ಎಲೆಕ್ಟ್ರಾನಿಕ್‌ ಸಿಟಿಯ ‘ಬೆಂಗಳೂರು ಎಲಿವೇಟೆಡ್‌ ಟೋಲ್‌ ವೇ’ ಸಂಸ್ಥೆಯ ಟೋಲ್‌ ಕೇಂದ್ರವನ್ನು 2013ರಲ್ಲಿ ಅನಧಿಕೃತವಾಗಿ ಧ್ವಂಸಗೊಳಿಸಿದ್ದ ಬಗ್ಗೆ ತನಿಖೆ ನಡೆಸಲು ಗುರುವಾರದ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ.

ಬೆಂಗಳೂರು (ಫೆ.10) : ಎಲೆಕ್ಟ್ರಾನಿಕ್‌ ಸಿಟಿಯ ‘ಬೆಂಗಳೂರು ಎಲಿವೇಟೆಡ್‌ ಟೋಲ್‌ ವೇ’ ಸಂಸ್ಥೆಯ ಟೋಲ್‌ ಕೇಂದ್ರವನ್ನು 2013ರಲ್ಲಿ ಅನಧಿಕೃತವಾಗಿ ಧ್ವಂಸಗೊಳಿಸಿದ್ದ ಬಗ್ಗೆ ತನಿಖೆ ನಡೆಸಲು ಗುರುವಾರದ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಇದೇ ವೇಳೆ ಪ್ರಕರಣದ ಬಗ್ಗೆ ಸುಪ್ರೀಂ ಕೋರ್ಚ್‌ನಲ್ಲಿ ಮೇಲ್ಮನವಿ ಸಲ್ಲಿಸಲು .54.59 ಕೋಟಿ ಮೊತ್ತದ ಠೇವಣಿ ಇಡಲೂ ಒಪ್ಪಿಗೆ ನೀಡಲಾಗಿದೆ.

ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ. ಮಾಧುಸ್ವಾಮಿ, ಲಾರಿ ಸಂಘಗಳ ತಕರಾರಿನಿಂದ ಅಧಿಕಾರಿಗಳು ಅತ್ತಿಬೆಲೆ ಬಳಿಯ ಎರಡು ಟೋಲ್‌ ಸಂಗ್ರಹ ಕೇಂದ್ರಗಳನ್ನು ಏಕಾಏಕಿ ಧ್ವಂಸಗೊಳಿಸಿದ್ದರು ಎಂದು ಕಂಪನಿ ಹೈಕೋರ್ಚ್‌ ಮೆಟ್ಟಲೇರಿತ್ತು.

Bengaluru: ಬಿಬಿಎಂಪಿಯ ಅಧಿಕಾರಿ-ನೌಕರರ ಪ್ರತಿಭಟನೆ ಅರ್ಧ ತಾಸಲ್ಲೇ ಅಂತ್ಯ

ಇದು ಹಳೆಯ ಪ್ರಕರಣವಾಗಿದ್ದು, ನಿಯಮಗಳ ಪ್ರಕಾರ ಸಂಸ್ಥೆಗೆ ಇನ್ನೂ ಟೋಲ್‌ ಸಂಗ್ರಹಿಸಲು ಅವಕಾಶವಿತ್ತು. ಹೀಗಿದ್ದರೂ ನಿಯಮಬಾಹಿರವಾಗಿ ಧ್ವಂಸಗೊಳಿಸಿರುವುದು ತಪ್ಪು ಎಂದು ಹೈಕೋರ್ಚ್‌ ಆದೇಶಿಸಿದೆ. ಈ ಬಗ್ಗೆ ರಾಜ್ಯ ಸರ್ಕಾರ ಮೇಲ್ಮನವಿ ಸಲ್ಲಿಸಲು ಠೇವಣಿ ಮೊತ್ತ ಇಡಬೇಕಿರುವುದರಿಂದ ಸಂಪುಟ ಒಪ್ಪಿಗೆ ನೀಡಿದ್ದು, ನಿಯಮ ಬಾಹಿರವಾಗಿ ಧ್ವಂಸಗೊಳಿಸಿರುವ ಬಗ್ಗೆ ತನಿಖೆಗೂ ತೀರ್ಮಾನಿಸಲಾಗಿದೆ ಎಂದು ಮಾಧುಸ್ವಾಮಿ ತಿಳಿಸಿದರು.

ಈಗ ಟೋಲ್‌ ಸಂಗ್ರಹಿಸಲಾಗುತ್ತಿದೆಯೇ ಎಂಬ ಪ್ರಶ್ನೆಗೆ, ಟೋಲ್‌ ಸಂಗ್ರಹ ಕೇಂದ್ರವನ್ನೇ ಧ್ವಂಸಗೊಳಿಸಲಾಗಿದೆ. ಈಗ ಅಲ್ಲಿ ಟೋಲ್‌ ಸಂಗ್ರಹ ಕೇಂದ್ರವೇ ಇಲ್ಲ. ಹೀಗಾಗಿ ಸಂಬಂಧಪಟ್ಟಜಾಗದಲ್ಲಿ ಟೋಲ್‌ ಸಂಗ್ರಹ ಮಾಡುತ್ತಿಲ್ಲ. ಬೇರೆಡೆ ಟೋಲ್‌ ಸಂಗ್ರಹ ಎಂದಿನಂತೆ ನಡೆಯುತ್ತಿದೆ. ಟೋಲ್‌ ಸಂಗ್ರಹ ಕೇಂದ್ರ ಧ್ವಂಸವು ಅಧಿಕಾರಿಗಳ ತಪ್ಪೇ? ಅಥವಾ ಬೇರೆ ಏನಾದರೂ ಕಾರಣವಿತ್ತೆ ಎಂಬುದರ ಬಗ್ಗೆ ತನಿಖೆ ನಡೆಸಲಾಗುವುದು ಎಂದರು.

ಬೆಂಗಳೂರು ಹೈಟೆನ್ಷನ್ ವೈರ್‌ ಕೆಳಗೆ ಮನೆಕಟ್ಟಿದವರಿಗೆ ಈಗ ಟೆನ್ಶನ್!

ಗೋವಿಂದರಾಜನಗರ ಆಸ್ಪತ್ರೆಗೆ ₹24 ಕೋಟಿ

ಬೆಂಗಳೂರಿನ ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದಲ್ಲಿ ಇತ್ತೀಚೆಗೆ ಉದ್ಘಾಟನೆಯಾದ 300 ಹಾಸಿಗೆಗಳ ಮಲ್ಪಿಸ್ಪೆಷಾಲಿಟಿ ಆಸ್ಪತ್ರೆಗೆ ಅಗತ್ಯ ಉಪಕರಣ ಒದಗಿಸಲು 24 ಕೋಟಿ ರು. ಮಂಜೂರಿಗೆ ಸಚಿವ ಸಂಪುಟದಲ್ಲಿ ತೀರ್ಮಾನ ಮಾಡಲಾಗಿದೆ ಎಂದು ಮಾಧುಸ್ವಾಮಿ ತಿಳಿಸಿದರು.