ಆನೇಕಲ್‌(ಜು.26): ಆನೆಯೊಂದು ಕಡ್ಡಿಯನ್ನು ಬಳಸಿ ಕಿವಿಯನ್ನು ಕೆರೆದುಕೊಂಡಿರುವುದು ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಕಂಡುಬಂದಿದೆ. ಮಹಾರಾಷ್ಟ್ರದ ಕೊಲ್ಲಾಪುರದ ದೇಗುಲವೊಂದರಿಂದ ಸಂರಕ್ಷಿಸಿ ಕರೆತಂದ ಆನೆ ಈ ರೀತಿ ಮಾಡುವ ಮೂಲಕ ಅಚ್ಚರಿ ಮೂಡಿಸಿದೆ.

2014ರಲ್ಲಿ ಪಾರ್ಕ್‌ಗೆ ಬಂದ ಸುಂದರ ಎಂಬ ಆನೆ ಬಲುಬೇಗನೆ ಇತರ ಆನೆಗಳ ಜೊತೆ ಹೊಂದಿಕೊಂಡು ಇಲ್ಲಿನ ಕ್ರಮ ಬದ್ಧ ಆಹಾರ ಸೇವನೆಯಿಂದ ದಷ್ಟಪುಷ್ಟವಾಗಿ ಬೆಳೆದಿದ್ದಾನೆ. ಇತ್ತೀಚೆಗೆ ಈ ಆನೆಯ ಚಲನವಲನಗಳನ್ನು ಗಮನಿಸುತ್ತಿದ್ದ ಮಾವುತರಿಗೆ ಆನೆ ಕಡ್ಡಿಯಿಂದ ಕಿವಿಯನ್ನು ಕೆರೆದುಕೊಳ್ಳುತ್ತಿರುವ ದೃಶ್ಯ ಕಂಡುಬಂದಿದೆ. 

ಇವಳೇ ನೋಡಿ ಬಾಬ್‌ ಕಟ್ ಸೆಂಗಮಾಲಂ: ವಿಭಿನ್ನ ಹೇರ್‌ಸ್ಟೈಲ್‌ಗೇ ಫೇಮಸ್!

ಇದೇ ಸಂದರ್ಭದಲ್ಲಿ ಇದರ ಸಂಗಾತಿ ಮೇನಕೆ ಸಹ ಇದೇ ರೀತಿ ವರ್ತನೆ ಪ್ರದರ್ಶಿಸಿದೆ. ಉದ್ಯಾನವನದ ಕಾರ್ಯನಿರ್ವಹಣಾಧಿಕಾರಿ ವನಶ್ರೀ ವಿಪಿನ್‌ ಸಿಂಗ್‌, ವೈದ್ಯಾಧಿಕಾರಿಗಳಾದ ಉಮಾಶಂಕರ್‌, ಅಮಲಾರವರು ಈ ಅಪರೂಪದ ಮಾಹಿತಿಯನ್ನು ಜನರ ಜೊತೆ ಹಂಚಿಕೊಂಡಿದ್ದಾರೆ.