FKCCI: ಕೈಗಾರಿಕಾ ಬಂದ್‌ಗೆ ಕೈಗಾರಿಕಾ ಸಂಘಗಳಲ್ಲೇ ಭಿನ್ನಮತ
ರಾಜ್ಯದಲ್ಲಿ ವಿದ್ಯುತ್ ಶುಲ್ಕ ಹೆಚ್ಚಳದ ವಿರುದ್ಧ ಜೂ.22 ರಂದು ರಾಜ್ಯಾದ್ಯಂತ ಕರೆ ನೀಡಿರುವ ಕೈಗಾರಿಕೆಗಳ ಬಂದ್‌ಗೆ ಕೈಗಾರಿಕಾ ಸಂಘಗಳ ನಡುವೆಯೇ ಒಮ್ಮತ ಮೂಡಿಲ್ಲ. ಹುಬ್ಬಳ್ಳಿ ಮೂಲದ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯು (ಕೆಸಿಸಿಐ) ಬಂದ್‌ಗೆ ಕರೆ ನೀಡಿದ್ದರೆ ಎಫ್‌ಕೆಸಿಸಿಐ ಹಾಗೂ ಕಾಸಿಯಾ ಬಂದ್‌ಗೆ ಬೆಂಬಲಿಸುವುದಿಲ್ಲ ಎಂದು ಘೋಷಿಸಿವೆ.
ಬೆಂಗಳೂರು (ಜೂ.20) ರಾಜ್ಯದಲ್ಲಿ ವಿದ್ಯುತ್ ಶುಲ್ಕ ಹೆಚ್ಚಳದ ವಿರುದ್ಧ ಜೂ.22 ರಂದು ರಾಜ್ಯಾದ್ಯಂತ ಕರೆ ನೀಡಿರುವ ಕೈಗಾರಿಕೆಗಳ ಬಂದ್‌ಗೆ ಕೈಗಾರಿಕಾ ಸಂಘಗಳ ನಡುವೆಯೇ ಒಮ್ಮತ ಮೂಡಿಲ್ಲ. ಹುಬ್ಬಳ್ಳಿ ಮೂಲದ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯು (ಕೆಸಿಸಿಐ) ಬಂದ್‌ಗೆ ಕರೆ ನೀಡಿದ್ದರೆ ಎಫ್‌ಕೆಸಿಸಿಐ ಹಾಗೂ ಕಾಸಿಯಾ ಬಂದ್‌ಗೆ ಬೆಂಬಲಿಸುವುದಿಲ್ಲ ಎಂದು ಘೋಷಿಸಿವೆ.
ಪರಿಣಾಮ, ಮಾ.22 ರಂದು ನಡೆಯಲಿರುವ ಕೈಗಾರಿಕಾ ಬಂದ್ ಯಶಸ್ವಿಯಾಗಲಿದೆಯೇ ಅಥವಾ ವಿಫಲವಾಗಲಿದೆಯೇ ಎಂಬ ಬಗ್ಗೆ ಕುತೂಹಲ ಮೂಡಿದೆ.
ವಿದ್ಯುತ್ ದುಬಾರಿ ವಿರುದ್ಧ 22ಕ್ಕೆ ಕೈಗಾರಿಕೆ ಬಂದ್‌ಗೆ ಕರೆ ನೀಡಿದ ಕೆಸಿಸಿಐ!
ಬಂದ್ ಕರೆ ಬೆನ್ನಲ್ಲೇ ಆಯಾ ಎಸ್ಕಾಂಗಳ ಮುಖ್ಯಸ್ಥರು ಹಾಗೂ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಗೌರವ ಗುಪ್ತಾ ಅವರು ವಿವಿಧ ಕೈಗಾರಿಕಾ ಸಂಘಗಳೊಂದಿಗೆ ಸೋಮವಾರ ಮಾತುಕತೆ ನಡೆಸಿ ಮನವೊಲಿಸುವ ಪ್ರಯತ್ನ ನಡೆಸಿದರು. ಈ ಹಿನ್ನೆಲೆಯಲ್ಲಿ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾ ಸಂಸ್ಥೆ (ಎಫ್‌ಕೆಸಿಸಿಐ) ಹಾಗೂ ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆಗಳ ಸಂಘವು (ಕಾಸಿಯಾ) ಜೂ.22 ರಂದು ಕರೆ ನೀಡಿರುವ ಬಂದ್‌ಗೆ ನಮ್ಮ ಬೆಂಬಲವಿಲ್ಲ. ಆದರೆ ನಮ್ಮ ಸಮಸ್ಯೆಗಳಿಗೆ ಬಗೆಹರಿಸುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದೇವೆ. ಮನವಿಗಳನ್ನು ಈಡೇರಿಸುವಂತೆ ಆಗ್ರಹಿಸುತ್ತೇವೆ ಎಂದು ಸ್ಪಷ್ಟಪಡಿಸಿದ್ದಾರೆ.
24 ಸಂಘಗಳಿಂದ ಬೆಂಬಲ: ಕೆಸಿಸಿಐ
ಕೆಸಿಸಿಐ ಅಧ್ಯಕ್ಷ ಸಂದೀಪ್ ಮಾತನಾಡಿ, ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳು ನಮ್ಮೊಂದಿಗೆ ಚರ್ಚೆ ನಡೆಸಿದ್ದರೂ ನಮ್ಮ ಬೇಡಿಕೆ ಈಡೇರಿಸುವ ಭರವಸೆ ನೀಡಿಲ್ಲ. ಎಫ್‌ಕೆಸಿಸಿಐ ಹಾಗೂ ಕಾಸಿಯಾ ಬಂದ್‌ಗೆ ಬೆಂಬಲ ನೀಡಿಲ್ಲ. ಆದರೆ ನಮ್ಮ ಅಡಿ ಬರುವ 23-24 ಸಂಘಗಳು ಈಗಾಗಲೇ ಬಂದ್‌ಗೆ ಬೆಂಬಲ ಸೂಚಿಸಿವೆ. ಹೀಗಾಗಿ ಬಂದ್ ಮುಂದುವರೆಸಲಿದ್ದೇವೆ ಎಂದು ಹೇಳಿದರು.
ಮನವೊಲಿಕೆ ಯತ್ನಕ್ಕೆ ಮಿಶ್ರ ಫಲ:
ಕೈಗಾರಿಕಾ ಬಂದ್‌ಗೆ ಕರೆ ನೀಡಿರುವ ಹಿನ್ನೆಲೆಯಲ್ಲಿ ಗುರುವಾರ ಬೆಳಗ್ಗೆ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಗೌರವ ಗುಪ್ತಾ ಅವರು ಕೆಸಿಸಿಐ ಅಧ್ಯಕ್ಷರು ಹಾಗೂ ಪ್ರಧಾನ ಕಾರ್ಯದರ್ಶಿಗಳೊಂದಿಗೆ ದೂರವಾಣಿ ಕರೆ ನಡೆಸಿ ಮಾತುಕತೆ ನಡೆಸಿದರು. ಈ ವೇಳೆ ಶುಲ್ಕ ಬಾಕಿ ಪಾವತಿಗೆ ಸೂಕ್ತ ಸಮಯಾವಕಾಶ ನೀಡಲಾಗುವುದು. ಶುಲ್ಕ ಹೆಚ್ಚಳ ಸರ್ಕಾರದ ಕೈಯಲ್ಲಿ ಇಲ್ಲದಿರುವುದರಿಂದ ಬಂದ್ ಕೈ ಬಿಟ್ಟು ಸರ್ಕಾರದೊಂದಿಗೆ ಚರ್ಚೆಗೆ ಬನ್ನಿ ಎಂದು ಮನವಿ ಮಾಡಿದರು. ಆದರೆ, ಕೆಸಿಸಿಐ ಬಂದ್ ಕೈ ಬಿಡಲು ನಿರಾಕರಿಸಿದೆ.
ವಿದ್ಯುತ್ ದರ ಏರಿಕೆ ವಾಪಸ್ ಸಾಧ್ಯವಿಲ್ಲ: ಇಂಧನ ಸಚಿವ ಕೆ.ಜೆ.ಜಾರ್ಜ್ ಸ್ಪಷ್ಟನೆ
ಉಳಿದಂತೆ ಕಾಸಿಯಾ ಹಾಗೂ ಎಫ್‌ಕೆಸಿಸಿಐ ಜತೆ ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಮಹಾಂತೇಶ್ ಬಿಳಗಿ ಖುದ್ದು ತೆರಳಿ ಸಭೆ ನಡೆಸಿದ್ದಾರೆ. ಬಳಿಕ ಸುದ್ದಿಗೋಷ್ಠಿ ನಡೆಸಿರುವ ಕಾಸಿಯಾ ಹಾಗೂ ಎಫ್‌ಕೆಸಿಸಿಐ ಅಧ್ಯಕ್ಷರು ಬಂದ್‌ಗೆ ಬೆಂಬಲಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಹೀಗಾಗಿ ಸರ್ಕಾರದ ಪ್ರಯತ್ನಕ್ಕೆ ಮಿಶ್ರ ಫಲ ಸಿಕ್ಕಂತಾಗಿದೆ.