ನಮ್ಮ ಮೆಟ್ರೋದ ನೇರಳೆ ಲೈನ್‌ನ ಎರಡು ವಿಸ್ತರಿತ ಬೈಯಪ್ಪನಹಳ್ಳಿ-ಕೆ.ಆರ್‌.ಪುರ (2.1 ಕಿ.ಮೀ.) ಹಾಗೂ ಕೆಂಗೇರಿ-ಚಲ್ಲಘಟ್ಟ(2 ಕಿ.ಮೀ.) ನಡುವಿನ ಮಾರ್ಗದ ವಿದ್ಯುದೀಕರಣ ಪ್ರಕ್ರಿಯೆಗಳ ತಪಾಸಣೆ ಆರಂಭಿಸಿದೆ.

ಬೆಂಗಳೂರು (ಜು.20) :  ನಮ್ಮ ಮೆಟ್ರೋದ ನೇರಳೆ ಲೈನ್‌ನ ಎರಡು ವಿಸ್ತರಿತ ಬೈಯಪ್ಪನಹಳ್ಳಿ-ಕೆ.ಆರ್‌.ಪುರ (2.1 ಕಿ.ಮೀ.) ಹಾಗೂ ಕೆಂಗೇರಿ-ಚಲ್ಲಘಟ್ಟ(2 ಕಿ.ಮೀ.) ನಡುವಿನ ಮಾರ್ಗದ ವಿದ್ಯುದೀಕರಣ ಪ್ರಕ್ರಿಯೆಗಳ ತಪಾಸಣೆ ಆರಂಭಿಸಿದೆ.

ಮುಂದಿನ ಆಗಸ್ಟ್‌ 22ರಿಂದ ಇವೆರಡು ಮಾರ್ಗದಲ್ಲಿ ಪ್ರಾಯೋಗಿಕ ಚಾಲನೆ ಆರಂಭಿಸಲು ಬೆಂಗಳೂರು ಮೆಟ್ರೋ ರೈಲ್ವೆ ನಿಗಮ(Bangalore Metro Railway Corporation) ಸಿದ್ಧತೆ ನಡೆಸುತ್ತಿದೆ. ಈ ಹಿನ್ನೆಲೆಯಲ್ಲಿ ನೂತನ ಮಾರ್ಗದ ವಯಡಕ್ಟ್ಗಳಲ್ಲಿ ಹಾದು ಹೋಗಿರುವ ವಿದ್ಯುತ್‌ ಕೇಬಲ್‌ಗಳ ತಪಾಸಣೆ ಮಾಡಲಾಗುವುದು. ಇವೆರಡು ಪೂರ್ವ-ಪಶ್ಚಿಮ ಕಾರಿಡಾರ್‌ನ ಪ್ರಾಯೋಗಿಕ ಚಾಲನೆಗೂ ಮುನ್ನ ನಡೆಸುವ ತಾಂತ್ರಿಕ ತಪಾಸಣಾ ಕಾರ್ಯ ಇದಾಗಿದೆ. ತಪಾಸಣೆ ವೇಳೆ ಕಂಡುಬರುವ ನ್ಯೂನತೆಗಳನ್ನು ಸರಿಪಡಿಸಿಕೊಂಡು ಪ್ರಾಯೋಗಿಕ ಚಾಲನೆ ಆರಂಭಿಸಲು ಗ್ರೀನ್‌ ಸಿಗ್ನಲ್‌ ನೀಡುವುದಾಗಿ ಬಿಎಂಆರ್‌ಸಿಎಲ್‌ ತಿಳಿಸಿದೆ.

ತಪಾಸಣೆ (ಟೆಸ್ಟ್‌ ಚಾರ್ಜಿಂಗ್‌) ಎಲೆಕ್ಟ್ರಿಕಲ್‌ ವ್ಯವಸ್ಥೆಯ ಸಮಗ್ರ ಪರಿಶೀಲನೆಯಾಗಿದೆ. ಮುಂದಿನ ಹಂತವಾಗಿ ಮೆಟ್ರೋ ರೈಲ್ವೆ ಸುರಕ್ಷತಾ ಆಯುಕ್ತರಿಂದ ತಪಾಸಣೆ ನಡೆಯಲಿದೆ. ಅಷ್ಟರಲ್ಲಿ ಇಡಿ ಮಾರ್ಗದ ಸಿಗ್ನಲಿಂಗ್‌ ವ್ಯವಸ್ಥೆಯನ್ನು ಮರು ನಿಗದಿ ಮಾಡಲಾಗುವುದು ಎಂದು ಮೆಟ್ರೋ ಅಧಿಕಾರಿಗಳು ತಿಳಿಸಿದರು.

ಟೆಕ್ ವೃತ್ತಿಪರರಿಗೆ ಸಂತಸದ ಸುದ್ದಿ, ವೈಟ್‌ಫೀಲ್ಡ್‌-ಚಲ್ಲಘಟ್ಟ ನಮ್ಮ ಮೆಟ್ರೋ ಸೇವೆ ಆಗಸ್ಟ್‌ನಲ್ಲಿ ಆರಂಭ