Asianet Suvarna News Asianet Suvarna News

ಬೆಂಗಳೂರು: ಕಾರಿನ ಮ್ಯೂಸಿಕ್ ಸದ್ದು ಪ್ರಶ್ನಿಸಿದ ಮಾಜಿ ಸೈನಿಕನ ಮೇಲೆ ಹಲ್ಲೆ

ಮನೆ ಮುಂದೆ ಕಾರಿನಲ್ಲಿ ನಸುಕಿನ ವೇಳೆ ಜೋರಾಗಿ ಸಂಗೀತ ಹಾಕಿಕೊಂಡು ಶಬ್ದ ಮಾಡುತ್ತಿದ್ದನ್ನು ಪ್ರಶ್ನಿಸಿದ್ದಕ್ಕೆ ಸಿಟ್ಟಿಗೆದ್ದು ಮಾಜಿ ಸೈನಿಕರೊಬ್ಬರ ಕುಟುಂಬದ ಮೇಲೆ ಹಲ್ಲೆ ನಡೆಸಿದ ಆರೋಪದ ಮೇರೆಗೆ ಇಬ್ಬರು ಖಾಸಗಿ ಕಂಪನಿ ಉದ್ಯೋಗಿಗಳ ವಿರುದ್ಧ ಎಚ್‌ಎಎಲ್‌ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ.

Ex soldier assaulted for questioning car music at bengaluru rav
Author
First Published Apr 4, 2023, 6:20 AM IST | Last Updated Apr 4, 2023, 6:20 AM IST

ಬೆಂಗಳೂರು (ಏ.4) : ಮನೆ ಮುಂದೆ ಕಾರಿನಲ್ಲಿ ನಸುಕಿನ ವೇಳೆ ಜೋರಾಗಿ ಸಂಗೀತ ಹಾಕಿಕೊಂಡು ಶಬ್ದ ಮಾಡುತ್ತಿದ್ದನ್ನು ಪ್ರಶ್ನಿಸಿದ್ದಕ್ಕೆ ಸಿಟ್ಟಿಗೆದ್ದು ಮಾಜಿ ಸೈನಿಕರೊಬ್ಬರ ಕುಟುಂಬದ ಮೇಲೆ ಹಲ್ಲೆ ನಡೆಸಿದ ಆರೋಪದ ಮೇರೆಗೆ ಇಬ್ಬರು ಖಾಸಗಿ ಕಂಪನಿ ಉದ್ಯೋಗಿಗಳ ವಿರುದ್ಧ ಎಚ್‌ಎಎಲ್‌ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ.

ಹಲ್ಲೆಯಿಂದ ವಿಜ್ಞಾನ ನಗರ(Vijnana nagar)ದ ನಿವಾಸಿಗಳಾದ ಲಿಡ್ಯೋ ನಹಮಿಯಾ(Lydio Nahemiah) ಹಾಗೂ ಶಿರ್ಲೆ ಸೌಜನ್ಯ (Shirley soujanya)ಗಾಯಗೊಂಡಿದ್ದು, ನೆರೆಮನೆಯ ನಿವಾಸಿಗಳ ರಾಮ ಸಮಂತ್‌ ರಾಯ್‌ ಹಾಗೂ ಬಸುದೇವ ಸಮಂತ್‌ ರಾಯ್‌(Ram samanth roy and basudev samanth raoy) ವಿರುದ್ಧ ಹಲ್ಲೆ ಪ್ರಕರಣ ದಾಖಲಾಗಿದೆ. ಎರಡು ದಿನಗಳ ಹಿಂದೆ ಈ ಗಲಾಟೆ ನಡೆದಿದ್ದು, ಈ ಸಂಬಂಧ ವಿಚಾರಣೆಗೆ ಹಾಜರಾಗುವಂತೆ ಆರೋಪಿಗಳಿಗೆ ನೋಟಿಸ್‌ ನೀಡಲಾಗಿದೆ. ಘಟನೆಯಲ್ಲಿ ಕಣ್ಣು ಹಾಗೂ ಕಾಲುಗಳಿಗೆ ಪೆಟ್ಟಾಗಿ ನಹಮಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮನೆಗೆ ಮರಳಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕ್ಷುಲ್ಲಕ ಕಾರಣಕ್ಕೆ ಯುವಕರ ಮೇಲೆ ಪೊಲೀಸರ ಹಲ್ಲೆ

ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿದ್ದ ನಹಮಿಯಾ ಅವರು, ನಿವೃತ್ತಿ ಬಳಿಕ ತಮ್ಮ ಕುಟುಂಬದ ಜತೆ ವಿಜ್ಞಾನ ನಗರದಲ್ಲಿ ನೆಲೆಸಿದ್ದಾರೆ. ಮೊದಲಿನಿಂದಲೂ ಸಣ್ಣಪುಟ್ಟವಿಚಾರಗಳಿಗೆ ನಹಮಿಯಾ ಹಾಗೂ ಸಮಂತ್‌ ರಾಯ್‌ ಸೋದರರ ನಡುವೆ ಮನಸ್ತಾಪವಾಗಿತ್ತು. ಇದೇ ವಿಷಯವಾಗಿ ಆಗಾಗ್ಗೆ ಅವರು ಪರಸ್ಪರ ಜಗಳ ಮಾಡಿಕೊಂಡಿದ್ದರು ಎಂದು ತಿಳಿದು ಬಂದಿದೆ.

ಮನೆ ಮುಂದೆ ಭಾನುವಾರ ನಸುಕಿನ 4.30ರ ಸುಮಾರಿಗೆ ಕಾರು ನಿಲ್ಲಿಸಿಕೊಂಡು ಮ್ಯೂಸಿಕ್‌ ಹಾಕಿಕೊಂಡು ಸಮಂತ್‌ ಸೋದರು ಶಬ್ದ ಮಾಡುತ್ತಿದ್ದರು. ಇದರಿಂದ ಎಚ್ಚರಗೊಂಡ ನಹಮಿಯಾ ಅವರು, ಮನೆಯಿಂದ ಹೊರ ಬಂದು ಆಕ್ಷೇಪಿಸಿದ್ದಾರೆ. ಈ ವೇಳೆ ಕೋಪಗೊಂಡ ಆರೋಪಿಗಳು, ಗಲಾಟೆ ಮಾಡಿದ್ದಾರೆ. ಆಗ ಮಾತಿಗೆ ಮಾತು ಬೆಳೆದು ಪರಿಸ್ಥಿತಿ ವಿಕೋಪಕ್ಕೆ ತಿರುಗಿದೆ. ಈ ಹಂತದಲ್ಲಿ ನಹಮಿಯಾ ಅವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ನಡೆಸಿದ್ದಾರೆ. ಈ ವೇಳೆ ಜಗಳÜ ಬಿಡಿಸಲು ಮುಂದಾದ ನಹಮಿಯಾ ಅವರ ಸೋದರಿ ಶಿರ್ಲೆ ಸೌಜನ್ಯ ಅವರ ಕೆನ್ನೆಗೆ ಆರೋಪಿಗಳು ಹೊಡೆದಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

 

ಕಾಂಗ್ರೆಸ್‌- ಜೆಡಿಎಸ್‌ ಬೆಂಬಲಿಗರ ನಡುವೆ ಮಾರಾಮಾರಿ: ದೊಣ್ಣೆ, ಕಲ್ಲುಗಳಿಂದ ಹಲ್ಲೆ

ಕಾರ್‌ ರಿವರ್ಸ್‌ ಶಬ್ದಕ್ಕೆ ಗಲಾಟೆ

ನಾವು ಮುಂಜಾನೆ ಕಾರಿನಲ್ಲಿ ಮ್ಯೂಸಿಕ್‌ ಹಾಕಿಲ್ಲ. ಹೊರಗೆ ಹೋಗಲು ಕಾರನ್ನು ರಿವರ್ಸ್‌ ತೆಗೆದುಕೊಳ್ಳುವಾಗ ಮ್ಯೂಸಿಕ್‌ ಬಂದಿದೆ. ಇದಕ್ಕೆ ಆಕ್ಷೇಪಿಸಿ ನಹಮಿಯಾ ಗಲಾಟೆ ಮಾಡಿದರು ಎಂದು ಆರೋಪಿತರು ಪೊಲೀಸರಿಗೆ ಸ್ಪಷ್ಟಪಡಿಸಿರುವುದಾಗಿ ತಿಳಿದು ಬಂದಿದೆ.

Latest Videos
Follow Us:
Download App:
  • android
  • ios