ರಾಜ್ಯದಲ್ಲಿ ಸಾರಿಗೆ ನೌಕರರು ಮುಷ್ಕರ ನಡೆಸುತ್ತಿದ್ದು, ಇದರಿಂದ ಇಲಾಖೆಗೆ ಭಾರೀ ಪ್ರಮಾಣದಲ್ಲಿ ನಷ್ಟ ಉಂಟಾಗಿದೆ. 

 ಬೆಂಗಳೂರು (ಡಿ.13): ಸಾರಿಗೆ ಸಂಸ್ಥೆ ನೌಕರರು ನಡೆಸುತ್ತಿರುವ ಪ್ರತಿಭಟನೆಯಿಂದ ಶನಿವಾರ ಕೂಡ ರಾಜ್ಯಾದ್ಯಂತ ಬಸ್‌ ಸಂಚಾರ ಇರಲಿಲ್ಲ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಹೀಗಾಗಿ ಶನಿವಾರ ಒಟ್ಟು ನಾಲ್ಕು ನಿಗಮಗಳಿಂದ ಸುಮಾರು .16.5 ಕೋಟಿ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ.

 ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ(ಬಿಎಂಟಿಸಿ)ಗೆ 2.1 ಕೋಟಿ, ಕೆಎಸ್‌ಆರ್‌ಟಿಸಿಗೆ 4 ಕೋಟಿ, ಕಲಬುರಗಿ ಕೇಂದ್ರವಾಗಿರುವ ಈಶಾನ್ಯ ಸಾರಿಗೆ ಸಂಸ್ಥೆಗೆ 4.5 ಕೋಟಿ, ಹುಬ್ಬಳ್ಳಿ ಕೇಂದ್ರವಾಗಿರುವ ವಾಯುವ್ಯ ರಸ್ತೆ ಸಾರಿಗೆ ಸಂಸ್ಥೆಗೆ 5.5 ಕೋಟಿ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ.

ಮುಷ್ಕರ ನಿರತರಿಗೆ ಮಾತುಕತೆಗೆ ಮುಕ್ತ ಅಹ್ವಾನ ನೀಡಿದ ಸಾರಿಗೆ ಸಚಿವರು .

ಕಳೆದ ಎರಡು ದಿನಗಳಿಂದಲೂ ಕೂಡ ಕೆಎಸ್‌ಆರ್‌ಟಿಸಿ ನೌಕರರು ಪ್ರತಿಭಟನೆ ನಡೆಸುತ್ತಿದ್ದಾರೆ.