ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದಲ್ಲಿ ಸರ್ಕಾರದ ಅನುಧಾನವಿಲ್ಲದೇ ನಿರ್ಮಾಣವಾಯ್ತು ನೂತನ ಕನ್ನಡ ಭವನ

ವಿದ್ಯಾಶ್ರೀ ಏಷ್ಯಾನೆಟ್ ಸುವರ್ಣ ನ್ಯೂಸ್ ಬೆಂಗಳೂರು

ಬೆಂಗಳೂರು (ನ.12): ರಾಜಧಾನಿಯ ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದಲ್ಲಿ ಸಾರ್ವಜನಿಕರಿಂದ ಸಂಗ್ರಹಿಸಲಾದ ಹಣದಲ್ಲಿ ಕನ್ನಡ ಸಾಹಿತ್ಯ ಪರಿಷತ್‌ ವತಿಯಿಂದ ಅತ್ಯಾಧುನಿಕ ತಂತ್ರಜ್ಞಾನವುಳ್ಳ ಸುಸಜ್ಜಿತ ಕನ್ನಡ ಭವನವನ್ನು ನಿರ್ಮಿಸಿ ಲೋಕಾರ್ಪಣೆ ಮಾಡಲಾಗಿದೆ. ಈ ಆಧುನಿಕ ತಂತ್ರಜ್ಞಾನವುಳ್ಳ ಕನ್ನಡ ಭವನವನ್ನು ಸಂಸದ ಸದಾನಂದಗೌಡ ಹಾಗೂ ಶಾಸಕ ಕೃಷ್ಣಬೈರೇಗೌಡ ಶನಿವಾರ ಉದ್ಘಾಟಿಸಿದರು.

ನಾಡಿನ ಬಹುತೇಕ ಸಂಘ ಸಂಸ್ಥೆಗಳು ಯಾವುದಾದರೂ ಒಂದು ಕಾರ್ಯವನ್ನು ಮಾಡಲು ಸರ್ಕಾರದಿಂದ ಅನುದಾನ (Government Fund) ನಿರೀಕ್ಷೆ ಮಾಡುತ್ತಾ ಕುಳಿತಿರುತ್ತವೆ. ಆದರೆ, ಇದಕ್ಕೆ ಅಪವಾದವೆಂಬಂತೆ ಬ್ಯಾಟರಾಯನಪುರ (Byatarayanpura) ವಿಧಾನಸಭಾ ಕ್ಷೇತ್ರದ ಕನ್ನಡ ಸಾಹಿತ್ಯ ಪರಿಷತ್‌ (Kannada Sahitya Parishath) ಘಟಕದ ಅಧ್ಯಕ್ಷ ರೇಣುಕ ಹೆಗ್ಗಡೆ (Renuka Heggade) ನೇತೃತ್ವದ ತಂಡವು ಸಾರ್ವಜನಿಕರಿಂದ ಸಂಗ್ರಹಿಸಿದ ಹಣದಲ್ಲಿ ಸುಸಜ್ಜಿತ ಕನ್ನಡ ಭವನ ನಿರ್ಮಿಸಿದ್ದು, ಇತರರಿಗೆ ಮಾದರಿಯಾಗಿದ್ದಾರೆ. ಕ್ಷೇತ್ರದ ಹೆಬ್ಬಾಳ (Hebbala), ಕೆಂಪಾಪುರ (Kempapura), ಕಾಫಿ ಬೋರ್ಡ್ (Coffee Board), ಮರಿಯಣ್ಣನಪಾಳ್ಯ, ಭುವನೇಶ್ವರಿನಗರ, ಅಮೃತನಗರ ಸೇರಿದಂತೆ ಇನ್ನಿತರ ಬಡಾವಣೆಗಳ ನಾಗರೀಕರಿಂದ ಹಣ ಸಂಗ್ರಹಿಸಲಾಗಿದೆ. ಈಗ ಕಟ್ಟಡ ನಿರ್ಮಾಣವೂ ಪೂರ್ಣಗೊಂಡು ಲೋಕಾರ್ಪಣೆಯಾಗಿ ಸಭೆ, ಸಮಾರಂಭಗಳ ಆಚರಣೆಗೆ ಮುಕ್ತಗೊಂಡಿದೆ.

ಅಹಮದಾಬಾದ್‌ನಲ್ಲಿ ಕನ್ನಡ ಭವನ ನಿರ್ಮಾಣಕ್ಕೆ ಜಾಗ: ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ

ಮೂರು ಅಂತಸ್ತಿನ ಕಟ್ಟಡ: 
ಇಲ್ಲಿ 23× 60 ಅಳತೆಯ ನಿವೇಶನದಲ್ಲಿ 3 ಅಂತಸ್ತಿನ (Floors) ಕನ್ನಡ ಭವನದ ಕಟ್ಟಡ (Building) ನಿರ್ಮಿಸಲಾಗಿದೆ. ರಾಜ್ಯ ಸರ್ಕಾರದ ಗ್ರಂಥಾಲಯದ ಸಹಾಯದಿಂದ ನೆಲ ಅಂತಸ್ತಿನಲ್ಲಿ ಬೃಹತ್ ಗ್ರಂಥಾಲಯ (Library) ಸ್ಥಾಪಿಸಲಾಗಿದೆ. ಮೊದಲನೇ ಮಹಡಿಯ ಅರ್ಧಭಾಗದಲ್ಲಿ ಡಿಜಿಟಲ್ (Digital) ಗ್ರಂಥಾಲಯ ಸ್ಥಾಪಿಸಲಾಗಿದೆ. ಇನ್ನು ಮೇಲಂತಸ್ತಿನಲ್ಲಿ ಒಂದು ಸಭಾಂಗಣ ನಿರ್ಮಿಸಿ ಸಾರ್ವಜನಿಕರ ವಿವಿಧ ಕಾರ್ಯಕ್ರಮಗಳ ಆಯೋಜನೆಗೆ ಅನುವು ಮಾಡಿಕೊಡಲಾಗಿದೆ. ಇದರಿಂದ ಸಾರ್ವಜನಿಕರು ಕಡಿಮೆ ದರದಲ್ಲಿ ಸಾಂಸ್ಕೃತಿಕ ಮತ್ತು ಸಾಹಿತ್ಯ ಕಾರ್ಯಗಳನ್ನು ನಡೆಸಲು ಕನ್ನಡ ಭವನವು ಪೂರಕ ಅವಕಾಶ ಕಲ್ಪಿಸಿದೆ. 

ಕ್ಷೇಮಾಭಿವೃದ್ಧಿ ಸಂಘದ ನೆರವು:
ಸಾರ್ವಜನಿಕರ ಅನುಕೂಲಕ್ಕಾಗಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ರೇಣುಕ ಹೆಗ್ಗಡೆ, ಶಾಸಕ ಕೃಷ್ಣಬೈರೇಗೌಡ (Krishna Byre Gowda), ಮಾಜಿ ಕಾರ್ಪೋರೇಟರ್ ಮಂಜುನಾಥ್ ಬಾಬು (Manjunath Babu)ಹಾಗೂ ಕಾಫಿಬೊರ್ಡ್ ನಾಗರೀಕರ ಕ್ಷೇಮಾಭಿವೃದ್ದಿ ಸಂಘದ ಸದಸ್ಯರು ಸೇರಿ ಸಾರ್ವಜನಿಕರ ಸಹಾಯದಿಂದ ನಿರ್ಮಾಣವಾಗಿರುವ ಕಟ್ಟಡವನ್ನ ಸಾರ್ವಜನಿಕರ ಉಪಯೋಗಕ್ಕೆ ಮುಕ್ತಾಗೊಳಿಸಲಾಗಿದೆ. ಜನರು ಗ್ರಂಥಾಲಯದಲ್ಲಿ ಕುಳಿತು ಓದಿ (Study)ಜ್ಞಾನ ಬೆಳಸಿಕೊಳ್ಳಬಹುದು, ಇದರೊಂದಿಗೆ ಕಟ್ಟಡದಲ್ಲಿರುವ ಸಭಾಂಗಣದಲ್ಲಿ ಸ್ಥಳೀಯ ನಾಗರೀಕರ ಸಂಸ್ಕೃತಿ (Culture) ಅನಾವರಣಕ್ಕೆ ಹಾಗೂ ಕಾರ್ಯಕ್ರಮಗಳ ಆಯೋಜನೆಗೆ ಮುಕ್ತಗೊಂಡಿದೆ. 

ಈ ಸಂದರ್ಭದಲ್ಲಿ ಕನ್ನಡ ಭವನ ಲೋಕಾರ್ಪಣಾ ಕಾರ್ಯಕ್ರಮದಲ್ಲಿ ಬೆಂಗಳೂರು ಉತ್ತರ ಸಂಸತ್ ಕ್ಷೇತ್ರದ ಸಂಸದ ಸದಾನಂದಗೌಡ, ಬ್ಯಾಟರಾಯಪುರ ಕ್ಷೇತ್ರದ ಶಾಸಕ ಕೃಷ್ಣಬೈರೇಗೌಡ, ಬೆಂಗಳೂರು ನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪ್ರಕಾಶ್ ಮೂರ್ತಿ, ಮಾಜಿ ಅಡ್ವೋಕೇಟ್ ಜನರಲ್ ರವಿವರ್ಮ ಕುಮಾರ್, ಗ್ರಂಥಾಲಯ ಇಲಾಖೆ ನಿರ್ದೇಶಕ ಸತೀಶ್ ಕುಮಾರ್ ಎಸ್. ಹೊಸಮನಿ, ಬ್ಯಾಟರಾಯನಪುರ ಕ್ಷೇತ್ರ ಕನ್ನಡ ಸಾಹಿತ್ಯ ಪರಿಷತ್ತು ಘಟಕದ ಅಧ್ಯಕ್ಷ ರೇಣುಕ ಹೆಗ್ಗಡೆ ಭಾಗಿಯಾಗಿದ್ದರು.

ಕನ್ನಡ ಬಲ್ಲವರನ್ನೆಲ್ಲ ಕನ್ನಡಿಗ ಅಂತ ಪರಿಗಣಿಸಿ: ಕಸಾಪ

ಸಂಘಟನೆಗಳಿಗೆ ಮಾದರಿ:
ರಾಜ್ಯದಲ್ಲಿ ಹಲವು ಸಂಘಟನೆಗಳು ಕಾರ್ಯ ನಿರ್ವಹಿಸುತ್ತಿದ್ದು, ಸರ್ಕಾರ (Government) ಮತ್ತು ಇತರೆ ಮೂಲಗಳಿಂದ ಬರುವ ಹಣವನ್ನು ದುರುಪಯೋಗ (Misuse)ಮಾಡಿಕೊಳ್ಳುವುದು ಹೆಚ್ಚಾಗಿದೆ. ಆದರೆ, ಕನ್ನಡ ಸಾಹಿತ್ಯ ಪರಿಷತ್‌ನ ಬ್ಯಾಟರಾಯನಪುರ ಘಟಕವು ಸಾರ್ವಜನಿಕರು (Publics), ಸ್ಥಳೀಯ ವಿವಿಧ ಮುಖಂಡರು ಹಾಗೂ ಕ್ಷೇಮಾಭಿವೃದ್ಧಿ ಸಂಘಟನೆಗಳ ಮನವೊಲಿಸಿ ಸುಸಜ್ಜಿತ ಕನ್ನಡ ಭವನ ನಿರ್ಮಿಸಿವೆ. ಅದರಲ್ಲೂ ಎಲ್ಲ ಕೊಠಡಿಗಳನ್ನು ಸದುಪಯೋಗ ಆಗುವ ಮಾದರಿಯಲ್ಲಿ ನಿರ್ಮಿಸಿ ಬಳಕೆ ಮಾಡಲಾಗುತ್ತಿದೆ. ಈ ಕಾರ್ಯವು ಇತರೆ ಸಂಘಟನೆಗಳಿಗೆ ಮಾದರಿಯಾಗಿದ್ದು, ಇಂತಹ ಸಾಮಾಜಿಕ (Social) ಮತ್ತು ಕನ್ನಡಪರ ಅಭಿವೃದ್ಧಿ ಕಾರ್ಯಗಳು ಮತ್ತಷ್ಟುಹೆಚ್ಚಾಗಬೇಕಿವೆ.