ಇವಳೇ ನೋಡಿ ಬಾಬ್‌ ಕಟ್ ಸೆಂಗಮಾಲಂ: ವಿಭಿನ್ನ ಹೇರ್‌ಸ್ಟೈಲ್‌ಗೇ ಫೇಮಸ್!

First Published 7, Jul 2020, 11:51 AM

ತಮಿಳುನಾಡಿನ ಆನೆಯೊಂದು ತನ್ನ ವಿಭಿನ್ನ ಹೇರ್‌ ಸ್ಟೈಲ್‌ನಿಂದಲೇ ಸಖತ್ ಫೇಮಸ್ ಆಗಿದೆ. ಈ ಆನೆ ತನ್ನದೇ ಆದ ಅಭಿಮಾನಿಗಳನ್ನೂ ಹೊಂದಿದೆ. ಹೌದು ಸದ್ಯ ಈ ಕ್ಯೂಟ್ ಆನೆಯ ಪೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಫುಲ್ ವೈರ್ ಆಗಿದ್ದು, ನೆಟ್ಟಿಗರ ಮನ ಗೆದ್ದಿವೆ. ಅಷ್ಟಕ್ಕೂ ಈ ಆನೆ ಹೇಗೆ ಕಾಣುತ್ತೆ? ವಿಶೇಷತೆ ಏನು? ಇಲ್ಲಿದೆ ನೋಡಿ ವಿವರ

ಬಾಬ್‌ಕಟ್‌ ಎಂಬುದು ಹುಡುಗಿಯರ ಅಚ್ಚುಮೆಚ್ಚಿನ ಹೇರ್‌ಸ್ಟೈಲ್‌ ಪೈಕಿ ಒಂದು. ಆದರೆ, ಆನೆ ಎಂದಾದರೂ ಬಾಬ್‌ ಕಟ್‌ ಮಾಡಿಸಿಕೊಂಡಿದ್ದನ್ನು ನೋಡಿದ್ದೀರಾ?

ತಮಿಳುನಾಡಿನ ಮನ್ನಾರ್‌ಗುಡಿಯ ರಾಜಗೋಪಾಲಸ್ವಾಮಿ ದೇವಾಲಯದಲ್ಲಿ ಆನೆಯೊಂದು ತನ್ನ ಕೇಶ ಶೈಲಿಯಿಂದಲೇ ಭಾರೀ ಫೆಮಸ್ ಆಗಿದೆ.

ಸೆಂಗಮಾಲಂ ಹೆಸರಿನ ಆನೆ ತನ್ನ ವಿಶಿಷ್ಟ ಬಾಬ್‌ಕಟ್‌ನಿಂದಲೇ ಸುದ್ದಿಯಾಗಿದೆ. ಹೀಗಾಗಿ ಜನರು ಪ್ರೀತಿಯಿಂದ ಈ ಆನೆಯನ್ನು ಬಾಬ್‌ಕಟ್‌ ಸೆಂಗಮಾಲಂ ಎಂದು ಕರೆಯುತ್ತಾರೆ.

ನೋಡಲು ಮುದ್ದಾಗಿರುವ ಈ ಆನೆ ತನ್ನದೇ ಆದ ಅಭಿಮಾನಿಗಳನ್ನೂ ಹೊಂದಿದೆ. ಇನ್ನು ಈ ಆನೆಗೆ ವಿಶೇಷವಾಗಿ ಆರೈಕೆ ಮಾಡಲಾಗುತ್ತದೆ.

ಬೇಸಿಗೆ ಕಾಲದಲ್ಲಿ ಪ್ರತಿ ದಿನ ಕನಿಷ್ಟ ಮೂರು ಬಾರಿ ಈಕೆಯ ಕೂದಲು ತೊಳೆದು ಸ್ನಾನ ಮಾಡಿಸಲಾಗುತ್ತದೆ. ಮಳೆಗಾಲ ಹಾಗೂ ಚಳಿಗಾಲದಲ್ಲಿ ದಿನಕ್ಕೊಂದು ಬಾರಿ ಸ್ನಾನ ಮಾಡಿಸುತ್ತಾರೆ.

ಬೇಸಿಗೆ ಕಾಲದಲ್ಲಿ ಆಕೆಗೆ ಸೆಕೆಯಾಗದಂತೆ ನೋಡಿಕೊಳ್ಳಲು ಮಾವುತ  45,000ರೂ. ಮೌಲ್ಯದ ಸ್ಪೆಷಲ್ ಶವರ್ ವ್ಯವಸ್ಥೆಯನ್ನೂ ಮಾಡಿದ್ದಾರೆ

ಇನ್ನು ಐಎಫ್‌ಎಸ್‌ ಅಧಿಕಾರಿ ಸುಧಾ ರಾಮನ್‌ ತಮ್ಮ ಟ್ವಿಟರ್ ಖಾತೆಯಲ್ಲಿ ಸೆಂಗಮಾಲಂ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದು, ಮತ್ತೆ ಈಕೆ ಸೋಶಿಯಲ್ ಮಿಡಿಯಾದಲ್ಲಿ ಸೌಂಡ್ ಮಾಡಿದ್ದಾಳೆ.

2003ರಲ್ಲಿ ಸೆಂಗಮಾಲಂ ಆನೆಯನ್ನು ತಮಿಳುನಾಡಿನ ಮನ್ನಾರ್‌ಗುಡಿಯ ರಾಜಗೋಪಾಲಸ್ವಾಮಿ ದೇವಾಲಯಕಕ್ಕೆ ಕರೆ ತರಲಾಗಿತ್ತು.

ಸೆಂಗಮಾಲಂ ಆರೈಕೆ ಜವಾಬ್ದಾರಿಯನ್ನು ಎಸ್‌ ರಾಜಗೋಪಾಲ್‌ ಎಂಬ ಮಾವುತನೇ ವಹಿಸಿಕೊಂಡಿದ್ದು, ಈಕೆಯ ಹೇರ್‌ಸ್ಟೈಲ್‌ ಕೂಡಾ ಮಾಡುವುದು ಈತನೇ.

ಸೆಂಗಮಾಲಂ ನನ್ನ ಮಗಳಂತೆ, ಆಕೆಗೆ ವಿಭಿನ್ನ ಹಾಗೂ ಸುಂದರವಾಗಿ ಕಾಣಿಸಿಕೊಳ್ಳಬೇಕೆಂಬ ಆಸೆ ನನ್ನದು. ಒಂದು ಬಾರಿ ನಾನು ಆನೆಯೊಂದರ ಕೂದಲು ಬೆಳೆಸಿದ ವಿಡಿಯೋವನ್ನು ಇಂಟರ್ನೆಟ್‌ನಲ್ಲಿ ನೋಡಿದ್ದೆ ಅಂದಿನಿಂದ ಸೆಂಗಮಾಲಂ ಕೂದಲನ್ನೂ ಬೆಳೆಸಿದೆ ಎಂಬುವುದು ಮಾವುತ  ಎಸ್‌ ರಾಜಗೋಪಾಲ್‌ ಮಾತು.

ಸೆಂಗಮಾಲಂ ಬಹಳ ಸಾಧು, ಶಾಂತ ಹಾಗೂ ಸ್ನೇಹಮಯ ಆನೆಯಾಗಿದೆ. ಹೀಗಾಗೇ ಈ ಹೇರ್‌ಸ್ಟೈಲ್ ಹಾಗೂ ಸಿಂಗಾರ ಮಾಡಲು ಸಾಧ್ಯವಾಗುತ್ತದೆ ಎಂದು ಆಕೆಯ ಮಾವುತ ಹೇಳಿದ್ದಾರೆ.

loader