ಕಳುಹಿಸಿದ್ದಾರೆ. ಲೋನ್ ಪಡೆದು ಒಂದು ವರ್ಷದಿಂದ ಮನೆ ಕಟ್ಟಿದ್ದೇವೆ. ಆದರೆ ಈ ರೀತಿ ಆಗಿರೋದು ತುಂಬಾ ನೋವಾಗಿದೆ ಎಂದು ಅಳಲು ತೋಡಿಕೊಂಡಿದ್ದಾರೆ.

Follow Us:
Download App:
  • android
  • ios