ಕೇಂದ್ರ ಸರ್ಕಾರದ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದಿಂದ ನಡೆಸಲಾಗುತ್ತಿರುವ ಈಸ್‌ ಆಫ್‌ ಲಿವಿಂಗ್‌-2022ರ ‘ನಾಗರಿಕರ ಗ್ರಹಿಕೆ ಸಮೀಕ್ಷೆ’ (ಸಿಟಿಜನ್‌ ಪರ್ಸೆಪ್ಶನ್‌ ಸರ್ವೇ) ಅವಧಿಯನ್ನು ಡಿ.23 ರಿಂದ ಜ.7 ವರೆಗೆ ವಿಸ್ತರಣೆ ಮಾಡಲಾಗಿದೆ. ಈ ಸಮೀಕ್ಷೆಯಲ್ಲಿ 4.11 ಲಕ್ಷ ಮಂದಿ ಬೆಂಗಳೂರಿನ ನಾಗರಿಕರು ಭಾಗಿಯಾಗಿದ್ದಾರೆ. ಈ ಮೂಲಕ ಸಿಲಿಕಾನ್‌ ಸಿಟಿ ಬೆಂಗಳೂರು ಸಮೀಕ್ಷೆಯಲ್ಲಿ ದೇಶದಲ್ಲಿ 3ನೇ ಸ್ಥಾನದಲ್ಲಿದೆ.

ಬೆಂಗಳೂರು (ಡಿ.26) : ಕೇಂದ್ರ ಸರ್ಕಾರದ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದಿಂದ ನಡೆಸಲಾಗುತ್ತಿರುವ ಈಸ್‌ ಆಫ್‌ ಲಿವಿಂಗ್‌-2022ರ ‘ನಾಗರಿಕರ ಗ್ರಹಿಕೆ ಸಮೀಕ್ಷೆ’ (ಸಿಟಿಜನ್‌ ಪರ್ಸೆಪ್ಶನ್‌ ಸರ್ವೇ) ಅವಧಿಯನ್ನು ಡಿ.23 ರಿಂದ ಜ.7 ವರೆಗೆ ವಿಸ್ತರಣೆ ಮಾಡಲಾಗಿದೆ. ಈ ಸಮೀಕ್ಷೆಯಲ್ಲಿ 4.11 ಲಕ್ಷ ಮಂದಿ ಬೆಂಗಳೂರಿನ ನಾಗರಿಕರು ಭಾಗಿಯಾಗಿದ್ದಾರೆ. ಈ ಮೂಲಕ ಸಿಲಿಕಾನ್‌ ಸಿಟಿ ಬೆಂಗಳೂರು ಸಮೀಕ್ಷೆಯಲ್ಲಿ ದೇಶದಲ್ಲಿ 3ನೇ ಸ್ಥಾನದಲ್ಲಿದೆ.

ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಯಾದ ಸ್ಮಾರ್ಚ್‌ ಸಿಟಿ ಮಿಷನ್‌, ಜೀವನ ಸುಲಭ ಸೂಚ್ಯಂಕ ಮೌಲ್ಯಮಾಪನದ ಕುರಿತು ನಾಗರಿಕ ಗ್ರಹಿಕೆ ಸಮೀಕ್ಷೆಯನ್ನು ಕಳೆದ ನ.9ರಿಂದ ಆರಂಭಿಸಲಾಗಿದ್ದು, ಡಿ.23ವರೆಗೆ ನಡೆಸುವುದಕ್ಕೆ ತೀರ್ಮಾನಿಸಿತ್ತು. ಇದೀಗ ಸಮೀಕ್ಷೆ ಅವಧಿಯನ್ನು ಜ.7ರವರೆಗೆ ವಿಸ್ತರಣೆ ಮಾಡಲಾಗಿದೆ.

Artificial Intelligence: ಆರ್ಟಿಫಿಶಿಯಲ್‌ ಇಂಟಲಿಜೆನ್ಸ್‌ ಬಳಸಿ ರಸ್ತೆ ಸರ್ವೆಗೆ ಮುಂದಾದ ಬಿಬಿಎಂಪಿ

ಸಾರ್ವಜನಿಕರಿಂದ ವ್ಯಕ್ತವಾಗುವ ಅಭಿಪ್ರಾಯವನ್ನಾಧರಿಸಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಆಡಳಿತ ಸುಧಾರಣೆ, ನೀತಿ ರೂಪಿಸಿ ಸಾರ್ವಜನಿಕರ ನಗರದ ಒಳಿತಿಗಾಗಿ ಉತ್ತಮ ಮೂಲಸೌಕರ್ಯ ಕಲ್ಪಿಸಲು ಅಗತ್ಯ ಕ್ರಮ ಕೈಗೊಳ್ಳುವ ಉದ್ದೇಶದಿಂದ ಸಮೀಕ್ಷೆ ನಡೆಸಲಾಗುತ್ತಿದೆ. ಜನಸಂಖ್ಯೆಯ ಶೇ.1ರಷ್ಟುಮಂದಿ ಈ ಸಮೀಕ್ಷೆಯಲ್ಲಿ ಭಾಗವಹಿಸುವಂತೆ ಮಾಡಬೇಕು ಎಂದು ಕೇಂದ್ರ ಸರ್ಕಾರವು ಸ್ಪರ್ಧೆಯಲ್ಲಿರುವ ನಗರಗಳಿಗೆ ಸೂಚಿಸಿದೆ.

ಬೆಂಗಳೂರಿನ 4,11,787 ಮಂದಿ ಈಗಾಗಲೇ ಸಮೀಕ್ಷೆಯಲ್ಲಿ ಭಾಗವಹಿಸಿ ತಮ್ಮ ಅಭಿಪ್ರಾಯ ಸಲ್ಲಿಕೆ ಮಾಡಿದ್ದಾರೆ. ಮತ್ತೆ ಅವಧಿ ವಿಸ್ತರಣೆ ಮಾಡಿರುವುದರಿಂದ 10 ಲಕ್ಷ ಮಂದಿಗೂ ಅಧಿಕ ಜನರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಲಿದ್ದಾರೆ ಎಂದು ಬೆಂಗಳೂರು ಸ್ಮಾರ್ಚ್‌ ಸಿಟಿಯ ಜಂಟಿ ವ್ಯವಸ್ಥಾಪಕ ನಿರ್ದೇಶಕಿ ಸುಶೀಲಮ್ಮ ತಿಳಿಸಿದ್ದಾರೆ.

ರಾಜ್ಯದ 11 ನಗರ ಸ್ಪರ್ಧೆಯಲ್ಲಿ:

ಕರ್ನಾಟಕದಲ್ಲಿ ಬೆಂಗಳೂರು, ಬೆಳಗಾವಿ, ಬಳ್ಳಾರಿ, ವಿಜಯಪುರ, ದಾವಣಗೆರೆ, ಹುಬ್ಬಳಿ-ಧಾರಾವಾಡ, ಕಲಬುರಗಿ, ಮಂಗಳೂರು, ಮೈಸೂರು, ಶಿವಮೊಗ್ಗ ಹಾಗೂ ತುಮಕೂರು ನಗರಗಳಲ್ಲಿ ಈ ಸಮೀಕ್ಷೆ ನಡೆಯುತ್ತಿದೆ.

Bengaluru : ಮಾರುಕಟ್ಟೆ, ಮೆಟ್ರೋ ನಿಲ್ದಾಣಗಳಲ್ಲಿ ಪ್ರಿಪೇಯ್ಡ್ ಆಟೋ ಕೇಂದ್ರ ಆರಂಭ

ಭಾಗವಹಿಸುವುದು ಹೇಗೆ?

ಸಿಲಿಕಾನ್‌ ಸಿಟಿ ಬೆಂಗಳೂರಿನಲ್ಲಿ ಸ್ಮಾರ್ಚ್‌ ಸಿಟಿ ಸಂಸ್ಥೆಯು ಈ ನಾಗರಿಕ ಗ್ರಹಿಕೆ ಸಮೀಕ್ಷೆ ಬಗ್ಗೆ ಸಾರ್ವಜನಿಕರಿಗೆ ಜಾಗೃತಿ ಮೂಡಿಸುತ್ತಿದ್ದು, ನನ್ನ ನಗರ ನಮ್ಮ ಹೆಮ್ಮೆ ಘೋಷಣೆಯೊಂದಿಗೆ ಪ್ರಚಾರ ಪಡೆಸುತ್ತಿದೆ. hಠಿಠಿps://ಛಿಟ್ಝ2022.ಟ್ಟಜ/ಇಜಿಠಿಜ್ಢಿಛ್ಞಿಊಛಿಛಿdಚಿa್ಚk ಈ ಲಿಂಕ್‌ ಭೇಟಿ ನೀಡುವ ಉತ್ತರಿಸಬಹುದು ಎಂದು ಬೆಂಗಳೂರು ಸ್ಮಾರ್ಚ್‌ ಸಿಟಿಯ ಜಂಟಿ ವ್ಯವಸ್ಥಾಪಕ ನಿರ್ದೇಶಕಿ ಸುಶೀಲಮ್ಮ ತಿಳಿಸಿದ್ದಾರೆ.