ಬೆಂಗಳೂರು (ಅ.28):  ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್‌ ಗುತ್ತಿಗೆದಾರರ ಸಂಘದ ಅಧ್ಯಕ್ಷ ಡಾ.ಎಸ್‌.ಎಂ.ಕೃಷ್ಣ ಹೃದಯಾಘಾತದಿಂದ ಮಂಗಳವಾರ ನಿಧನರಾದರು.

ಶ್ವಾಸಕೋಶ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಅವರಿಗೆ ಕಾಮಾಕ್ಷಿಪಾಳ್ಯದ ಮನೆಯಲ್ಲಿ ಮಂಗಳವಾರ ಬೆಳಗ್ಗೆ 11.30ರ ಸಮಯದಲ್ಲಿ ಎದೆನೋವು ಕಾಣಿಸಿಕೊಂಡಿದೆ. ತಕ್ಷಣ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಮಧ್ಯಾಹ್ನ 1 ಗಂಟೆ ಸಮಯಕ್ಕೆ ನಿಧನರಾದರು. ಪತ್ನಿ ಮಂಜುಳಾ, ಪುತ್ರರಾದ ಶ್ರೀನಿವಾಸ್‌ ಕೃಷ್ಣ, ರಾಘವೇಂದ್ರ ಕೃಷ್ಣ ಮತ್ತು ವಿಶ್ವನಾಥ ಕೃಷ್ಣ ಅವರನ್ನು ಅಗಲಿದ್ದಾರೆ.

ಕೊಪ್ಪಳ: ಸ್ನೇಹಿತನನ್ನು ಪ್ರೀತಿಸು ಎಂದು ಪೀಡಿಸಿದ್ದಕ್ಕೆ ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ..

ಮೃತರ ಅಂತ್ಯ ಕ್ರಿಯೆಯನ್ನು ನೆಲಮಂಗಲ ತಾಲೂಕಿನ ಜೋಗಿಪಾಳ್ಯ ಬಳಿಯ ಶ್ರೀನಿವಾಸಪುರ ಗ್ರಾಮದ ಬುಧವಾರ ಮಧ್ಯಾಹ್ನ 1 ಗಂಟೆಗೆ ನಡೆಯಲಿದೆ ಎಂದು ಮೃತರ ಸಂಬಂಧಿಕರು ತಿಳಿಸಿದ್ದಾರೆ. ಎಲ್ಲ ಎಸ್ಕಾಂ ಕಂಪೆನಿಗಳಲ್ಲಿ 5 ಲಕ್ಷದ ವರೆಗಿನ ವಿದ್ಯುತ್‌ ಕಾಮಗಾರಿಗಳನ್ನು ಅನುಮತಿ ಪಡೆದ ವಿದ್ಯುತ್‌ ಗುತ್ತಿಗೆದಾರರಿಗೆ ನೀಡಬೇಕು ಎಂದು ಇತ್ತೀಚೆಗೆ ರಾಜ್ಯಾಧ್ಯಂತ ಹೋರಾಟ ನಡೆಸಿದ್ದರು. ಇದಕ್ಕೆ ಸ್ಪಂದಿಸಿದ್ದ ಸರ್ಕಾರ ಶೀಘ್ರದಲ್ಲಿ ಈ ಕುರಿತು ಆದೇಶ ಹೊರಡಿಸುವುದಾಗಿ ತಿಳಿಸಿತ್ತು.