Asianet Suvarna News Asianet Suvarna News

Karnataka Bus Strike: ಸಾರಿಗೆ ನೌಕರರ ಮುಷ್ಕರ, ಬಸ್ ಸಂಚಾರ ಇರುತ್ತಾ, ಇಲ್ಲ? ಸ್ಪಷ್ಟನೆ ಕೊಟ್ಟ KSRTC

* ನಾಳೆ (ಡಿ.14)ರಾಜ್ಯಾದ್ಯಂತ ಸಾರಿಗೆ ನೌಕರರ ಮುಷ್ಕರ
* ವಿವಿಧ ಬೇಡಿಕೆ ಈಡೇರಿಕೆಗಾಗಿ ಧರಣಿಗೆ ಕರೆ ಕೊಟ್ಟ ಸಾರಿಗೆ ನೌಕರ ಸಂಘ
* ಬಸ್ ಸಂಚರಿಸುವ ಬಗ್ಗೆ ಸ್ಪಷ್ಟನೆ ಕೊಟ್ಟ ಕೆಎಸ್‌ಆರ್‌ಟಿಸಿ

Employees Call Protest On Dec 14th buses operate as usual Says KSRTC rbj
Author
Bengaluru, First Published Dec 13, 2021, 9:16 PM IST

ಬೆಂಗಳೂರು, (ಡಿ.13): ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ರಾಜ್ಯ ಸಾರಿಗೆ ನೌಕರರು ( KSRTC Employees) ನಾಳೆ(ಡಿ.14) ಮುಷ್ಕರ ಕೈಗೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಬಸ್‌(Bus) ಸಂಚಾರ ಇರುತ್ತಾ ಇಲ್ಲ ಎನ್ನುವ ಗೊಂದಲದಲ್ಲಿ ಪ್ರಯಾಣಿಕರಿದ್ದಾರೆ (passenger)..

ಇದೀಗ ಇದಕ್ಕೆ ಕೆಎಸ್ಆರ್‌ಟಿಸಿ(Karnataka State Road Transport Corporation) ಪ್ರಕಟಣೆ ಹೊಡಿಸಿದ್ದು, ನಾಳೆ(ಮಂಗಳವಾರ) ಕೆಎಸ್‌ಆರ್‌ಟಿಸಿ‌ಯ ವ್ಯಾಪ್ತಿಯಲ್ಲಿ‌ ಎಂದಿನಂತೆ ಬಸ್ಸುಗಳ‌ ಕಾರ್ಯಾಚರಣೆ ಇರಲಿದೆ. ಯಾವುದೇ ವ್ಯತ್ಯಯವಾಗುವುದಿಲ್ಲ ಎಂದು ಸ್ಪಷ್ಟಪಡಿಸಿದೆ. ಈ ಮೂಲಕ ಬಸ್ ಸಂಚಾರ ಇರುತ್ತೋ ಇಲ್ಲೋ ಎನ್ನುವ ಪ್ರಯಾಣಿಕರ ಗೊಂದಲಗಳಿಗೆ ತೆರೆ ಎಳೆದಿದೆ. 

KSRTC Jobs ತಡೆಹಿಡಿಯಲಾಗಿದ್ದ ನೇಮಕಾತಿ ಪ್ರಕ್ರಿಯೆ ಬಗ್ಗೆ ಮಾಹಿತಿ ನೀಡಿದ ಕೆಎಸ್ಆರ್‌ಟಿಸಿ

ಇನ್ನು ಮುಷ್ಕರ ಕುರಿತು ಇಂದುಈಸೋಮವಾರ) ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದಂತ ಅಖಿಲ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಮಹಾಮಂಡಳಿತ ಮಹಾ ಪ್ರಧಾನ ಕಾರ್ಯದರ್ಶಿ ಬಿ.ಜಯ ದೇವರಾಜ ಅರಸು, ರಾಜ್ಯ ಸರ್ಕಾರ ಸಾರಿಗೆ ನೌಕರರಿಗೆ 6ನೇ ವೇತನ ಪರಿಷ್ಕರಣೆ ಮಾಡಬೇಕು. ನೌಕರರಿಗೆ ಈಗ ನೀಡಲಾಗುತ್ತಿರುವಂತ ಅರ್ಧ ವೇತನ ಪಾವತಿ ಕ್ರಮ ನಿಲ್ಲಿಸಿ, ಪೂರ್ಣ ವೇತನ ಕಾಲಕ್ಕೆ ಸರಿಯಾಗಿ ನೀಡಬೇಕು ಎಂದು ಆಗ್ರಹಿಸೋದಕ್ಕೆ ನಾಳೆ(ಡಿ.14) ರಾಜ್ಯಾಧ್ಯಂತ ಧರಣಿ ಮುಷ್ಕರಕ್ಕೆ ಕರೆ ನೀಡಿರೋದಾಗಿ ತಿಳಿಸಿದರು.

ಕಳೆದ ಬಾರಿ ಮುಷ್ಕರದ ನಿರತ ಅನೇಕರ ನೌಕರರನ್ನು ಕೆಲಸದಿಂದ ವಜಾಗೊಳಿಸಲಾಗಿದೆ. ಆ ನೌಕರರನ್ನು ಮತ್ತೆ ಕೆಲಸಕ್ಕೆ ಪುನರ್ ನಿಯೋಜಿಸಬೇಕು. ಸರ್ಕಾರವೇ ಸಾರಿಗೆ ನಿಗಮಗಳನ್ನು ಇಳಿಸಿ ಬೆಳೆಸುವಂತ ಜವಾಬ್ದಾರಿ ಹೋರಬೇಕು ಎಂದು ಆಗ್ರಹಿಸಿದರು.

ನಾಳೆ ಈ ಎಲ್ಲಾ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ರಾಜ್ಯಾದ್ಯಂತ ಎಲ್ಲಾ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಧರಣಿ ನಡೆಸಲಾಗುತ್ತದೆ. ಜಿಲ್ಲಾಧಿಕಾರಿಗಳ ಮೂಲಕ ಸಿಎಂಗೆ ನಮ್ಮ ಬೇಡಿಕೆ ಈಡೇರಿಕೆಗೆ ಮನವಿ ಮಾಡಲಾಗುತ್ತದೆ. ಇದಲ್ಲದೇ KSRTC ಕೇಂದ್ರ ಕಚೇರಿ ಮುಂದೆ ಧರಣಿ ನಡೆಸಿ, ಎಂಡಿ ಮೂಲಕ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಲಾಗುತ್ತದೆ ಎಂದರು.

ಸಾರಿಗೆ ನೌಕರರು ಧರಣಿಗೆ ಕರೆ ಕೊಟ್ಟಿರುವುದರಿಂದ ಸಾರಿಗೆ ಬಸ್ ಪ್ರಯಾಣಿಕರಿಗೆ ಬಸ್ ಸಿಗೋದು ಡೌಟ್ ಎನ್ನಲಾಗಿತ್ತು. ಆದ್ರೆ, ಇದೀಗ ಈ ಬಗ್ಗೆ ಕೆಎಸ್ಆರ್‌ಟಿಸಿ ಬಸ್ ಸಂಚಾರದ ಬಗ್ಗೆ ಸ್ಪಷ್ಟನೆ ಕೊಟ್ಟಿದೆ. ಬಸ್ ಸಂಚಾರ ಇರುವುದರಿಂದ ಪ್ರಯಾಣಿಕರು ಯಾವುದೇ ಗೊಂದಲಕ್ಕೀಡಾಗುವುದು ಅವಶ್ಯತೆ ಇಲ್ಲ.

ಈ ಹಿಂದೆ ರಾಜ್ಯದಲ್ಲಿ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಸಾರಿಗೆ ನೌಕರರು ಮುಷ್ಕರ ನಡೆಸಿದ್ದರು. ವಾರಗಟ್ಟಲೇ ನಡೆದಂತ ಪ್ರತಿಭಟನೆಯಿಂದಾಗಿ ಬಸ್ ಸಂಚಾರವಿಲ್ಲದೇ ಪ್ರಯಾಣಿಕರು ಹೈರಾಣಾಗಿದ್ದರು.

ಈಗ ಮತ್ತೆ ನಾಳೆ ಸಾರಿಗೆ ನೌಕರರು ತಮ್ಮ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಧರಣಿ ನಡೆಸೋ ಕಾರಣ, ಸಾರಿಗೆ ಬಸ್ ಪ್ರಯಾಣಿಕರಿಗೆ ಬಸ್ ಸಿಗೋದು ಡೌಟ್ ಆಗಿತ್ತು.

Follow Us:
Download App:
  • android
  • ios